Advertisement

2.4 ಶತಕೋಟಿ ಪೌಂಡ್‌ ಗಳಷ್ಟು ನಷ್ಟ ಅನುಭವಿಸಿದ ಬ್ರಿಟನ್‌ ನ ಹೀಥ್ರೂ ಏರ್ ಪೋರ್ಟ್..!

07:45 PM Apr 30, 2021 | Team Udayavani |

ಬ್ರಿಟನ್ : ಮಾರಕ ಸೋಂಕು ಕೋವಿಡ್ ನ ಕಾರಣದಿಂದಾಗಿ ಇಡೀ ವಿಶ್ವವೇ ತತ್ತರಿಸಿ ಹೋಗಿದೆ ಎನ್ನುವುದರಲ್ಲಿ ಅನುಮಾನಪಡಬೇಕಾಗಿಲ್ಲ. ಬಹುತೇಕ ವಿದೇಶಿ ವಹಿವಾಟುಗಳಂತೂ ಅಡಿಮೇಲಾಗಿವೆ.

Advertisement

ಬ್ರಿಟನ್‌ ನ ಅತ್ಯಂತ ದೊಡ್ಡ ವಿಮಾನ ನಿಲ್ದಾಣವಾದ ಹೀಥ್ರೂ,  ಕೋವಿಡ್ ಸಾಂಕ್ರಾಮಿಕ ಸೋಂಕಿನ ಪ್ರಾರಂಭದಿಂದೀಚೆಗೆ ಮೊದಲ ತ್ರೈಮಾಸಿಕದಲ್ಲಿ 329 ಮಿಲಿಯನ್ ಪೌಂಡ್‌ಗಳ (9459 ಮಿಲಿಯನ್) ನಷ್ಟ ಹೊಂದಿದ್ದು, ಒಟ್ಟು 2.4 ಶತಕೋಟಿ ಪೌಂಡ್‌ ಗಳಷ್ಟು ನಷ್ಟವನ್ನು ಅನುಭವಿಸಿದೆ ಎಂದು ವರದಿಯಾಗಿದೆ.

ಮಾರ್ಚ್ 31 ರ ತನಕ ಮೂರು ತಿಂಗಳ ಅವಧಿಯಲ್ಲಿ ಕೇವಲ 1.7 ಮಿಲಿಯನ್ ಪ್ರಯಾಣಿಕರು ಲಂಡನ್ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ್ದಾರೆ, ಇದು 2019 ರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇಕಡಾ 91 ರಷ್ಟು ಕಡಿಮೆಯಾಗಿದೆ.

ಓದಿ : ಹೆಚ್ಚುವರಿ 1 ಕೋಟಿ ಡೋಸ್‌ ಲಸಿಕೆ ಖರೀದಿಗೆ ಟಾಸ್ಕ್ ಪೋರ್ಸ್ ಸಭೆಯಲ್ಲಿ ಅನುಮೋದನೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬ್ರಿಟನ್ ನ ಏವಿಯೇಶನ್ ಇಂಡಸ್ಟ್ರಿ ಕೋವಿಡ್ 19 ನಿರ್ಬಂಧಗಳನ್ನು ಸಡಿಲಿಸಿದ ನಂತರ ಮೇ ಅಂತ್ಯದಲ್ಲಿ ವಿಮಾನ ಹಾರಾಟವು ಪುನರಾರಂಭವಾಗುವ ಸಾಧ್ಯತೆ ಇದೆ ಎಂದು ಆಶಾಭಾವನೆಯನ್ನು ವ್ಯಕ್ತ ಪಡಿಸಿದರೂ ಕೂಡ, ಕೋವಿಡ್ ಬಿಕ್ಕಟ್ಟಿನ ಸಮಸ್ಯೆಯ ಕಾರಣದಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಜನರು ಪ್ರಯಾಣ ಬೆಳೆಸಬಹುದೇ ಎಂಬ ಅನಿಶ್ಚಿತತೆ  ಉಳಿದಿದೆ.

Advertisement

ಇನ್ನು, ಈ ಬಗ್ಗೆ ಬ್ರಿಟಿಷ್ ಸಾರಿಗೆ ಕಾರ್ಯದರ್ಶಿ ಗ್ರಾಂಟ್ ಶಾಪ್ಸ್, ಮುಂದಿನ ವಾರ ಜಿ7 ಸಾರಿಗೆ ಸಚಿವರ ಸಭೆ ಕರೆಯುವುದಾಗಿ ಹೇಳಿದ್ದು, ಬ್ರಿಟನ್‌ ನ ಬೇಸಿಗೆಯ ಆರ್ಥಿಕ ಚೇತರಿಕೆ ಮೇ 17 ರಿಂದ ಪುನರಾರಂಭವಾಗುವ ಪ್ರಯಾಣದ ಮೇಲೆ ಅವಲಂಬಿತವಾಗಿದೆ ಎಂದು ಹೀಥ್ರೂ ಪುನರುಚ್ಚರಿಸಿದೆ.

ಬೇಡಿಕೆ ಮರಳಿದಂತೆ ಸ್ಕೇಲ್ ಅಪ್ ಕಾರ್ಯಾಚರಣೆಗಳಿಗೆ ಸಿದ್ಧವಾಗಲಿದೆ. ಆದರೆ ಪಾಸ್‌ ಪೋರ್ಟ್ ಚೆಕ್‌ ಗಳಲ್ಲಿ ಪ್ರಯಾಣಿಕರನ್ನು ತಲುಪಲು ದೀರ್ಘ ಸಮಯದ ಕಾಯುವಿಕೆಯನ್ನು ತಡೆಯುವ ಯುಕೆ ಬಾರ್ಡರ್ ಫೋರ್ಸ್‌ನ ಸಾಮರ್ಥ್ಯದ ಬಗ್ಗೆ ಪದೇ ಪದೇ ಕಳವಳ ವ್ಯಕ್ತಪಡಿಸಿದೆ.

ಇನ್ನು,  ಕೋವಿಡ್ ಕಾರಣದಿಂದಾಗಿ ಉಂಟಾದ 3 ಬಿಲಿಯನ್ ಪೌಂಡ್‌ ಗಳ  ನಷ್ಟವನ್ನು  ನೀಗಿಸಲು ಹೀಥ್ರೂ ವಿಮಾನಯಾನ ಸಂಸ್ಥೆ ಪ್ರತಿ ಪ್ರಯಾಣಿಕರಿಗೆ 30 ಪೆನ್ಸ್(28 ರೂಪಾಯಿ 57 ಪೈಸೆ) ಹೆಚ್ಚು ಶುಲ್ಕ ವಿಧಿಸಬಹುದು ಎಂದು ಬ್ರಿಟನ್‌ನ ಏವಿಯೇಷನ್ ರೆಗ್ಯುಲೇಟರ್ ತಿಳಿಸಿದೆ.

ಓದಿ :  ಕೋವಿಡ್ ಬಿಕ್ಕಟ್ಟು : ಭಾರತದ ಪರಿಸ್ಥಿತಿ ಎಲ್ಲಿ ಬೇಕಾದರೂ ಆಗಬಹುದು :  WHO ಎಚ್ಚರಿಕೆ

Advertisement

Udayavani is now on Telegram. Click here to join our channel and stay updated with the latest news.

Next