Advertisement

London; ಅನಂತ್‌ ಅಂಬಾನಿ ವಿವಾಹೋತ್ತರ ಸಮಾರಂಭ?

01:10 AM Jul 15, 2024 | Team Udayavani |

ಮುಂಬಯಿ: ವಿವಾಹ ಪೂರ್ವದ ಸರಣಿ ಸಮಾರಂಭಗಳು, ಶುಭ ವಿವಾಹ, ಶುಭ ಆಶೀರ್ವಾದ ಎಂದೆಲ್ಲ ಕಳೆದ ಕೆಲವು ತಿಂಗ ಳಿಂದಲೂ ಮುಕೇಶ್‌ ಅಂಬಾನಿ ಪುತ್ರ ಅನಂತ್‌ ಅಂಬಾನಿ- ರಾಧಿಕಾ ಮದುವೆ ಸಮಾರಂಭ ವಿಶ್ವದ ಚಿತ್ತ ಸೆಳೆದಿದೆ. ರವಿವಾರ ಆರತಕ್ಷತೆಯೊಂದಿಗೆ ಈ ಸಮಾರಂಭ ಮುಕ್ತಾಯವಾಗುತ್ತದೆ ಎನ್ನು ವಾಗಲೇ ಈಗ ವಿವಾಹೋತ್ತರ ಸಮಾ ರಂಭಗಳು ಲಂಡನ್‌ನಲ್ಲಿ ನಡೆಯಲಿವೆ ಎಂದು ತಿಳಿದು ಬಂದಿದೆ. ಅಂಬಾನಿ ಕುಟುಂಬ ಇದೇ ವಾರ ಲಂಡನ್‌ಗೆ ತೆರಳಲಿದ್ದು, ಅಲ್ಲಿ ಸರಣಿ ಸಮಾರಂಭಗಳನ್ನು ನಡೆ ಸಲು ಕುಟುಂಬ ಸಿದ್ಧತೆ ನಡೆಸಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

ಮಾ.1ರಿಂದ 3ರವರೆಗೆ ಗುಜರಾತ್‌ನ ಜಾಮ್‌ನಗರದಲ್ಲಿ 3 ದಿನಗಳ ಕಾಲ ವಿವಾಹ ಪೂರ್ವ ಸಮಾರಂಭಗಳನ್ನು ನೆರವೇರಿಸಲಾಗಿತ್ತು. ಆ ಬಳಿಕ ಜೂನ್‌ನಲ್ಲಿ ಇಟಲಿ ಮತ್ತು ಫ್ರ್ಯಾನ್ಸ್‌ನಲ್ಲಿ ಕ್ರೂಸ್‌ ಪಾರ್ಟಿಯನ್ನು ನಡೆಸಲಾಗಿತ್ತು. ಬಳಿಕ ಮುಂಬಯಿಯ ಜಿಯೋ ಕನ್ವೆನÒನ್‌ ಹಾಲ್‌ನಲ್ಲಿ ಮದುವೆ ಸಮಾರಂಭಗಳು ಅದ್ದೂರಿಯಾಗಿ ನಡೆದಿದ್ದವು. ಶನಿವಾರ ಮದುವೆಯ ಶುಭಾಶೀರ್ವಾದ ಕಾರ್ಯಕ್ರಮ ನಡೆದಿದ್ದು, ಅದರಲ್ಲಿ ಪ್ರಧಾನಿ ಮೋದಿ ಕೂಡ ಭಾಗವಹಿಸಿ ವಧು-ವರರನ್ನು ಆಶೀರ್ವದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next