Advertisement

ನಸುಗೆಂಪು ಬಣ್ಣಕ್ಕೆ ತಿರುಗಿದ ಲೋನಾರ್‌ ಲೇಕ್‌

07:50 AM Jun 12, 2020 | mahesh |

ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿರುವ ಆಕಾಶಕಾಯ ನಿರ್ಮಿತ ಸರೋವರವಾದ ಲೋನಾರ್‌ ಲೇಕ್‌ನಲ್ಲಿನ ನೀರಿನ ಬಣ್ಣ ರಾತ್ರೋರಾತ್ರಿ ನಸುಗೆಂಪು ಬಣ್ಣಕ್ಕೆ ತಿರುಗಿದೆ. ಮೊದಲ ಬಾರಿಗೆ ಈ ಸರೋವರದ ಬಣ್ಣ ಬದಲಾಗಿದ್ದು ವಿಜ್ಞಾನಿಗಳ ಕುತೂಹಲವನ್ನು ಕೆರಳಿಸಿದೆ.

Advertisement

ಏನಿದರ ಹೆಗ್ಗಳಿಕೆ?
“ಸೋಡಾ ಲೇಕ್‌’ ಎಂಬ ಹೆಸರನ್ನೂ ಹೊಂದಿರುವ ಲೋನಾರ್‌ಗೆ ವಿಶ್ವದ ಅತಿ ದೊಡ್ಡ ಆಕಾಶಕಾಯ ನಿರ್ಮಿತ ಸರೋವರ ಎಂಬ ಹೆಗ್ಗಳಿಕೆಯಿದೆ. ಸುಮಾರು 50,000 ವರ್ಷಗಳ ಹಿಂದೆ, ಗಂಟೆಗೆ ಸುಮಾರು 90,000 ಕಿ.ಮೀ. ಸಾಗಿಬರುತ್ತಿದ್ದ ಆಕಾಶಕಾಯವು ಈ ಭೂಮಿಗೆ ಢಿಕ್ಕಿ ಹೊಡೆದ ಪರಿಣಾಮ, 1.8 ಕಿ.ಮೀ.ವರೆಗೆ ಬಿದ್ದಿರುವ ಕುಳಿಯಲ್ಲಿ 1.2 ಕಿ.ಮೀ.ವರೆಗೆ ನೀರಿದೆ. ಇದನ್ನು ಜಿಯೋ ಹೆರಿಟೇಜ್‌ ಸ್ಥಳವೆಂದು ಘೋಷಿಸಲಾಗಿದೆ.

ಸಂಶೋಧನೆ  ಅನಂತರವಷ್ಟೇ ಸತ್ಯ
ಇನ್ನೂ ಕೆಲವು ವಿಜ್ಞಾನಿಗಳು, ಕ್ಷಾರೀಯ ನೀರಿನಲ್ಲಿ ಸಾಮಾನ್ಯವಾಗಿ ಹಸುರು ಬಣ್ಣದಲ್ಲಿರುವ ಡ್ಯುನಾಲಿ ಯೇನ ಸ್ಯಲಿನ್‌ ಎಂಬ ಸೂಕ್ಷ್ಮಾಣುಗಳು, ನೀರಿನ ಕ್ಷಾರ ಗುಣ ಅತಿಯಾದಾಗ ಕೆಂಪಾಗಿ ಬದಲಾವಣೆಯಾಗುತ್ತದೆ. ಇನ್ನು ಕೆಲವು ಸಂಶೋಧಕರ ಪ್ರಕಾರ ಕ್ಷಾರೀಯ ನೀರಿನಲ್ಲಿ ಉತ್ಪತ್ತಿಯಾಗುವ ವಿಶೇಷ ಬಗೆಯ ಶಿಲೀಂಧ್ರಗಳು ಇಡೀ ಸರೋವರ ಹರಡಿದ್ದಾಗ ಅಲ್ಲಿನ ನೀರು ಹೀಗೆ ಕೆಂಪಾಗಿ ಕಾಣಿಸುತ್ತದೆ ಎಂದಿದ್ದಾರೆ. ಆದರೆ, ಸೂಕ್ತ ಸಂಶೋಧನೆಯ ಅನಂತರವಷ್ಟೇ ಸತ್ಯ ಹೊರಬೀಳುತ್ತದೆ.

ಬ್ಯಾಕ್ಟೀರಿಯಾಗಳು ಕಾರಣ?
ಆಕಾಶಕಾಯ ನಿರ್ಮಿತ ಸರೋವರಗಳಲ್ಲಿ ನೀರು ಅತ್ಯಂತ ಕ್ಷಾರೀಯ ಗುಣ ಹೊಂದಿರುತ್ತದೆ. ಲೋನಾರ್‌ ಲೇಕ್‌ನ ನೀರೂ ಕೂಡ ಕ್ಷಾರವಾಗಿದ್ದು, ಅದರ ಪಿಎಚ್‌ ವ್ಯಾಲ್ಯೂ 10.5ರಷ್ಟಿದೆ. ಇಂಥ ನೀರಿನಲ್ಲಿ ಹ್ಯಾಲೋಬ್ಯಾಕ್ಟೀರಿಯಾಯೇಸಿ ಎಂಬ ವಿಶಿಷ್ಟ ಜಾತಿಯ ಸೂಕ್ಷ್ಮಾಣುಜೀವಿಗಳು ಉತ್ಪಾದನೆಯಾಗುತ್ತವೆ. ಇವು, ಉತ್ಪಾದಿಸುವ ಕೆಂಪು ಬಣ್ಣದ ದ್ರವ್ಯ ಸೂರ್ಯನ ಬೆಳಕನ್ನು ಹೀರಿ ಅದನ್ನು ಶಕ್ತಿಯನ್ನಾಗಿ ಪರಿವರ್ತಿಸಿ ಸೂಕ್ಷ್ಮಾಣುಜೀವಿಗಳಿಗೆ ಸರಬರಾಜು ಮಾಡುತ್ತವೆ. ಸರೋವರದ ತುಂಬೆಲ್ಲ ಇವು ಹರಡಿದಾಗ ಇಡೀ ಸರೋವರದ ನೀರು ಕೆಂಪಾಗಿ ಕಾಣಿಸುತ್ತದೆ ಎನ್ನುತ್ತಿದ್ದಾರೆ ಕೆಲ ವಿಜ್ಞಾನಿಗಳು.

1.8 ಕಿ.ಮೀ. ಕುಳಿಯ ಅಗಲ
1.2 ಕಿ.ಮೀ. ನೀರಿನ ವ್ಯಾಪ್ತಿ
50 ಸಾವಿರ ವರ್ಷ. ಸರೋವರದ ವಯಸ್ಸಿನ ಬಗ್ಗೆ ವಿಜ್ಞಾನಿಗಳ ಅಂದಾಜು
10.5 ಸರೋವರದ ನೀರಿನ ಪಿಎಚ್‌ ವ್ಯಾಲ್ಯೂ

Advertisement
Advertisement

Udayavani is now on Telegram. Click here to join our channel and stay updated with the latest news.

Next