Advertisement
ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಟಿಎಂಸಿಯ ಮಹುವಾ ಮೊಯಿತ್ರಾ, ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸಹಿತ ಹಲವು ಘಟಾನುಘಟಿಗಳ ಹಣೆಬರಹ ಈ ಹಂತದಲ್ಲಿ ನಿರ್ಧಾರವಾಗಲಿದೆ. 4ನೇ ಹಂತ ಮುಗಿಯುತ್ತಿದ್ದಂತೆ, ದೇಶದ ಒಟ್ಟು 379 ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಂತಾಗಲಿದೆ.
Related Articles
Advertisement
370ನೇ ವಿಧಿ ರದ್ದು ಬಳಿಕ ಕಾಶ್ಮೀರದ ಮೊದಲ ಚುನಾವಣೆಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದ ಶ್ರೀನಗರ ಲೋಕಸಭಾ ಕ್ಷೇತ್ರಕ್ಕೂ ಸೋಮವಾರವೇ ಚುನಾವಣೆ ನಡೆಯಲಿದ್ದು, 24 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಂವಿಧಾನದ 370ನೇ ವಿಧಿ ರದ್ದತಿ ಬಳಿಕ ಕಣಿವೆಯಲ್ಲಿ ನಡೆಯುತ್ತಿರುವ ಮೊದಲ ಪ್ರಮುಖ ಚುನಾವಣೆ ಇದಾಗಿದೆ. ಎನ್‌ಸಿ ಈ ಕ್ಷೇತ್ರ ಶಿಯಾ ನಾಯಕ ಅಗಾ ಸೈಯದ್ ರೂಹುಲ್ಲಾ ಮೆಹಿª ಎಂಬವರನ್ನು ಕಣಕ್ಕಿಳಿಸಿದರೆ, ಪಿಡಿಪಿಯಿಂದ ಯುವ ನಾಯಕ ವಹೀದ್ ಪಾರಾ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಇಲ್ಲಿ ಯಾರಿಗೂ ಟಿಕೆಟ್ ನೀಡಿಲ್ಲ. ಒಡಿಶಾ, ಆಂಧ್ರದಲ್ಲಿ ಇಂದು ವಿಧಾನಸಭೆ ಚುನಾವಣೆ ಅಮರಾವತಿ/ಭುವನೇಶ್ವರ: ಲೋಕಸಭೆ ಚುನಾವ ಣೆಯ 4ನೇ ಹಂತದ ಮತದಾನದ ಜತೆಗೇ ಆಂಧ್ರ ಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆ ಗಳೂ ಸೋಮವಾರ ನಡೆಯಲಿದೆ. ಪ್ರಧಾನಿ ಮೋದಿ, ಅಮಿತ್ ಶಾ, ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಮುಂತಾದ ಘಟಾನು ಘಟಿಗಳ ಅಬ್ಬರದ ಪ್ರಚಾರಕ್ಕೆ ತೆರೆಬಿದ್ದಿದ್ದು, ಸೋಮ ವಾರ 175 ಸದಸ್ಯ ಬಲದ ಆಂಧ್ರಪ್ರದೇಶಕ್ಕೆ ಒಂದೇ ಹಂತದಲ್ಲಿ ಹಾಗೂ ಒಡಿಶಾದಲ್ಲಿನ 147 ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ 28 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇದಾದ ಬಳಿಕ ಒಡಿಶಾದಲ್ಲಿ ಇನ್ನೂ 3 ಹಂತಗಳ ಚುನಾವಣೆ ನಡೆಯಲಿದೆ.
ವೈಎಸ್ಸಾರ್‌ಸಿಪಿ ಅಧ್ಯಕ್ಷ, ಸಿಎಂ ಜಗನ್ ರೆಡ್ಡಿ (ಪುಲಿವೆಂದುಲ), ಟಿಡಿಪಿ ನಾಯಕ ಎನ್.ಚಂದ್ರಬಾಬು ನಾಯ್ಡು(ಕುಪ್ಪಂ), ಜನಸೇನಾ ಅಧ್ಯಕ್ಷ, ನಟ ಪವನ್ ಕಲ್ಯಾಣ್ (ಫೀಥಾಪುರಂ) ಮತ್ತಿತರರು ಆಂಧ್ರ ವಿಧಾನಸಭೆ ಚುನಾವಣ ಕಣದಲ್ಲಿರುವ ಪ್ರಮುಖರು. ವೈಎಸ್ಸಾರ್ ಕಾಂಗ್ರೆಸ್ ಪಕ್ಷವು ಎಲ್ಲ 175 ಅಸೆಂಬ್ಲಿ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಎನ್‌ಡಿಎ ಮಿತ್ರಪಕ್ಷಗಳಾದ ಟಿಡಿಪಿ 144ರಲ್ಲಿ, ಬಿಜೆಪಿ 10ರಲ್ಲಿ, ಜನಸೇನಾ ಪಕ್ಷವು 21ರಲ್ಲಿ ಸ್ಪರ್ಧಿಸುತ್ತಿವೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ವೈಎಸ್ಸಾರ್ ಕಾಂಗ್ರೆಸ್ ಪಕ್ಷವು 151ರಲ್ಲಿ ಗೆಲುವು ಸಾಧಿಸಿದರೆ, ಟಿಡಿಪಿ 23ರಲ್ಲಿ ಮತ್ತು ಜನಸೇನಾ 1ರಲ್ಲಿ ಜಯ ಗಳಿಸಿತ್ತು. ಚುನಾವಣೆ ಸುಗಮವಾಗಿ ಸಾಗಲಿ ಎಂಬ ಕಾರಣಕ್ಕೆ ಚುನಾವಣ ಆಯೋಗವು ಕರ್ನಾಟಕದ 3,500 ಪೊಲೀಸರು ಸೇರಿದಂತೆ ಒಟ್ಟು 1.06 ಲಕ್ಷ ಭದ್ರತಾ ಸಿಬಂದಿಯನ್ನು ಭದ್ರತೆಗಾಗಿ ನಿಯೋಜಿಸಿದೆ. ಒಟ್ಟು 4.14 ಕೋಟಿ ಮತದಾರರಿದ್ದು, 2,387 ಅಭ್ಯರ್ಥಿಗಳ ಭವಿಷ್ಯವನ್ನು ಬರೆಯಲಿದ್ದಾರೆ. ಇನ್ನು, ಒಡಿಶಾದ 28 ಕ್ಷೇತ್ರಗಳಿಗೆ 243 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಬಿಜೆಡಿ, ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಒಟ್ಟು 62.87 ಲಕ್ಷ ಮತದಾರರು ಈ ಅಭ್ಯರ್ಥಿಗಳ ಭವಿಷ್ಯವನ್ನು ಬರೆಯಲಿದ್ದಾರೆ. ಸಿಎಂ ನವೀನ್ ಪಟ್ನಾಯಕ್ ಸತತ 6ನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ತವಕದಲ್ಲಿದ್ದರೆ, ಒಡಿಶಾದಲ್ಲಿ ಪಟ್ನಾಯಕ್ ಆಡಳಿತವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲ ಪ್ರಯತ್ನಗಳನ್ನೂ ನಡೆಸಿದೆ.