Advertisement

Election: ಬಿಜೆಪಿಯಲ್ಲಿ ತಲ್ಲಣ; ನಾಯಕತ್ವದ ಮೇಲೆ ರಿಸಲ್ಟ್ ಏಟು ಬೀಳುವ ಭಯ

11:20 PM Jun 04, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆಯ ಫ‌ಲಿತಾಂಶ ಬಿಜೆಪಿಯ ನಾಯಕತ್ವದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು, ಸದ್ಯಕ್ಕೆ ಅಲ್ಲದೇ ಇದ್ದರೂ ಒಂದಿಷ್ಟು ಬದಲಾ ವಣೆ ಗಳಿಗೆ ಆಸ್ಪದ ನೀಡುವ ಸಾಧ್ಯತೆಗಳು ಹೆಚ್ಚಿದೆ.

Advertisement

ಈ ಫ‌ಲಿತಾಂಶದ ಪರಿಣಾಮ ಮಾಜಿ ಸಿಎಂ ಬಿ.ಎಸ್‌.ಯಡಿ ಯೂ ರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್‌.ಅಶೋಕ್‌ ಅವರ ಮೇಲೆ ಬೀಳುವುದು ನಿಶ್ಚಿತ.

ಗ್ಯಾರಂಟಿ ಅಲೆಯ ಮಧ್ಯೆಯೂ ಬಿಜೆಪಿ 17 ಸ್ಥಾನ ಗೆದ್ದಿರುವುದು ಕಡಿಮೆ ಸಾಧನೆಯಂತೂ ಅಲ್ಲ. ಆದರೆ ಸಂಖ್ಯಾಬಲ ಕ್ಷೀಣಿಸಿರುವುದು ರಾಜ್ಯ ನಾಯಕತ್ವ ಜೀರ್ಣಿಸಿಕೊಳ್ಳುವ ಸಂಗತಿಯಂತೂ ಅಲ್ಲ.

ಬಿ.ಎಸ್‌.ಯಡಿಯೂರಪ್ಪ

ಬಹುಶಃ ಯಡಿಯೂರಪ್ಪ ಮುಂದಾಳತ್ವದಲ್ಲಿ ಬಿಜೆಪಿ ಇನ್ನು ಚುನಾವಣೆ ಎದುರಿಸುವ ಸಾಧ್ಯತೆ ಕಡಿಮೆ

Advertisement

ಸಂಸದೀಯ  ಮಂಡಳಿ ಪುನಾರಚನೆಯಾದರೆ ಸದಸ್ಯತ್ವದಿಂದಲೂ ವಿರಾಮ ಸಿಗಬಹುದು.

ರಾಜ್ಯ ಘಟಕದಲ್ಲಿ ಯಡಿಯೂರಪ್ಪ ಮಾತೇ ಅಂತಿಮ ಎನ್ನುವಂತಿಲ್ಲ.

ಬಿ.ವೈ.ವಿಜಯೇಂದ್ರ

ಗ್ಯಾರಂಟಿ ಅಲೆ ಎದುರಿಸಿ ಪಕ್ಷಕ್ಕೆ ಗೆಲುವು ಕೊಟ್ಟನೆಂಬ ಬಲ

ಸಂಖ್ಯಾ ಬಲ ಕುಸಿತದಿಂದ ಯತ್ನಾಳ್‌ರಂಥ ಹಿರಿಯರ ವಿರೋಧ

ಏಕಪಕ್ಷೀಯ ನಿರ್ಧಾರಕ್ಕೆ ತಡೆ, ಸಂಘಟನಾತ್ಮಕವಾಗಿ ಹೋಗುವ ಅನಿವಾರ್ಯತೆ

ಯಡಿಯೂರಪ್ಪ ನಾಮಬಲದಾಚೆೆ ಸ್ವಂತ ವರ್ಚಸ್ಸು ಬೆಳೆಸಿಕೊಳ್ಳುವ ಸವಾಲು

ಆರ್‌.ಅಶೋಕ್‌

ಒಕ್ಕಲಿಗ ನಾಯಕತ್ವದ ಸಾಮ್ರಾಟನಾಗಿ ಉಳಿಯೋದು ಕಷ್ಟ.

ಸದನದ ಒಳ-ಹೊರಗೆ ಪಕ್ಷವನ್ನು ಸಮರ್ಥಿಸುವ ಹೊಣೆ ಹೆಚ್ಚಳ

ವಿಪಕ್ಷ ನಾಯಕನ ಸ್ಥಾನ ಉಳಿಸಿ ಕೊಳ್ಳಲು ಕಸರತ್ತು ಮಾಡಬೇಕು

ವರಿಷ್ಠರ ದೃಷ್ಟಿಯಲ್ಲಿ ಕುಮಾರಸ್ವಾಮಿ ಒಕ್ಕಲಿಗ ಪ್ರಶ್ನಾತೀತ ನಾಯಕರಾಗುವ ಭಯ

Advertisement

Udayavani is now on Telegram. Click here to join our channel and stay updated with the latest news.

Next