ತೆಕ್ಕಟ್ಟೆ : ಲೋಕಾಯುಕ್ತ ನ್ಯಾ|ಮೂ| ವಿಶ್ವನಾಥ ಶೆಟ್ಟಿ ಅವರು ನ.17 ರಂದು ಹೆಸ್ಕಾತ್ತೂರು ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿ, ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ನ್ಯಾ|ಮೂ| ಪಿ.ವಿಶ್ವನಾಥ ಶೆಟ್ಟಿ ಅವರು ವಿದ್ಯಾರ್ಥಿಗಳ ಬಳಿ ಕೊರೊನಾ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಬಳಕೆ ಹಾಗೂ ವಿದ್ಯಾರ್ಥಿಗಳ ಪೋಷಕರು ಹಾಗೂ ಕುಟುಂಬ ಸದಸ್ಯರು ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ಮಾಹಿತಿ ಪಡೆದು ಉದಯವಾಣಿ ಜತೆ ಮಾತನಾಡಿದರು.
ಈ ಸಂದರ್ಭದಲ್ಲಿ 10ನೇ ತರಗತಿಯ ವಿದ್ಯಾರ್ಥಿನಿ ಸೌಜನ್ಯ ,ಪವಿತ್ರಾ ಹಾಗೂ ಕು| ಶ್ರೇಯಾ ಮಾತನಾಡಿದರು ಹಾಗೂ ಸರಕಾರಿ ಪ್ರೌಢಶಾಲೆಯಲ್ಲಿ ಸುಮಾರು 200 ವಿದ್ಯಾರ್ಥಿಗಳಿದ್ದು ತರಗತಿಯ ಕೋಣೆಯ ಅವಶ್ಯಕತೆ ಇದೆ ಎಂದು ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಶೆಟ್ಟಿ ಅವರು ಲೋಕಾಯುಕ್ತರ ಗಮನಕ್ಕೆ ತಂದರು. ಹಾಗೂ ಪ್ರಾಥಮಿಕ ಶಾಲಾ ಪರಿಸರದಲ್ಲಿ ಶಿಥಿಲಗೊಂಡ ಕಟ್ಟಡವಿದ್ದು ಇದನ್ನು ತೆರವುಗೊಳಿಸಿ ಸುಸಜ್ಜಿತ ತರಗತಿ ಕೋಣೆಗಳು ನಿರ್ಮಾಣವಾಗಬೇಕಾಗಿದೆ ಎಂದು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಶೇಖರ್ ಕುಮಾರ್ ಅವರು ಮನವಿ ಮಾಡಿದರು.
ಇದನ್ನೂ ಓದಿ : ಟಾಕ್ ಆಫ್ ದಿ ಟೌನ್ ಆಯ್ತು ‘ಬನಾರಸ್’ ಫಸ್ಟ್ ಲುಕ್ ಮೋಷನ್ ಪೋಸ್ಟರ್
ಈ ಸಂದರ್ಭದಲ್ಲಿ ಶಕುಂತಲಾ ವಿ.ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ ಕೆ.ಎನ್. ಚಂದ್ರಶೇಖರ್ ಶೆಟ್ಟಿ, ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಶೇಖರ್ ಕುಮಾರ್, ಶಿಕ್ಷಕರಾದ ಬಾಬು ಶೆಟ್ಟಿ , ರಾಘವೇಂದ್ರ ದೇವಾಡಿಗ, ಹೊನ್ನೆ ಗೌಡ ,ಮಲ್ಲಪ್ಪ ಕುಂಬಾರ, ಜಯಪ್ರಸಾದ್ ಶೆಟ್ಟಿ, ಸಂಧ್ಯಾ, ರಾಧಿಕಾ, ಸುಪ್ರಿತ್ ಕಾಮತ್ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ಕೆದ್ಲಾಯ, ಪ್ರಾಥಮಿಕ ಶಾಲಾ ಶಿಕ್ಷಕರು ಜಯಲಕ್ಷ್ಮಿ ಬಿ., ಅಶೋಕ್ ತೆಕ್ಕಟ್ಟೆ , ಜಯರಾಮ್ ಶೆಟ್ಟಿ, ವಿಜಯ ಶೆಟ್ಟಿ, ವಿಜಯ ಆರ್., ಸಂಜೀವ ಎಂ. ರವೀಂದ್ರ ನಾಯಕ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.