Advertisement
ಕೆಲವು ಸಚಿವರು ಪ್ರಮುಖ ಖಾತೆಗಳನ್ನು ಹೊಂದಿದ್ದರೂ ಅವರ ಕಾರ್ಯನಿರ್ವಹಣೆ ಮಾತ್ರ ಅತ್ಯಂತ ಕಳಪೆಯಾಗಿದೆ. ಕೊನೆಯ ಪಕ್ಷ ಜಿಲ್ಲಾ ಸಚಿವರಾಗಿಯೂ ಕಾರ್ಯವೈಖರಿ ತೃಪ್ತಿಕರವಾಗಿಲ್ಲ.
Related Articles
ಲೋಕಸಭಾ ಚುನಾವಣೆಯಲ್ಲಿ “ಕುಟುಂಬದ ಕುಡಿ’ಗಳಿಗೆ ಟಿಕೆಟ್ ನೀಡಲಾಯಿತು. ಮತ್ತೊಂದೆಡೆ ವರ್ಷ ಕಳೆದರೂ ನಿಗಮ-ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರು, ನಿರ್ದೇ ಶಕರು- ಸದಸ್ಯರ ನೇಮಕ ಮಾಡಲಿಲ್ಲ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಅಧ್ಯಕ್ಷ-ಉಪಾಧ್ಯಕ್ಷರನ್ನು ನೇಮಿಸಲಾಯಿತು. ಅದರಲ್ಲಿ ಶಾಸಕರಿಗೆ ಆದ್ಯತೆ ನೀಡಲಾಯಿತು, ಕಾರ್ಯಕರ್ತರು ಕಡೆಗಣಿಸಲ್ಪಟ್ಟರು. ಇದು ನಿರೀಕ್ಷಿತ ಗೆಲುವು ಸಾಧಿಸದಿರಲು ಪ್ರಮುಖ ಪಾತ್ರ ವಹಿಸಿತು ಎಂದು ಕೆಪಿಸಿಸಿ ಪದಾಧಿಕಾರಿಗಳು ಸಮಿತಿ ಗಮನಸೆಳೆದರು ಎಂದು ಮೂಲಗಳು ತಿಳಿಸಿವೆ.
Advertisement
ಎರಡು ಪ್ರಬಲ ಸಮುದಾಯ ಗಳನ್ನು ಪ್ರತಿನಿಧಿಸುವ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಜನ ಒಪ್ಪಿಕೊಂಡರು. ಬಿಜೆಪಿಯ ಸಾಮಾಜಿಕ ಜಾಲತಾಣ ವಿಭಾಗ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿತು ಎಂದೂ ಸಮಿತಿ ಮುಂದೆ ಅಭಿಪ್ರಾಯಗಳನ್ನು ಮಂಡಿಸಿರುವುದಾಗಿ ತಿಳಿದು ಬಂದಿದೆ.
ಒಕ್ಕಲಿಗ ಸಿಎಂ ಆಗಲಿಲ್ಲಎಂಬ ಅಸಮಾಧಾನ“ಒಕ್ಕಲಿಗ ಸಿಎಂ ಆಗಲಿಲ್ಲ’ ಎಂಬ ಅಸಮಾಧಾನ ಹಾಗೂ ಅದಕ್ಕೆ ಪೂರಕವಾಗಿ ಮತ್ತೂಂದು ಬಣದಿಂದ ಚುನಾವಣ ಪ್ರಚಾರದ ವಿವಿಧ ವೇದಿಕೆಗಳಲ್ಲಿ ತೂರಿಬಂದ ಹೇಳಿಕೆಗಳು ದಕ್ಷಿಣ ಕರ್ನಾಟಕ ವಿಶೇಷವಾಗಿ ಹಳೆಯ ಮೈಸೂರು ಭಾಗದಲ್ಲಿನ ಸೋಲಿಗೆ ಪ್ರಮುಖ ಕಾರಣ ಎಂದು ಕೆಲವು ಶಾಸಕರು ಹಾಗೂ ಪದಾಧಿಕಾರಿಗಳು ಸತ್ಯಶೋಧನ ಸಮಿತಿಗೆ ತಿಳಿಸಿದ್ದಾರೆ. ಹಳೆಯ ಮೈಸೂರು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗರಿದ್ದಾರೆ. ಆ ಸಮುದಾಯದ ನಾಯಕರನ್ನು ಸಿಎಂ ಮಾಡಲಿಲ್ಲ ಎಂಬ ಬೇಸರ ಒಂದೆಡೆ ಇದೆ. ಇದರ ಬೆನ್ನಲ್ಲೇ ಚುನಾವಣೆ ಸಂದರ್ಭದಲ್ಲಿ ವಿವಿಧ ವೇದಿಕೆಗಳಲ್ಲಿ ಕೆಲ ನಾಯಕರು ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಹೇಳಿಕೆ ನೀಡಿದರು. ಈ ಮಧ್ಯೆ ಬಿಜೆಪಿ-ಜೆಡಿಎಸ್ ಮಿತ್ರಪಕ್ಷಗಳು ಎಚ್.ಡಿ. ಕುಮಾರಸ್ವಾಮಿ ಗೆದ್ದರೆ ಕೇಂದ್ರ ಸಚಿವರಾಗುತ್ತಾರೆ ಎಂಬುದನ್ನು ಮನದಟ್ಟು ಮಾಡುವಲ್ಲಿ ಯಶಸ್ವಿಯಾದರು. ಇದೆಲ್ಲವೂ ಮೈಸೂರು, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಮತ್ತಿತರ ಕಡೆಗಳಲ್ಲಿ ಪರಿಣಾಮ ಬೀರಿತು ಎಂದು ಪ್ರತಿಪಾದಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ. ಪ್ರಮುಖರೊಂದಿಗೆ ಸಮಿತಿ ಸಭೆ
ಶುಕ್ರವಾರ ನಡೆದ ಇಡೀ ದಿನ ಕೆಪಿಸಿಸಿ ಪದಾಧಿಕಾರಿಗಳು, ಲೋಕಸಭಾ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳು, 2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಅಭ್ಯರ್ಥಿಗಳು, ನಿಗಮ-ಮಂಡಳಿ ಅಧ್ಯಕ್ಷರು, ಕೆಪಿಸಿಸಿ ಕಾರ್ಯಾಧ್ಯಕ್ಷರೊಂದಿಗೆ ಸಮಿತಿಯು ಸಭೆ ನಡೆಸಿತು. ಈ ಪೈಕಿ 2023ರ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳು ಮತ್ತು ಮುಂಚೂಣಿ ಘಟಕಗಳ ಪದಾಧಿಕಾರಿಗಳು ತಂಡಗಳಾಗಿ ಅಭಿಪ್ರಾಯ ನೀಡಿದ್ದಾರೆ. ಉಳಿದಂತೆ ಒಬ್ಬೊಬ್ಬರನ್ನಾಗಿ ಕರೆದು ಅಭಿಪ್ರಾಯ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.