Advertisement
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಮಾಜಿ ಸಚಿವ ಅಜಯಕುಮಾರ ಸರನಾಯಕ, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಹಾಗೂ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸೌದಾಗರ ಅವರೊಂದಿಗೆ ಚುನಾವಣಾಧಿಕಾರಿ ಜಾನಕಿ ಕೆ.ಎಂ. ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಅವರ ಬಳಿ 2.39 ಲಕ್ಷ ನಗದು ಹಣ ಇದ್ದು, ವಿವಿಧ ಬ್ಯಾಂಕ್‌ಗಳಲ್ಲಿ 57,27,573 ರೂ. ಹಣವಿದೆ. ಅವರ ಪತಿ ಶಿವಕುಮಾರ ತಾಲಂಪಳ್ಳಿ ಅವರ ಬಳಿ 1.72 ಲಕ್ಷ ನಗದು ಹಣವಿದ್ದು, ವಿವಿಧ ಬ್ಯಾಂಕ್‌ಗಳಲ್ಲಿ 42,49,270 ರೂ. ಹಣ ಹೊಂದಿದ್ದಾರೆ. ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರು, ತಮ್ಮ ಪತಿ ಶಿವಕುಮಾರ ಅವರಿಂದ 3.95 ಲಕ್ಷ ಸಾಲ ಮಾಡಿದ್ದಾರೆ. ವಿಶೇಷವೆಂದರೆ ಸಂಯುಕ್ತಾ ಅವರ ಬಳಿ ಯಾವುದೇ ವಾಹನ ಇಲ್ಲ. ಪೊಲೀಸ್ ಕೇಸ್‌ಗಳೂ ಅವರ ಮೇಲಿಲ್ಲ.
Related Articles
ಸಚಿವ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತಾ ಪಾಟೀಲ, ಬೀದರನ ಉದ್ಯಮಿ ಶಿವಕುಮಾರ ತಾಲಂಪಳ್ಳಿ ಅವರನ್ನು ಮದುವೆಯಾಗಿದ್ದು, ಉದ್ಯಮಿಯಾಗಿರುವ ಶಿವಕುಮಾರಗಿಂತ ಸಂಯುಕ್ತಾ ಅವರೇ ಶ್ರೀಮಂತೆಯಾಗಿದ್ದಾರೆ. ಸಂಯುಕ್ತಾ ಅವರು ಒಟ್ಟು 93,66,574.74 ರೂ. ಚರಾಸ್ಥಿ ಹೊಂದಿದ್ದು, 1,12,77,550 ರೂ. ಸ್ಥಿರಾಸ್ಥಿ ಹೊಂದಿದ್ದಾರೆ. ಚರ ಮತ್ತು ಸ್ಥಿರಾಸ್ಥಿ ಸೇರಿ ಒಟ್ಟು 2,06,44,124 ರೂ. ಆಸ್ತಿಯ ಒಡತಿಯಾಗಿದ್ದಾರೆ. ಸುಮಾರು 47 ಎಕರೆ ಭೂಮಿ ಕೂಡ ಸಹಿತ ಹೊಂದಿದ್ದಾರೆ.
Advertisement
ಪತಿ ಶಿವಕುಮಾರ 1.04 ಕೋಟಿ ಚರಾಸ್ಥಿ ಹೊಂದ್ದು, ಅವರ ಬಳಿ ಯಾವುದೇ ಸ್ಥಿರಾಸ್ಥಿ ಇಲ್ಲ. 59,95,185 ರೂ. ಸಾಲ ಮಾಡಿದ್ದಾರೆ. ಸಂಯುಕ್ತಾ ಅವರು ಪತಿ ಶಿವಕುಮಾರ ಹೆಸರಿನಲ್ಲಿ 8,95,180 ರೂ. ಶೈಕ್ಷಣಿಕ ಸಾಲ ಕೂಡ ಮಾಡಿದ್ದಾರೆ.
500 ಗ್ರಾಂ ಚಿನ್ನ :ಸಂಯುಕ್ತಾ ಅವರು 500ಗ್ರಾಂ ಚಿನ್ನ, 5 ಕೆ.ಜಿ. ಬೆಳ್ಳಿ ಹೊಂದಿದ್ದು, ಪತಿಯ ಬಳಿ 510 ಗ್ರಾಂ ಚಿನ್ನವಿದೆ. ಸಂಯುಕ್ತಾ ಅವರು 2023 24ನೇ ಸಾಲಿನ್ಲಲಿ 21,92,600 ರೂ. ಆದಾಯ ಘೋಷಿಸಿಕೊಂಡಿದ್ದಾರೆ. ಆಸ್ತಿ ವಿವರ
ಸಂಯುಕ್ತಾ ಅವರ ಒಟ್ಟು ಆಸ್ತಿ : 2,06,44,124 ರೂ
ಒಟ್ಟು ಆದಾಯ : 21,92,600 ರೂ. (2023 24)
ಕೈಯಲ್ಲಿರುವ ನಗದು : 2.39 ಲಕ್ಷ
ಚರಾಸ್ತಿ : 93,66,574.74 ರೂ.
ಸ್ಥಿರಾಸ್ಥಿ : 1,12,77,550 ರೂ.
ಸಾಲ : 3.95 ಲಕ್ಷ ರೂ.
ಭೂಮಿ : ವಿಜಯಪುರದ ವಿವಿಧೆಡೆ 47 ಎಕರೆ ಭೂಮಿ.