ತೀರ್ಥಹಳ್ಳಿ : ವಿಧಾನಸಭಾ ಚುನಾವಣೆಯಲ್ಲಿ ಕಿಮ್ಮನೆ ಹಾಗೂ ಆರ್ ಎಂ ಮಂಜುನಾಥ್ ಗೌಡರು ಒಟ್ಟಾಗಿದ್ದಾಗಲು ಆರಗ ಜ್ಞಾನೇಂದ್ರ ಅವರನ್ನು ಇಲ್ಲಿನ ಕಾರ್ಯಕರ್ತರು ಗೆಲ್ಲಿಸಿದ್ದರು. ನಿಮ್ಮ ರಾಘಣ್ಣ ಮಾಡಿದ್ದ ಕೆಲಸಕ್ಕೆ ಗೆಲುವಿನ ಮೂಲಕ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.
ಶುಕ್ರವಾರ ತೀರ್ಥಹಳ್ಳಿಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ ಭವ್ಯ ಶ್ರೀ ಬಾಲರಾಮನ ಪ್ರತಿಷ್ಠಾಪನೆ ಮಾಡಿರುವ ನರೇಂದ್ರ ಮೋದಿಯವರನ್ನು ಕೂಡ ಮೂರನೇ ಬಾರಿ ಪ್ರಧಾನಿಯನ್ನಾಗಿ ಮಾಡುವ ಮೂಲಕ ದೇಶದ ಅಭಿವೃದ್ಧಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಅವಕಾಶ ನಮ್ಮಲ್ಲಿದೆ. ಎಲ್ಲರೂ ಒಟ್ಟಾಗಿ ಈ ಬಾರಿ ಚುನಾವಣೆಯಲ್ಲಿ ಮೋದಿಯವರಿಗೆ ಶಕ್ತಿ ತುಂಬುವ ಕೆಲಸ ಮಾಡೋಣ ಎಂದರು.
ಆರಗ ಜ್ಞಾನೇಂದ್ರ ಮಾತನಾಡಿ ನನಗೆ ದೇವರಂಥ ಕಾರ್ಯಕರ್ತರು ಸಿಕ್ಕಿದ್ದಾರೆ. ಇವರಿರಲಿಲ್ಲ ಅಂದರೆ 5 ಸಾರಿ ಗೆಲ್ಲುವುದು ಸಾಧ್ಯ ಇರಲಿಲ್ಲ. ಈ ಚುನಾವಣೆ ರಾಷ್ಟ್ರವನ್ನು ಕಟ್ಟುವಂತ, ಭವಿಷ್ಯವನ್ನು ನಿರ್ಮಾಣ ಮಾಡುವ ಚುನಾವಣೆಯಾಗಿದೆ. ಐದನೇ ಅತೀ ದೊಡ್ಡ ರಾಷ್ಟ್ರವಾಗಿ ಭಾರತ ಹೊರ ಹೊಮ್ಮಿದೆ. ಮೂರನೇ ಅತೀ ದೊಡ್ಡ ಸೈನ್ಯವನ್ನು ನಾವು ಹೊಂದಿದ್ದೇವೆ. ಇಡೀ ಜಗತ್ತು ನಮ್ಮ ಕಡೆ ತಿರುಗಿ ನೋಡುವ ಹಾಗೆ ಮೋದಿ ಮಾಡಿದ್ದಾರೆ ಎಂದರು.
ಪಾಕಿಸ್ತಾನ ಜಿಂದಾಬಾದ್ ಎಂದು ಕಾಂಗ್ರೆಸ್ ಸರ್ಕಾರ ಇದೆ ಎಂದು ಕೂಗುತ್ತಾರೆ. ನಾವು ಎಫ್ಐಆರ್ ಹಾಕಿ ಎಂದರೆ ಕಾಂಗ್ರೆಸ್ ನವರು ಅವರು ಕೂಗಿದ್ದಲ್ಲ ಎಂದು ಹೇಳುತ್ತಾರೆ. ರಾಷ್ಟ್ರ ಕವಿ ಕುವೆಂಪು, ಯು ಆರ್ ಅನಂತಮೂರ್ತಿ, ಗೋಪಾಲಗೌಡರ ಹೆಸರು ತೀರ್ಥಹಳ್ಳಿಯಲ್ಲಿ ಕೇಳುತ್ತಿದ್ದೆವು ಆದರೆ ಈಗ ಬಾಂಬ್ ಮಾಡುವ ರಾಷ್ಟ್ರ ದ್ರೋಹಿಗಳಿಂದ ದಿನ ನಿತ್ಯ ನಾವು ಮಾಧ್ಯಮಗಳಲ್ಲಿ ತೀರ್ಥಹಳ್ಳಿ ಹೆಸರು ಕೇಳುವಂತಾಗಿದೆ. ಇವತ್ತು ಬೆಳ್ಳಂ ಬೆಳಗ್ಗೆ ಬಿಜೆಪಿ ಮುಖಂಡನ ಬಂಧನ ಆಗಿದೆ ಎನ್ನುತ್ತಾರೆ. ಮುಸ್ಲಿಂ ವ್ಯಕ್ತಿಯ ಅಂಗಡಿಯಲ್ಲಿ ಮೊಬೈಲ್ ಖರೀದಿ ಮಾಡಿದ್ದಕ್ಕೆ ಅವನ ಹೆಸರಲ್ಲಿ ಫೇಕ್ ಅಕೌಂಟ್ ಮಾಡಿದ್ದಾರೆ. ಇನ್ನು 8 ಜನ ಹಿಂದೂ ಮಂದಿಯ ಹೆಸರಲ್ಲಿ ಸಿಮ್ ಕ್ರಿಯೇಟ್ ಮಾಡಿದ್ದಾರೆ. ಕಾಂಗ್ರೆಸ್ ನವರು ಕೇಳುತ್ತಿದ್ದರು ನಿಮ್ಮ ಕಾರ್ಯಕರ್ತ ಅಂತ. ಆದರೆ ಅದೇ ಬಾಂಬ್ ಇಟ್ಟವನ ಜಾಗದಲ್ಲಿ ನೀವು 10 ಲಕ್ಷ ಕೊಟ್ಟು ಕಾಂಗ್ರೆಸ್ ಪಾರ್ಟಿ ಆಫೀಸ್ ಮಾಡಿದ್ದೀರಾ ಎಂದರು.
ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂದು ಕಾಂಗ್ರೆಸ್ ನವರು ಹೇಳುತ್ತಾರೆ. ಆದರೆ ನಾವು ಕುಕ್ಕರ್ ಬಾಂಬ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ದೇಶ ದ್ರೋಹಿಗಳ ವಿಷಯದಲ್ಲಿ ಎನ್ಐಎ ಈಗ ತಾಯಿ ಬೇರನ್ನು ಕೂಡ ಹುಡುಕುತ್ತಿದೆ. ನಿಮ್ಮ ಹಾಗೆ ಎಫ್ಐಆರ್ ಹಾಕಿ ಕೂರುವುದಿಲ್ಲ. ಯಾರನ್ನು ನಾವು ಬಿಡುವುದಿಲ್ಲ ಎಂದರು.
ಕಳೆದ ಬಾರಿ ರಾಘವೇಂದ್ರ ಅವರು 2 ಲಕ್ಷದ 30 ಸಾವಿರದಿಂದ ಗೆದ್ದಿದ್ದರು. ಈ ಬಾರಿ ಡಬಲ್ ಆಗಬೇಕು. ರಾಘವೇಂದ್ರ ಗೆಲ್ಲುವುದು ನಿಶ್ಚಿತ. ಆದರೆ ತೀರ್ಥಹಳ್ಳಿಯಲ್ಲಿ ಎಷ್ಟು ಅಂತರ ಎನ್ನುವುದೇ ಮುಖ್ಯ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷರಾದ ಕುಣಜೆ ಕಿರಣ್ ಪ್ರಭಾಕರ್ ತೀರ್ಥಹಳ್ಳಿ ಎಂದರೆ ಆರಗ ಜ್ಞಾನೇಂದ್ರ, ಅಭಿವೃದ್ಧಿ, ಶಿವಮೊಗ್ಗ ಎಂದರೆ ರಾಘವೇಂದ್ರ ಅಭಿವೃದ್ಧಿ, ದೇಶ ಎಂದರೆ ನರೇಂದ್ರ ಮೋದಿ ಅಭಿವೃದ್ಧಿ ಎಂದರೆ ತಪ್ಪಾಗಲಾರದು. ದೇಶದ ಹಿತದೃಷ್ಟಿಯಿಂದ ಮೋದಿಯ ಜೊತೆಗೆ ಮಾಜಿ ಪ್ರಧಾನಿಗಳು ಕೈ ಜೋಡಿಸಿದ್ದಾರೆ. 28 ಕ್ಕೆ 28 ಕ್ಷೇತ್ರವನ್ನು ದೇಶದ ಮಡಿಲಿಗೆ ಹಾಕಲು ಬಿಜೆಪಿ ಜೊತೆಗೆ ಜನತಾದಳ ಕೈ ಜೋಡಿಸಿದ್ದೇವೆ ಎಂದರು.
ಇನ್ನು ಐದು ವರ್ಷದಲ್ಲಿ ನರೇಂದ್ರ ಮೋದಿಯವರು ಪ್ರಪಂಚದ ವ್ಯಕ್ತಿಯಾಗುತ್ತಾರೆ. ರಾಘವೇಂದ್ರ ಕೇಂದ್ರದಲ್ಲಿ ಮಂತ್ರಿಯಾಗಿ ಬರುತ್ತಾರೆ. ಶಿವಮೊಗ್ಗವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ ಕೀರ್ತಿ ಪತಾಕೆ ಹಾರಿಸುತ್ತಾರೆ. ಗೀತಾ ಶಿವರಾಜ್ ಕುಮಾರ್ ಅಭಿವೃದ್ಧಿ ಮಾಡಲು ಬಂದಿಲ್ಲ ಅಧಿಕಾರಕ್ಕಾಗಿ ಬಂದಿದ್ದಾರೆ. ಕಳೆದ ಹತ್ತು ವರ್ಷದಿಂದ ಜಿಲ್ಲೆಗೆ ಬಂದಿಲ್ಲ ಈಗ ಬಂದಿದ್ದಾರೆ ಎಂದರು.