Advertisement
ಕರ್ನಾಟದಲ್ಲಿ ಐಎಎಸ್, ಐಪಿಎಸ್, ಉದ್ಯಮಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಐವರು, ಈಗ ದಕ್ಷಿಣ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳಾಗಿದ್ದಾರೆ. ರಾಜ್ಯದ ನಂಟು ಹೊಂದಿರುವ ಉದ್ಯಮಿ ರಾಜೀವ್ ಚಂದ್ರಶೇಖರ್, ನಿವೃತ್ತ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ, ನಿವೃತ್ತ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್, ಮಾಜಿ ಸಂಸದೆ ಜೆ.ಶಾಂತಾ, ಶಿಕ್ಷಕಿ ಅಶ್ವಿನಿ ಚುನಾವಣಾ ಕಣದಲ್ಲಿ ಮಿಂಚುತ್ತಿದ್ದು, ಸದ್ಯದಲ್ಲೇ ಇವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
– ಕೇರಳದ ಕಾಸರಗೋಡು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ
– ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. 38 ವರ್ಷ. ವೃತ್ತಿಯಲ್ಲಿ ಶಿಕ್ಷಕಿ.
– ಶಿಕ್ಷಣವನ್ನೂ ಬೆಂಗಳೂರಿನಲ್ಲೇ ಪೂರೈಸಿದ್ದಾರೆ.
– ಕೈ ಹಾಲಿ ಸಂಸದ ರಾಜಮೋಹನ್ ಉನ್ನಿಥಾನ್, ಸಿಪಿಎಂ ಹಿರಿಯ ನಾಯಕ ಎಂ.ವಿ. ಬಾಲಕೃಷ್ಣ ಎದುರು ಸ್ಪರ್ಧೆ ಜೆ.ಶಾಂತಾ:
– ಮಾಜಿ ಸಚಿವ ಬಿ.ಶ್ರೀರಾಮಲು ಅವರ ಸಹೋದರಿ
– ಆಂಧ್ರ ಪ್ರದೇಶದ ಹಿಂದೂಪುರ ಲೋಕಸಭಾ ಕ್ಷೇತ್ರದ ವೈಎಸ್‌ಆರ್‌ಸಿಪಿ ಪಕ್ಷದ ಅಭ್ಯರ್ಥಿ
– ಬಳ್ಳಾರಿಯಲ್ಲಿ ಜನನ. ಅಲ್ಲೇ ಪ್ರೌಢಶಾಲಾ ಶಿಕ್ಷಣ.
– 2009ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಳ್ಳಾರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದವರು
– 2018ರಲ್ಲಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಉಗ್ರಪ್ಪ ವಿರುದ್ಧ ಸೋಲು
Related Articles
– ತಮಿಳುನಾಡು ಮೂಲ. ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದರು.
– ಬಳ್ಳಾರಿ ಜಿಲ್ಲೆಯ ಸಹಾಯಕ ಆಯುಕ್ತ, ಶಿವಮೊಗ್ಗ ಜಿಪಂ ಸಿಇಒ, ಚಿತ್ರದುರ್ಗ ಮತ್ತು ರಾಯಚೂರು ಡಿಸಿಯಾಗಿ ಸೇವೆ
– ಕರ್ನಾಟಕ ಗಣಿ ಇಲಾಖೆಯ ನಿರ್ದೇಶಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದವರು
– 2023ರಲ್ಲಿ ಕರ್ನಾಟಕ ಕಾಂಗ್ರೆಸ್ ವಾರ್ ರೂಮ್‌ನ ಮುಖ್ಯಸ್ಥ. ಈಗ ತಿರುವಳ್ಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ
Advertisement
ಕೆ.ಅಣ್ಣಾಮಲೈ– ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿ ಜನನ. ಕರ್ನಾಟಕ ಕೇಡರ್‌ನ 2011ರ ಬ್ಯಾಚ್‌ನ ಐಪಿಎಸ್ ಅಧಿಕಾರಿ
– ಚಿಕ್ಕಮಗಳೂರು, ಉಡುಪಿ ಜಿಲ್ಲೆಯಲ್ಲಿ ಎಸ್‌ಪಿ ಆಗಿ ಕರ್ತವ್ಯ, ಖಡಕ್ ಪೊಲೀಸ್ ಅಧಿಕಾರಿ ಎಂಬ ಖ್ಯಾತಿ
– ಬೆಂಗಳೂರು ದಕ್ಷಿಣ ಡಿಸಿಪಿ ಆಗಿಯೂ ಕಾರ್ಯನಿರ್ವಹಣೆ
– ಈಗ ತಮಿಳುನಾಡು ಬಿಜೆಪಿ ಅಧ್ಯಕ್ಷ. ಕೊಯಮತ್ತೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್
– ಕೇರಳ ಮೂಲದವರಾದರೂ ಸದ್ಯ ಬೆಂಗಳೂರಿನಲ್ಲಿ ವಾಸ್ತವ್ಯ. ಮಣಿಪಾಲ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿಯರಿಂಗ್ ಪದವಿ.
– 2006ರಿಂದ ಸತತ 3 ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ
– ಪ್ರಸ್ತುತ ಕೇಂದ್ರ ಕೌಶಲಾಭಿವೃದ್ಧಿ, ಉದ್ಯಮ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಹಾಯಕ ಸಚಿವ
– ಈಗ ಕೇರಳದ ತಿರುವನಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ