Advertisement

Lok Sabha; ರಾಹುಲ್‌ ಗಾಂಧಿ ಭಾಷಣದ ಹಲವು ಭಾಗಗಳಿಗೆ ಕಡತದಿಂದ ಕೊಕ್‌!

11:52 PM Jul 02, 2024 | Team Udayavani |

ಹೊಸದಿಲ್ಲಿ: ವಿಪಕ್ಷ ನಾಯಕನಾಗಿ ಲೋಕ ಸಭೆಯಲ್ಲಿ ರಾಹುಲ್‌ ಗಾಂಧಿ ಸೋಮವಾರ ಮಾಡಿದ ಚೊಚ್ಚಲ ಭಾಷಣದ ಹಲವು ಭಾಗಗಳಿಗೆ ಕತ್ತರಿ ಪ್ರಯೋಗ ಮಾಡ ಲಾಗಿದೆ. ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ರಾಹುಲ್‌ ಮಾಡಿದ ಭಾಷಣದಲ್ಲಿ 18 ವಿಚಾರಗಳನ್ನು ಕಡತ ದಿಂದ ತೆಗೆದುಹಾಕಲಾಗಿದೆ. ಈ ಪೈಕಿ ಬಹುತೇಕ ಹೇಳಿಕೆಗಳು ಪ್ರಧಾನಿ ಮೋದಿ ಮತ್ತು ಅದಾನಿ ಅವರಿಗೆ ಸಂಬಂಧಿಸಿದ್ದು ಎನ್ನಲಾಗಿದೆ.

Advertisement

ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್‌, “ನಾನು ಏನನ್ನು ಹೇಳಬೇಕಿತ್ತೋ ಅದನ್ನು ಹೇಳಿದ್ದೇನೆ ಮತ್ತು ಸತ್ಯವನ್ನೇ ಹೇಳಿದ್ದೇನೆ. ಅವರಿಗೆ ಇಷ್ಟ ಬಂದಷ್ಟನ್ನು ಅವರು ಕಡತದಿಂದ ತೆಗೆದುಹಾಕಲಿ. ಏನೇ ಆದರೂ ಕೊನೆಗೆ ಜಯ ಸಿಗುವುದು ಸತ್ಯಕ್ಕೆ’ ಎಂದಿದ್ದಾರೆ. ಅಲ್ಲದೆ “ಮೋದಿಯವರ ಜಗತ್ತಿನಲ್ಲಿ ಸತ್ಯವನ್ನು ತೆಗೆದುಹಾಕಬಹುದು. ಆದರೆ ವಾಸ್ತವದಲ್ಲಿ ಸತ್ಯವನ್ನು ತೆಗೆದುಹಾಕಲು ಸಾಧ್ಯವಿಲ್ಲ’ ಎಂದಿದ್ದಾರೆ.

ಸ್ಪೀಕರ್‌ಗೆ ರಾಗಾ ಪತ್ರ:  ಜತೆಗೆ, ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದು, ತಮ್ಮ ಭಾಷಣದ ಭಾಗಗಳನ್ನು ತೆಗೆದುಹಾಕಿರುವ ನಡೆಯು ಸಂಸದೀಯ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು. ಅವುಗಳನ್ನು ಮತ್ತೆ ಕಡತಕ್ಕೆ ಸೇರಿಸುವಂತೆ ಮನವಿ ಮಾಡಿದ್ದಾರೆ. ಜತೆಗೆ ಆರೋಪಗಳೇ ತುಂಬಿದ್ದ ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ಅವರ ಭಾಷಣವನ್ನೇಕೆ ತೆಗೆದುಹಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.

ಖರ್ಗೆ ಭಾಷಣಕ್ಕೂ ಕತ್ತರಿ: ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ್ದ ಭಾಷಣದಲ್ಲೂ 6 ವಿಚಾರಗಳನ್ನು ಕಡತದಿಂದ ತೆಗೆದುಹಾಕಲಾಗಿದೆ.

ಯಾವ ವಿಚಾರಗಳಿಗೆ ಕತ್ತರಿ?

Advertisement

ನೀಟ್‌ ಪರೀಕ್ಷೆ ಶ್ರೀಮಂತರಿಗೆಂದೇ ಮಾಡಿದ್ದು, ಪ್ರತಿಭಾವಂತರಿಗೆ ಇಲ್ಲಿ ಜಾಗವಿಲ್ಲ.

ಅಗ್ನಿವೀರ್‌ ಯೋಜನೆ ಭಾರತೀಯ ಸೇನೆಯದ್ದಲ್ಲ, ಬದಲಿಗೆ ಪ್ರಧಾನಿ ಕಾರ್ಯಾಲಯದ್ದು

ಬಿಜೆಪಿಯು ಅಲ್ಪಸಂಖ್ಯಾಕರನ್ನು ನ್ಯಾಯಯುತವಾಗಿ ನಡೆಸಿಕೊಳ್ಳುತ್ತಿಲ್ಲ

ಅದಾನಿ, ಅಂಬಾನಿ ಕುರಿತ ಪ್ರಸ್ತಾವ

Advertisement

Udayavani is now on Telegram. Click here to join our channel and stay updated with the latest news.

Next