Advertisement

Lok Sabha Elections: ಮುಂದಿನ ವಾರದಿಂದ ಬಿಜೆಪಿಯ 4 ತಂಡಗಳ ಪ್ರವಾಸ

12:15 AM Feb 24, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ, ರಾಜ್ಯದ ಹಿರಿಯ ನಾಯಕರ ನೇತೃತ್ವದಲ್ಲಿ 4 ತಂಡಗಳನ್ನು ಮಾಡಿ ಮುಂದಿನ ವಾರದಿಂದ ರಾಜ್ಯ ಪ್ರವಾಸ ಪ್ರಾರಂಭಿಸಲು ಬಿಜೆಪಿ ನಿರ್ಧರಿಸಿದೆ.

Advertisement

ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಕರ್ನಾಟಕದ ಉಸ್ತುವಾರಿ ರಾಧಾಮೋಹನ್‌ ದಾಸ ಅಗರ್ವಾಲ್‌, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಇತರ ನಾಯಕರು ನಡೆಸಿದ ಮಹತ್ವದ ಸಂಘಟನಾತ್ಮಕ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಪ್ರತಿಯೊಂದು ಕ್ಷೇತ್ರದ ಬಗ್ಗೆಯೂ ವಿಸ್ತೃತವಾಗಿ ಚರ್ಚೆ ನಡೆದಿದೆ.

ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೀವ್‌, ಪ್ರತಿ ಯೊಂದು ಲೋಕಸಭಾ ಕ್ಷೇತ್ರಗಳ ಕುರಿತು ವಿಸ್ತೃತ ಚರ್ಚೆ ಆಗಿದೆ. ಆಂತರಿಕ ವರದಿ ಪ್ರಕಾರ 28 ಲೋಕಸಭಾ ಕ್ಷೇತ್ರ ಗಳನ್ನೂ ಗೆಲ್ಲುವಂಥ ಸ್ಥಿತಿ ಇದೆ.

ತಳಮಟ್ಟದಲ್ಲಿ ಪಕ್ಷದ ಚಟುವಟಿಕೆಗಳು, ರಾಜ್ಯ ನಾಯಕರ ಲೋಕಸಭಾ ಕ್ಷೇತ್ರವಾರು ಪ್ರವಾಸ ಮತ್ತು ಕೇಂದ್ರದ ನಾಯಕರು ರಾಜ್ಯ ಪ್ರವಾಸ ಮಾಡಿದಾಗ ಕಾರ್ಯಕ್ರಮ ಮತ್ತು ಚಟುವಟಿಕೆಗಳ ಕುರಿತು ಚರ್ಚೆ ಮಾಡಿದ್ದೇವೆ ಎಂದರು.

ಕೇಂದ್ರದ ನಾಯಕರು ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಒಂದು ದಿನದ ಪ್ರವಾಸ ನಡೆಸಲಿದ್ದಾರೆ. ಅಲ್ಲಿ 5 ಹಂತದ ಕಾರ್ಯಕ್ರಮಗಳು ನಡೆಯಲಿವೆ ಎಂದರು.

Advertisement

ಬೂತ್‌ ಅಧ್ಯಕ್ಷ, ಬೂತ್‌ ಪ್ರಮುಖ ಫ‌ಲಾನುಭವಿ ಸಂಪರ್ಕ, ಅವರ ನೇತೃತ್ವದ ಸಭೆ, ಚುನಾವಣಾ ನಿರ್ವಹಣ ಸಮಿತಿಯ ಸಭೆ, ಫ‌ಲಾನುಭವಿಗಳ ಸಂಪರ್ಕದ ಸಭೆ, ಲೋಕಸಭಾ ವ್ಯಾಪ್ತಿಯಲ್ಲಿ ಸಾಮಾಜಿಕವಾಗಿ ತಮ್ಮದೇ ಆದ ವ್ಯಕ್ತಿತ್ವದ ಮೂಲಕ ಕೊಡುಗೆ ಕೊಟ್ಟವರ ಮನೆ ಭೇಟಿ, ಸಾರ್ವಜನಿಕ ಸಭೆ ನಡೆಸಲಾಗುವುದು.ಕ್ಲಸ್ಟರ್‌ ಮಟ್ಟದ ಪ್ರವಾಸ ಈಗಾಗಲೇ ಆರಂಭವಾಗಿದೆ. 2 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿ ಇರುವ ಕಲಬುರಗಿ ಕ್ಲಸ್ಟರ್‌ಗೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಈಗಾಗಲೇ ಬಂದು ಸಭೆ ನಡೆಸಿ ತೆರಳಿದ್ದಾರೆ. ಕೇಂದ್ರ ನಾಯಕರ ಭೇಟಿ ದಿನಾಂಕಗಳು ಶೀಘ್ರವೇ ನಿಗದಿ ಆಗಲಿದೆ ಎಂದು ಹೇಳಿದರು.

ಈಗಾಗಲೇ ಕೇಂದ್ರದ ನಾಯಕರು ತಮ್ಮದೇ ಆದ ಸಮೀಕ್ಷೆಯ ಮೂಲಕ ವರದಿ ನೀಡಿದ್ದಾರೆ. ಎಲ್ಲ ಕಾರ್ಯಕರ್ತರ ಅಭಿಪ್ರಾಯವನ್ನು ಪಡೆದಿದ್ದಾರೆ. ಯಾವ ಲೋಕಸಭಾ ಕ್ಷೇತ್ರದಲ್ಲೂ ಗೊಂದಲ ಇಲ್ಲ ಎಂದರು.

 

 

Advertisement

Udayavani is now on Telegram. Click here to join our channel and stay updated with the latest news.

Next