Advertisement
ಈ ಸಂಬಂಧ ಸೋಮವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಸೇರಿ ಪ್ರಮುಖ ನಾಯಕರನ್ನು ಭೇಟಿಯಾಗಿರುವ ಜಯಪ್ರಕಾಶ ಹೆಗ್ಡೆ, ಪಕ್ಷ ಸೇರ್ಪಡೆ, ಲೋಕಸಭಾ ಚುನಾವಣೆ ಸ್ಪರ್ಧೆ ಸೇರಿ ಹಲವು ವಿಷಯಗಳ ಕುರಿತು ಸುದೀರ್ಘ ಮಾತುಕತೆ ನಡೆಸಿದ್ದಾರೆ. ಸೇರ್ಪಡೆ ಆಗುವುದು ಬಹುತೇಕ ಅಂತಿಮಗೊಂಡಿದ್ದು ಸೇರ್ಪಡೆ ದಿನಾಂಕ ಘೋಷಣೆ ಮಾತ್ರ ಬಾಕಿ ಇದೆ ಎಂದು ಮೂಲಗಳು ತಿಳಿಸಿವೆ.
ಜಯಪ್ರಕಾಶ್ ಹೆಗ್ಡೆ ಅವರು ಶೀಘ್ರ ವೇ ಕಾಂಗ್ರೆಸ್ ಸೇರುವರು ಎಂಬ ಸುದ್ದಿ ಸೋಮವಾರ ಸಾಮಾಜಿಕ ಜಾಲತಾಣ ಸೇರಿ ಎಲ್ಲೆಡೆ ಹರಿದಾಡಿತು.
Related Articles
Advertisement
ಆದರೆ ಹೆಗ್ಡೆಯವರು ಮಾತ್ರ ಇನ್ನೂ ನಿರ್ಧರಿಸಿಲ್ಲ, ಒಂದುವಾರದಲ್ಲಿ ತೀರ್ಮಾನಿಸುವೆ ಎಂದು ಜಿಲ್ಲಾ ಪತ್ರಿಕಾಭವನದಲ್ಲಿ ಸೋಮವಾರ ಬೆಳಗ್ಗೆ ನಡೆದ ಮಾಧ್ಯಮ ಸಂವಾದದಲ್ಲೂ ತಿಳಿಸಿದ್ದರು. ಬಿಜೆಪಿಯಿಂದ ಅಧಿಕೃತ ವಾಗಿ ಯಾರೂ ಸಂಪರ್ಕಿಸಿಲ್ಲ. ಅಲ್ಲಿಯ ಕೆಲವು ಸ್ನೇಹಿತರು ಕರೆ ಮಾಡಿ ಮಾತನಾಡುತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸಬೇಕೋ, ಬೇಡವೋ ಎಂದು ಮೊದಲು ನಿರ್ಧರಿಸುವೆ. ಆಮೇಲೆ ಯಾವ ಪಕ್ಷವೆಂಬುದು ಎಂದಿದ್ದರು.
ರಾಜಕೀಯ ಮೌಲ್ಯ ಎನ್ನುವುದು ಪಕ್ಷಾಂತರ ಮಾಡುವವರಿಗೆ ಮಾತ್ರ ಸೀಮಿತವಲ್ಲ. ಪಕ್ಷಗಳಿಗೂ ಅನ್ವ ಯಿಸುತ್ತದೆ. ಇಲ್ಲಿ ಇಬ್ಬರ ತಪ್ಪು ಇರು ತ್ತದೆ. ಕಾಂಗ್ರೆಸ್‌ನಿಂದ ಬಿಜೆಪಿಗೆ, ಬಿಜೆಪಿ ಯಿಂದ ಕಾಂಗ್ರೆಸ್‌ಗೆ ಆಚೀಚೆ ಆಗುತ್ತಲೇ ಇರುತ್ತದೆ. ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದ ತತ್‌ಕ್ಷಣವೇ ಸೆಕ್ಯೂಲರ್ ಆಗುವುದು, ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದಕೂಡಲೇ ಕಮ್ಯೂನಲ್ ಆಗುವುದು ಈ ಹೊತ್ತಿನ ವಿಶ್ಲೇಷಣೆ ಎಂದರು ಹೆಗ್ಡೆ.