Advertisement
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷಿತ ಮಟ್ಟದಲ್ಲಿ ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾಗಿತ್ತು. ಈ ಹಿನ್ನಡೆಯ ಹಿಂದಿನ ಕಾರಣಗಳ ಪತ್ತೆಗೆ ಎಐಸಿಸಿಯು ಮಧುಸೂದನ್ ಮಿಸ್ತ್ರಿ ನೇತೃತ್ವ ದಲ್ಲಿ ಸಂಸದರಾದ ಗೌರವ್ ಗೊಗೊಯ್ ಮತ್ತು ಹಿಬಿ ಇಡೆನ್ ಅವರನ್ನು ಒಳಗೊಂಡ ಸತ್ಯಶೋಧನ ಸಮಿತಿ ರಚಿಸಿದೆ.
Related Articles
ಗುರುವಾರ ಬೆಳಗ್ಗೆ 10ರಿಂದ 11ರ ವರೆಗೆ ಎಐಸಿಸಿ ಪದಾಧಿಕಾರಿಗಳು ಮತ್ತು ಸಿಡಬ್ಲ್ಯೂಸಿ ಸದಸ್ಯರು, 11ರಿಂದ ಮಧ್ಯಾಹ್ನ 1ರ ವರೆಗೆ ಹಿರಿಯ ನಾಯಕರು, ಮಧ್ಯಾಹ್ನ 1ರಿಂದ 2ರ ವರೆಗೆ ಸಚಿವರು, 3ರಿಂದ 3.30ರ ವರೆಗೆ ರಾಜ್ಯಸಭಾ ಸದಸ್ಯರು, 3.30ರಿಂದ 5.30ರ ವರೆಗೆ ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು, ಸಂಜೆ 5.30ರಿಂದ 7ರ ವರೆಗೆ ಜಿಲ್ಲಾ ಘಟಕದ ಅಧ್ಯಕ್ಷರೊಂದಿಗೆ ಸಭೆ ಏರ್ಪಡಿಸಲಾಗಿದೆ.
Advertisement
ಶುಕ್ರವಾರ ಬೆಳಗ್ಗೆ 10ರಿಂದ 12.30ರ ವರೆಗೆ ಕೆಪಿಸಿಸಿ ಪದಾಧಿಕಾರಿಗಳು, 12.30ರಿಂದ 1.30 ಲೋಕಸಭಾ ಅಭ್ಯರ್ಥಿಗಳು, ಮಧ್ಯಾಹ್ನ 2.30ರಿಂದ 2023 ವಿಧಾನಸಭಾ ಅಭ್ಯರ್ಥಿಗಳು, 5ರಿಂದ 6.30 ನಿಗಮ-ಮಂಡಳಿ ಅಧ್ಯಕ್ಷರು ಮತ್ತು 6.30ರಿಂದ 7ರ ವರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರೊಂದಿಗೆ ಸಭೆ ನಡೆಸಲಿದೆ ಎಂದು ಕೆಪಿಸಿಸಿ ಪ್ರಕಟನೆ ತಿಳಿಸಿದೆ.