Advertisement

Lok Sabha Elections ಅಭ್ಯರ್ಥಿ ಆಯ್ಕೆ: ಮುಂದಿನವಾರ ದಿಲ್ಲಿಯಲ್ಲಿ ಕಾಂಗ್ರೆಸ್‌ ಸಭೆ?

12:52 AM Feb 21, 2024 | Team Udayavani |

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ತಯಾರಿಸುವ ಸಂಬಂಧ ಮುಂದಿನ ವಾರ ದಿಲ್ಲಿಯಲ್ಲಿ ಕಾಂಗ್ರೆಸ್‌ ನಾಯಕರ ಮತ್ತೊಂದು ಸುತ್ತಿನ ಸಭೆ ನಡೆಯುವ ಸಾಧ್ಯತೆಗಳಿವೆ. ಬಹುತೇಕ ಫೆ. 27 ಇಲ್ಲವೇ 28ರಂದು ಈ ಸಭೆ ನಡೆಯಬಹುದು.

Advertisement

ವಿಧಾನಮಂಡಲದ ಅಧಿವೇಶನ ಫೆ. 23ರಂದು ಮುಗಿಯಲಿದೆ. ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಸುಜೇìವಾಲ ಅವರ ಪುತ್ರನ ವಿವಾಹ ಕಾರ್ಯಕ್ರಮವೂ ಅದೇ ದಿನ ನಡೆಯಲಿದೆ. ಆ ಬಳಿಕ ಸಭೆ ನಡೆಸುವ ಬಗ್ಗೆ ಪ್ರಾಥಮಿಕ ಚರ್ಚೆಗಳು ನಡೆದಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮಾರ್ಚ್‌ ಮೊದಲ ಇಲ್ಲವೇ 2ನೇ ವಾರದ ವೇಳೆಗೆ ಕನಿಷ್ಠ 15 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಬೇಕೆಂಬ ಗುರಿ ಹಾಕಿಕೊಳ್ಳಲಾಗಿದೆ. ಅದಕ್ಕೆ ಪೂರಕವಾಗಿ ಎಲ್ಲ ರೀತಿಯ ಸಭೆಗಳನ್ನು ಈ ತಿಂಗಳಲ್ಲೇ ಪೂರ್ಣಗೊಳಿಸಬೇಕಿದೆ.

5ನೇ ಸಮೀಕ್ಷೆ ವಾರಾಂತ್ಯಕ್ಕೆ ಪೂರ್ಣ
ಅಭ್ಯರ್ಥಿಗಳ ಶೋಧಕ್ಕೆ ನಡೆದಿರುವ 5ನೇ ಹಂತದ ಸಮೀಕ್ಷೆ ಕೂಡ ಈ ವಾರಾಂತ್ಯಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಗಳಿವೆ. ಬಹುತೇಕ ಮುಂದಿನ ವಾರದ ವೇಳೆಗೆ ರಾಜ್ಯದ ಎಲ್ಲ 28 ಕ್ಷೇತ್ರಗಳ ಸಮೀಕ್ಷಾ ವರದಿ ಸಿದ್ಧವಾಗಲಿದೆ. ಹೀಗಾಗಿ ತಿಂಗಳ ಅಂತ್ಯಕ್ಕೆ ಸಭೆ ನಡೆಸಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಎಐಸಿಸಿಯ ಕೇಂದ್ರ ಚುನಾವಣ ಸಮಿತಿಗೆ ಶಿಫಾರಸು ಮಾಡುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next