Advertisement
ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಕೇವಲ 15 ಮಂದಿ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದರು. ಹೌದು, ಬೆರಣಿಕೆಯಷ್ಟು ಮಂದಿ ಚುನಾವಣಾ ಅಖಾಡಕ್ಕೆ ಇಳಿಯುತ್ತಿದ್ದ ಕಾಲ ಇದೀಗ ಬದಲಾಗಿದ್ದು, ಕ್ಷೇತ್ರ ಪ್ರತಿ ಲೋಕಸಭಾ ಚುನಾವಣೆಯಲ್ಲಿ 10, 15 ರೊಳಗೆ ಇದ್ದ ಅಭ್ಯರ್ಥಿ ಗಳ ಸಂಖ್ಯೆ ಈ ಬಾರಿ ಅಖಾಡದಲ್ಲಿ ಬರೋಬ್ಬರಿ 29 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿ ರಾಜಕೀಯ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಹಾಗೂ ಪಕ್ಷಗಳು ಮಾತ್ರವೇ ಪ್ರತಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಯುತ್ತಿದ್ದವು. ನಾಲ್ಕೈದು ಚುನಾವಣೆ ಬಿಟ್ಟರೆ ಉಳಿದ ಚುನಾವಣೆಗಳಲ್ಲಿ ಸಿಪಿಎಂ ಪಕ್ಷ ಜೆಡಿಎಸ್ ಪಕ್ಷಕ್ಕೆ ಬೆಂಬಲ ಕೊಡುತ್ತಾ ಬಂದಿದ್ದವು. ಆದರೆ ಈ ಬಾರಿ ಚುನಾವಣಾ ಅಖಾಡ 29 ಅಭ್ಯರ್ಥಿಗಳ ಸ್ಪರ್ಧೆಯಿಂದ ರಾಜಕೀಯವಾಗಿ ಕ್ಷೇತ್ರ ಗಮನ ಸೆಳೆದಿವೆ.
Related Articles
Advertisement
ಮೊದಲ ಬಾರಿಗೆ 2 ಬ್ಯಾಲೆಟ್ ಬಳಕೆ : ಇನ್ನೂ ಚುನಾವಣಾ ಅಖಾಡದಲ್ಲಿ 29 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮತದಾನಕ್ಕೆ ಇದೇ ಮೊದಲ ಬಾರಿಗೆ 2 ಬ್ಯಾಲೆಟ್ ಯೂನಿಟ್‌ಗಳನ್ನು ಬಳಸಬೇಕಾದ ಅನಿರ್ವಾಯತೆಯನ್ನು ಸೃಷ್ಠಿಸಿದೆ. ಚಿಕ್ಕಬಳ್ಳಾಪುರ ಒಟ್ಟು 29 ಅಭ್ಯರ್ಥಿಗಳು ಹಾಗೂ ನೋಟಾ ಇರುವುದರಿಂದ ಚುನಾವಣೆಯಲ್ಲಿ ಎರಡು ಬ್ಯಾಲೆಟ್ ಯುನಿಟ್ ಗಳನ್ನು ಬಳಕೆ ಮಾಡಲಾಗುತ್ತಿದೆ. ಒಟ್ಟು 5576 ಬ್ಯಾಲೆಟ್ ಯೂನಿಟ್ ಹಾಗೂ 2788 ಕಂಟ್ರೋಲ್ ಯೂನಿಟ್‌ಗಳ ಜೊತೆಗೆ 3012 ವಿ.ವಿ.ಪಿ.ಎ.ಟಿ ಬಳಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.
-ಕಾಗತಿ ನಾಗರಾಜಪ್ಪ