Advertisement

BJP’s 5th list ; ಕಂಗನಾ ರಣಾವತ್ ಗೆ ಟಿಕೆಟ್: ವರುಣ್ ಗಾಂಧಿಗೆ ಕೊಕ್

01:18 AM Mar 25, 2024 | Team Udayavani |

ಹೊಸದಿಲ್ಲಿ: ಬಿಜೆಪಿ ಲೋಕಸಭಾ ಚುನಾವಣೆಗೆ ಭಾನುವಾರ 111 ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಿಮಾಚಲ ಪ್ರದೇಶದ ಮಂಡಿಯಿಂದ ಬಾಲಿವುಡ್ ನಟಿ ಕಂಗನಾ ರಣಾವತ್ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಹೆಸರಿಸಿದೆ.

Advertisement

ಇಂದು ಬಿಜೆಪಿ ಸೇರಿದ ಕೈಗಾರಿಕೋದ್ಯಮಿ ಮತ್ತು ಕಾಂಗ್ರೆಸ್ ಮಾಜಿ ಸಂಸದ ನವೀನ್ ಜಿಂದಾಲ್ ಅವರನ್ನು ಹರಿಯಾಣದ ಕುರುಕ್ಷೇತ್ರ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಉತ್ತರ ಪ್ರದೇಶದ ಪಿಲಿಭಿತ್‌ನಿಂದ ವರುಣ್ ಗಾಂಧಿಯನ್ನು ಕೈಬಿಟ್ಟು ಮಾಜಿ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ್ ಅವರಿಗೆ ಟಿಕೆಟ್ ನೀಡಿದೆ.ವರುಣ್ ಅವರ ತಾಯಿ ಮಾಜಿ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರನ್ನು ಸುಲ್ತಾನ್‌ಪುರದಿಂದ ಕಣಕ್ಕಿಳಿಸುತ್ತಿದೆ.

ಪಕ್ಷವು ಕಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಅಭಿಜಿತ್ ಗಂಗೂಲಿ ಅವರಿಗೆ ತಮ್ಲುಕ್‌ನಿಂದ ಲೋಕಸಭೆ ಟಿಕೆಟ್ ನೀಡಿದೆ.ದಕ್ಷಿಣ ಗೋವಾದಿಂದ ಅಚ್ಚರಿ ಅಭ್ಯರ್ಥಿಯಾಗಿ ಡೆಂಪೋ ಇಂಡಸ್ಟ್ರೀಸ್ ನಿರ್ದೇಶಕಿ ಪಲ್ಲವಿ ಶ್ರೀನಿವಾಸ್ ಡೆಂಪೋ ಅವರಿಗೆ ಟಿಕೆಟ್ ನೀಡಲಾಗಿದೆ.

ರಾಮಾಯಣ ಟಿವಿ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರದ ಮೂಲಕ ಜನಪ್ರಿಯಗಿದ್ದ ನಟ ಅರುಣ್‌ ಗೋವಿಲ್‌ ಅವರಿಗೆ ಮೇರಠ ಲೋಕಸಭಾ ಕ್ಷೇತ್ರ ಬಿಜೆಪಿ ಟಿಕೆಟ್‌ ನೀಡಿದೆ.

ವಯನಾಡ್ ನಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರಿಗೆ ಟಿಕೆಟ್ ನೀಡಿದೆ.

Advertisement

 16 ಲೋಕ ಕ್ಷೇತ್ರಗಳಿಗೆ ಜೆಡಿಯು ಅಭ್ಯರ್ಥಿ ಘೋಷಣೆ
ಬಿಹಾರದಲ್ಲಿ ಜೆಡಿಯು ತನ್ನ ಪಾಲಿನ ಎಲ್ಲ 16 ಲೋಕಸಭಾ ಕ್ಷೇತ್ರಗಳಿಗೆ ರವಿವಾರ ಅಭ್ಯರ್ಥಿಗಳನ್ನು ಘೋಷಿಸಿದೆ. ಒಬಿಸಿ ಮತ್ತು ಅತ್ಯಂತ ಹಿಂದುಳಿದ ವರ್ಗಗಳಿಗೆ ಪಕ್ಷ ಆದ್ಯತೆ ನೀಡಿದೆ. ಹಾಲಿ 12 ಮಂದಿ ಸಂಸದರಿಗೆ ಟಿಕೆಟ್‌ ನೀಡಲಾಗಿದೆ. ಆದರೆ ಸೀತಾಮಹಿì ಸಂಸದ ಸುನೀಲ್‌ ಕುಮಾರ್‌ ಪಿಂಟು ಮತ್ತು ಸಿವಾನ್‌ ಕ್ಷೇತ್ರದ ಸಂಸದೆ ಕವಿತಾ ಸಿಂಗ್‌ ಅವರಿಗೆ ಜೆಡಿಯು ಟಿಕೆಟ್‌ ನಿರಾಕರಿಸಿದೆ. ಈ ಕ್ರೇತಗಳಲ್ಲಿ ಕ್ರಮವಾಗಿ ಇತ್ತೀಚೆಗಷ್ಟೇ ಜೆಡಿಯುಗೆ ಸೇರ್ಪಡೆಗೊಂಡ ದೇವೇಶ್‌ ಚಂದ್ರ ಠಾಕೂರ್‌ ಮತ್ತು ವಿಜಯಲಕ್ಷ್ಮೀ ದೇವಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಬಿಹಾರದಲ್ಲಿ ಒಟ್ಟು 40 ಲೋಕಸಭಾ ಕ್ಷೇತ್ರಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next