Advertisement

Lok Sabha Election: ಕರ್ನಾಟಕದಲ್ಲಿ ಎನ್‌ಡಿಎಗೆ 23, ಕಾಂಗ್ರೆಸ್‌ಗೆ 5 ಸ್ಥಾನ: ಸಮೀಕ್ಷೆ

03:02 PM Apr 17, 2024 | Team Udayavani |

ಹೊಸದಿಲ್ಲಿ: ಮೊದಲ ಹಂತದ ಲೋಕಸಭೆ ಚುನಾವಣೆಗೆ ಮೂರು ದಿನಗಳು ಇರುವಾಗಲೇ ಪ್ರಕಟವಾದ ಮತ್ತೂಂದು ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 3ನೇ ಬಾರಿಗೆ ಅಧಿಕಾರಕ್ಕೇರುವುದು ಖಚಿತವಾಗಿದೆ.

Advertisement

ಟಿವಿ9 ಭಾರತ್‌ವರ್ಷ- ಪೋಲ್‌ಸ್ಟ್ರಾಟ್‌-ಪೀಪಲ್ಸ್‌ ಇನ್‌ಸೈಟ್‌ ಸಮೀಕ್ಷೆಯು 543 ಸ್ಥಾನಗಳ ಪೈಕಿ ಎನ್‌ಡಿಎ 362 ಮತ್ತು ಇಂಡಿಯಾ ಕೂಟ 149 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ಈ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಎನ್‌ಡಿಎ 23 ಸ್ಥಾನ ಗೆಲ್ಲಲಿದ್ದು, ಈ ಪೈಕಿ ಬಿಜೆಪಿ 20, ಜೆಡಿಎಸ್‌ 3 ಸ್ಥಾನಗಳಲ್ಲಿ ಜಯ ಸಾಧಿಸಲಿದೆ. 5 ಸ್ಥಾನ ಕಾಂಗ್ರೆಸ್‌ ಪಾಲಾಗಲಿವೆ.

ಇನ್ನು ಉತ್ತರ ಪ್ರದೇಶದಲ್ಲಿ 80 ಸೀಟುಗಳಿದ್ದು, ಈ ಪೈಕಿ ಎನ್‌ಡಿಎ 68 ಸ್ಥಾನಗಳನ್ನು ಗೆದ್ದರೆ, ಇಂಡಿಯಾ ಕೂಟವು 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಇನ್ನು ಹಿಮಾಚಲ ಪ್ರದೇಶ, ಉತ್ತರಾಖಂಡ, ಮಧ್ಯ ಪ್ರದೇಶ, ಗುಜರಾತ್‌, ರಾಜಸ್ಥಾನ, ಝಾರ್ಖಂಡ್‌ ಮತ್ತು ಅಸ್ಸಾಂಗಳಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ಇದೇ ವೇಳೆ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಲದಲ್ಲಿ ಎನ್‌ಡಿಎ ಹೆಚ್ಚು ಸ್ಥಾನ ಬರಲಿವೆ. ವಿಶೇಷ ಎಂದರೆ ಕೇರಳ ಹಾಗೂ ತಮಿಳುನಾಡಿನಲ್ಲಿ ಬಿಜೆಪಿ ಕ್ರಮವಾಗಿ 3 ಮತ್ತು 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

ಇದನ್ನೂ ಓದಿ: Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next