Advertisement
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ ಕೇವಲ 91 ಸ್ಥಾನ ಲಭ್ಯವಾಗಿತ್ತು. ಈ ಬಾರಿ ಸರ್ಕಾರ ರಚನೆ ಮಾಡದಿದ್ದರೂ 141 ಸ್ಥಾನಗಳ ಏರಿಕೆಯನ್ನು ಕಂಡಿದೆ. ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಮೈತ್ರಿಕೂಟ ರಚನೆ ಮಾಡಿಕೊಂಡರೂ ಸಹ ಸಣ್ಣಪುಟ್ಟ ಪಕ್ಷಗಳು ಸೇರಿ ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದು, ಮೈತ್ರಿಕೂಟದ ಸೋಲಿಗೆ ಪ್ರಮುಖ ಕಾರಣ ಎನಿಸಿಕೊಂಡಿದೆ. ಅಲ್ಲದೆ, ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದು, ಚುನಾವಣೆಯ ಸಮಯದಲ್ಲಿ “ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ಸಂಪತ್ತು ಮರುಹಂಚಿಕೆ ಹೇಳಿಕೆ’ ಕೂಡ ಇಂಡಿಯಾ ಒಕ್ಕೂಟಕ್ಕೆ ಹಿನ್ನಡೆ ಉಂಟುಮಾಡಿತು.
Related Articles
Advertisement
ಇದಿಷ್ಟೇ ಅಲ್ಲದೇ ಚುನಾವಣೆ ಘೋಷಣೆ ಯಾಗುವ ಮೊದಲೇ ಸಾಮಾಜಿಕ ಜಾಲ ತಾಣಗಳಲ್ಲಿ ನಿರಂತರವಾಗಿ ಪ್ರಚಾರ ಮಾಡುತ್ತಾ ಇಂಡಿಯಾ ಮೈತ್ರಿಕೂಟ ತನ್ನತ್ತ ಜನರನ್ನು ಸೆಳೆದಿದ್ದು, ಈ ಚುನಾವಣೆಯಲ್ಲಿ ಲಾಭ ತಂದುಕೊಟ್ಟಿತು. ಬಿಜೆಪಿ ನೀಡಿದ ಸಂವಿಧಾನ ಬದಲು ಹೇಳಿಕೆಯನ್ನು ಪ್ರಖರವಾಗಿ ಇಂಡಿಯಾ ಒಕ್ಕೂಟ ಬಳಸಿ ಕೊಂಡಿತು. ಹೀಗಾಗಿ ಇಂಡಿಯಾ ಒಕ್ಕೂಟ ಎಲ್ಲರ ನಿರೀಕ್ಷೆಯನ್ನು ಮೀರಿ ಅತಿಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಂಡಿತು.
ಸೋಲಿಗೆ ಕಾರಣಗಳೇನು?
ಹೆಚ್ಚು ಪಕ್ಷಗಳನ್ನು ವಿಶ್ವಾಸಕ್ಕೆ ತರುವಲ್ಲಿನ ವಿಫಲತೆ
ಮೋದಿ ರೀತಿಯ ಪ್ರಧಾನಿ ಅಭ್ಯರ್ಥಿ ಇಲ್ಲದೇ ಇದ್ದದ್ದು
ರಾಹುಲ್, ಪ್ರಿಯಾಂಕರ ಮೇಲೆ ಹೆಚ್ಚು ಅವಲಂಬನೆ
ಕರ್ನಾಟಕ ಸೇರಿ ಭರವಸೆ ರಾಜ್ಯದಲ್ಲಿ ಭಾರಿ ಕುಸಿತ
ಕೊನೇ ಕ್ಷಣದಲ್ಲಿ ನಿತೀಶ್ ಕುಮಾರ್ ಮೈತ್ರಿಕೂಟ ತೊರೆದು ಹೋಗಿದ್ದು