Advertisement

 Lok Sabha Election; ಕಳೆದ ಬಾರಿಯ ಸ್ಥಾನವನ್ನಾದರೂ ಕಾಂಗ್ರೆಸ್‌ ಗೆಲ್ಲಲಿ: ಯಡಿಯೂರಪ್ಪ

11:28 PM Apr 20, 2024 | Team Udayavani |

ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಕೇವಲ 57 ಸ್ಥಾನ ಗೆದ್ದಿದ್ದ ಕಾಂಗ್ರೆಸ್‌ ಅಷ್ಟು ಸ್ಥಾನವನ್ನಾದರೂ ಈ ಬಾರಿ ಗೆಲ್ಲಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸವಾಲು ಹಾಕಿದರು.

Advertisement

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ನಡೆದ “ವಿಜಯ ಸಂಕಲ್ಪ ಸಮಾವೇಶ’ದಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ನಮಗೆ ಅನುಕೂಲಕರ ವಾತಾವರಣವಿದೆ. ಜೆಡಿಎಸ್‌ ನಾವು ಒಂದಾಗಿದ್ದೇವೆ. ನಮ್ಮ ಹೊಂದಾಣಿಕೆಯಿಂದ ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳನ್ನು ನಾವು ಗೆಲ್ಲುವುದು ನಿಶ್ಚಿತ ಎಂದು ಘೋಷಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸ್ನೇಹಿತರು ಅಧಿಕಾರ ಮದದಿಂದ ಮನಬಂದಂತೆ ಆಡಳಿತ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರಕಾರ ಬರಬೇಕೆಂದು ಜನರು ಬಯಸುತ್ತಿದ್ದಾರೆ. ಕೇಂದ್ರದಲ್ಲಿ ಮತ್ತೂಮ್ಮೆ ಮೋದಿ ಸರಕಾರ ಬರುವುದಕ್ಕಾಗಿ ಕಾಯುತ್ತಿದ್ದಾರೆ. ಇದನ್ನು ಸಹಿಸದ ಕಾಂಗ್ರೆಸಿಗರು ಮನಬಂದಂತೆ ಮಾತನಾಡುತ್ತಿದ್ದಾರೆ.

ಪದೇಪದೆ ಕೇಂದ್ರದಿಂದ ಅನ್ಯಾಯ ಆಗಿದೆ ಎನ್ನುತ್ತಿದ್ದಾರೆ. ಏನು ಅನ್ಯಾಯ ಆಗಿದೆ? ಇಡೀ ವಿಶ್ವವೇ ಮೋದಿ ನಾಯಕತ್ವವನ್ನು ಒಪ್ಪಿದೆ. 10 ವರ್ಷಗಳಲ್ಲಿ ಒಂದು ದಿನವೂ ರಜೆ ಪಡೆಯದೆ ಪ್ರಧಾನಿ ಮೋದಿ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಹಣಬಲ, ತೋಳ್ಬಲ, ಮದ್ಯ ಹಂಚುವ ಮೂಲಕ ಅಧಿಕಾರ ಬರುತ್ತೇವೆ ಎಂದು ಅಹಂಕಾರದಲ್ಲಿ ಕಾಂಗ್ರೆಸ್‌ ನಾಯಕರು ಇದ್ದಾರೆ.

ನಿಮ್ಮ ಯೋಗ್ಯತೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಇಡೀ ದೇಶದಲ್ಲಿ ನೀವು ಗೆದ್ದಿರುವುದು ಕೇವಲ 57 ಸ್ಥಾನ. ಈ ಬಾರಿ ಅಷ್ಟಾದರೂ ಗೆದ್ದು ತೋರಿಸಿ ನೋಡೋಣ. ಇದು ನನ್ನ ಸವಾಲು. ನಾವು 28 ಕ್ಷೇತ್ರಗಳನ್ನೂ ಗೆದ್ದು ದಿಲ್ಲಿಗೆ ಬರುತ್ತೇವೆ. ಇದು ಪ್ರಧಾನಿ ಮೋದಿ ಅವರಿಗೆ ನಾವು ನೀಡುವ ಭರವಸೆ ಎಂದು ಗಟ್ಟಿಯಾಗಿ ಹೇಳಿದರು.

Advertisement

ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ| ಸಿ.ಎನ್‌. ಮಂಜುನಾಥ್‌, ಉತ್ತರದ ಶೋಭಾ ಕರಂದ್ಲಾಜೆ, ಕೇಂದ್ರದ ಪಿ.ಸಿ. ಮೋಹನ್‌, ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next