Advertisement

Lok Sabha Election: ಕೇರಳ ಸಿಪಿಎಂ ಅಭ್ಯರ್ಥಿಗಳ ಪಟ್ಟಿ ಪ್ರಕಟ: 4 ಹಾಲಿ ಸಚಿವರಿಗೆ ಟಿಕೆಟ್‌

11:18 PM Feb 27, 2024 | Team Udayavani |

ತಿರುವನಂತಪುರಂ: ಸಿಪಿಐ ಬೆನ್ನಲ್ಲೇ ಕೇರಳದ ಸಿಪಿಎಂ ಮಂಗಳವಾರ 15 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ವಿಶೇಷವೆಂದರೆ, ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್‌ ಸೇರಿದಂತೆ ನಾಲ್ವರು ಹಾಲಿ ಸಚಿವರಿಗೆ ಸಿಪಿಎಂ ಪ್ರಮುಖ ಕ್ಷೇತ್ರಗಳ ಟಿಕೆಟ್‌ ನೀಡಿದೆ.

Advertisement

ಇದಲ್ಲದೇ, ಮಾಜಿ ಸಚಿವರಾದ ಕೆ.ಕೆ.ಶೈಲಜಾ, ಟಿ.ಎಂ. ಥಾಮಸ್‌ ಐಸಾಕ್‌ ಅವರೂ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ನಟ ಹಾಗೂ ಶಾಸಕ ಮುಕೇಶ್‌, ವಿ.ಜಾಯ್‌, ಹಾಲಿ ಸಂಸದರಾದ ಎ.ಎಂ. ಆರಿಫ್(ಲೋಕಸಭೆ), ಎಲಮಾರಂ ಕರೀಂ(ರಾಜ್ಯಸಭೆ) ಅವರೂ ಕಣಕ್ಕಿಳಿಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next