Advertisement

Lok Adalat: ವಿಚ್ಛೇದನಕ್ಕೆ ಬಂದಿದ್ದ ದಂಪತಿ, ಅದಾಲತ್‌ನಲ್ಲಿ ಒಂದಾದರು!

02:55 PM Sep 15, 2024 | Team Udayavani |

ಕೆಜಿಎಫ್‌: ಕಾರಣಾಂತರಗಳಿಂದ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ಎರಡು ಜೋಡಿಗಳ ಮನವೊಲಿಸಿ, ಮತ್ತೆ ಒಂದಾಗಿಸುವಲ್ಲಿ ನ್ಯಾಯಾಧೀಶರು ಯಶಸ್ವಿಯಾದ ಘಟನೆ ನಗರದ ನ್ಯಾಯಾಲಯದಲ್ಲಿ ನಡೆದಿದೆ. ನಗರದ ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ಲೋಕ ಅದಾಲತ್‌ನಲ್ಲಿ ಈ ಘಟನೆ ನಡೆದಿದೆ.

Advertisement

ನ್ಯಾ.ನದಾಫ್‌ ಅವರು 2024ರಲ್ಲಿ ವಿಚ್ಛೇದನಕ್ಕಾಗಿ ಅರ್ಜಿಯನ್ನು ಸಲ್ಲಿಸಿಕೊಂಡಿದ್ದ ನಿರಂಜನ್‌ಕು ಮಾರ್‌ ಮತ್ತು ಸೌಂದರ್ಯ ಅವರಗಳು ಮತ್ತು ನ್ಯಾ. ವಿನೋದ್‌ಕುಮಾರ್‌ 2022ರಲ್ಲಿ ವಿಚ್ಛೇದನ ಕ್ಕಾಗಿ ಅರ್ಜಿಯನ್ನು ಹಾಕಿಕೊಂಡಿದ್ದ ಅನಿತಾ ಮತ್ತು ಆನಂದನ್‌ರ ಮನವೊಲಿಸಿ, ರಾಜಿ ಸಂಧಾನ ಸೂತ್ರ ವನ್ನು ಅನುಸರಿಸುವ ಮೂಲಕ ಮತ್ತೆ ಇವರನ್ನು ಒಂದು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

2,919 ಪ್ರಕರಣ ಇತ್ಯರ್ಥ: ಕಳೆದ ಒಂದು ತಿಂಗಳಿನಿಂದ ಶನಿವಾರ ನಡೆಯಲಿದ್ದ ಲೋಕ ಅದಾಲತ್‌ ಬಗ್ಗೆ ವಿವಿಧ ಇಲಾಖೆಯಿಂದ ವ್ಯಾಪಕ ಪ್ರಚಾರ ಮತ್ತು ಸಾರ್ವಜನಿಕರಿಗೆ ಅದಾಲತ್‌ ನಡೆಯುವ ಬಗ್ಗೆ ಅರಿವು ಮೂಡಿಸಿದ್ದರಿಂದ ಒಂದೇ ದಿನ ಕೈಗೆತ್ತಿಕೊಳ್ಳಲಾದ 3,071 ಪ್ರಕರಣ ಪೈಕಿ 2,919 ಪ್ರಕರಣ ಇತ್ಯರ್ಥಗೊಂಡು ಒಟ್ಟು 2.13 ಕೋಟಿ ಹಣ ಸಂಗ್ರಹವಾಗಿದೆ. ನಗರದ ನ್ಯಾಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೆಗಾ ಲೋಕ ಅದಾಲತ್‌ನಲ್ಲಿ ರಾಜಿ ಮಾಡಿಕೊಳ್ಳಬಹುದಾದ, ನ್ಯಾಯಾಲಯ ಗಳಲ್ಲಿ ಬಾಕಿ ಇರುವ ಪ್ರಕರಣ ಹಾಗೂ ವ್ಯಾಜ್ಯ ಪೂರ್ವ ಬಾಕಿ ಇರುವ ಪ್ರಕರಣ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸಾರ್ವಜನಿಕರಿಗೆ ಅವಕಾಶವನ್ನು ಕಲ್ಪಿಸಲಾಗಿತ್ತು.

ಸ್ವಚ್ಛ ವಾಹಿನಿಗಳ ಮೂಲಕ ಪ್ರಚಾರ: ಕಳೆದೊಂದು ತಿಂಗಳಿನಿಂದ ಕೆಎಸ್‌ಆರ್‌ಟಿಸಿ ಸಂಸ್ಥೆಯವರು ಪ್ರತಿನಿತ್ಯ ವಿತರಿಸುವ ಟಿಕೆಟ್‌ಗಳ ಹಿಂಭಾಗದಲ್ಲಿ ಮತ್ತು ಬಸ್‌ಗಳ ಹಿಂಬದಿ ಇಲ್ಲವೇ ಎಡ ಮತ್ತು ಬಲ ಭಾಗಗಳಲ್ಲಿ ಭಿತ್ತಿ ಪತ್ರಗಳನ್ನು ಅಂಟಿಸುವ ಮೂಲಕ ಸಾರ್ವಜನಿಕರಲ್ಲಿ ಲೋಕ ಅದಾಲತ್‌ ಬಗ್ಗೆ ಅರಿವು ಮೂಡಿಸಿದ್ದರು. ನಗರಸಭೆ ಮತ್ತು ಗ್ರಾಪಂಗಳಲ್ಲಿ ಪ್ರತಿನಿತ್ಯ ಬೆಳಗ್ಗೆ ಕಸ ಸಂಗ್ರಹಣೆಗೆಂದು ಹೋಗುವ ಸ್ವತ್ಛ ವಾಹಿನಿಗಳ ಮೂಲಕ ಪ್ರಚಾರ ಕೈಗೊಳ್ಳಲಾಗಿತ್ತು. ಮೆಗಾ ಲೋಕ ಅದಾಲತ್‌ನಲ್ಲಿ 3ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶ ಗಣಪತಿ ಗುರುಸಿದ್ದ ಬಾದಾಮಿ, ನ್ಯಾ. ಮುಜಫರ್‌ ಎ. ಮಾಂಜರಿ, ರಹೀಂ ಆಲಿ ಮೌಲಾಸಾಬ್‌ ನದಾಫ್‌, ವಿನೋದ್‌ಕುಮಾರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next