Advertisement

Lok Adalat: 21 ವರ್ಷ ಹೋರಾಟ ನಡೆಸಿ ರಾಜಿ ಮಾಡಿಕೊಂಡ 81ರ ವೃದ್ಧ!

11:18 PM Dec 09, 2023 | Team Udayavani |

ಉಡುಪಿ: ಒಟ್ಟು 21 ವರ್ಷ ಕಾನೂನು ಹೋರಾಟ ನಡೆಸಿ ಕೊನೆಗೂ ಲೋಕ ಅದಾಲತ್‌ನಲ್ಲಿ 81 ವರ್ಷ ಪ್ರಾಯದ ವೃದ್ಧರೊಬ್ಬರು ರಾಜಿ ಮಾಡಿಕೊಂಡಿದ್ದಾರೆ.

Advertisement

ಸಂತೆಕಟ್ಟೆಯ ಜೆರಾಲ್ಡ್‌ ಬೋನಿಫೆಸ್‌ ರೆಬೆಲ್ಲೊ ಮಾರ್ಚ್‌ 2004ರಲ್ಲಿ ಹೆರ್ಗ ಗ್ರಾಮದಲ್ಲಿರುವ ಕೆಲವು ಸ್ಥಿರಾಸ್ತಿಗಳನ್ನು ಉಡುಪಿಯ ಉಪ ನೋಂದಣಾಧಿಕಾರಿಯವರ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡಿದ್ದರು. ಅನಂತರ ಕ್ರಯಸಾಧನದ ಆಧಾರದ ಮೇಲೆ ಪಹಣಿ ದಾಖಲಾತಿ ಮಾಡುವ ಸಮಯದಲ್ಲಿ ಅನಂತರ ಈ ಬಗ್ಗೆ ಮಾರಾಟಗಾ ರರು ಆಕ್ಷೇಪಣೆ ಸಲ್ಲಿಸಿದ್ದರು. ಈತನ್ಮಧ್ಯೆ 2008ರ ಜು. 28 ಹಾಗೂ 2011ರ ಆ. 29ರಂದು ಇದೇ ಸ್ಥಿರಾಸ್ತಿಯನ್ನು ಬೇರೆ ಬೇರೆ ವ್ಯಕ್ತಿಗಳು ನೋಂದಾಯಿತ ಕ್ರಯಸಾಧನದ ಮೂಲಕ ಖರೀದಿಸಿದ್ದರು. ಇದನ್ನು ಪ್ರಶ್ನಿಸಿ ಜೆರಾಲ್ಡ್‌ ಅವರು ಸುಮಾರು 15 ವರ್ಷ ಕಾಲ ಕಂದಾಯ ಇಲಾಖೆಯ ಬೇರೆ ಬೇರೆ

ನ್ಯಾಯಾಲಯಗಳಲ್ಲಿ ಹೋರಾಟ ನಡೆಸಿ ಅಂತಿಮವಾಗಿ 2019ರಲ್ಲಿ ಕುಂದಾಪುರ ಉಪವಿಭಾಗಾಧಿ ಕಾರಿಯವರ ನ್ಯಾಯಾಲಯದಲ್ಲಿ ಆದ ಆದೇಶದಂತೆ ಪ್ರಕರಣವನ್ನು ಸಿವಿಲ್‌ ನ್ಯಾಯಾಲಯದಲ್ಲಿ ವ್ಯಾಜ್ಯ ದಾಖಲಿಸಿ ಪರಿಹಾರ ಕಂಡುಕೊಳ್ಳಲು ಸೂಚಿಸಿದ್ದು, ಅನಂತರ ವಾದಿ ಉಡುಪಿಯ ಪ್ರಧಾನ ಸಿವಿಲ್‌ ನ್ಯಾಯಾಧೀಶರ, ಹಿರಿಯ ವಿಭಾಗದಲ್ಲಿ ಅಸಲು ದಾವೆ ದಾಖಲಿಸಿ ತನ್ನ ಹೆಸರಿಗೆ ಸ್ಥಿರಾಸ್ತಿಯ ಒಡೆತನವನ್ನು ವರ್ಗಾಯಿಸಲು ಕೋರಿಕೊಂಡರು.

ಪ್ರಕರಣ ನ್ಯಾಯಾಲಯದಲ್ಲಿ ತನಿಖೆ ಹಂತಕ್ಕೆ ಬಂದು ವಾದಿಯ ಸಾಕ್ಷ್ಯ ವಿಚಾ ರಣೆ ಪೂರ್ಣಗೊಂಡಿತ್ತು. ಪ್ರಧಾನ ಸಿವಿಲ್‌ ನ್ಯಾಯಾ ಧೀಶರಾದ ವಿಘ್ನೇಶ್‌ ಕುಮಾರ್‌ ಅವರು ಜೆರಾಲ್ಡ್‌ ಅವರ ಇಳಿ ವಯಸ್ಸನ್ನು ಗಮನಿಸಿ, ವಾದಿ ಮತ್ತು ಪ್ರತಿವಾದಿಯವರ ಪರ ವಕೀಲರ ಗಮನಕ್ಕೆ ತಂದು, ಮಧ್ಯಸ್ಥಿಕೆ ಕೇಂದ್ರಕ್ಕೆ ರಾಜೀ ಸಂಧಾನಕ್ಕೆ ಕಳುಹಿಸಿದರು. ಮಧ್ಯಸ್ಥಿಕೆ ಕೇಂದ್ರದಲ್ಲಿ ಸಂಧಾನಕಾರರು ಉಭಯರನ್ನೂ ಕರೆಸಿ ಪ್ರಕರಣದ ಬಗ್ಗೆ ಮನವರಿಕೆ ಮಾಡಿ ಪ್ರಕರಣವು ನ್ಯಾಯಾಲಯದಲ್ಲಿಯೇ ಬಾಕಿ ಉಳಿದರೆ ಆಗುವ ಆಗುಹೋಗುಗಳ ಬಗ್ಗೆ ವಾದಿ ಮತ್ತು ಪ್ರತಿವಾದಿಗಳಿಗೆ ತಿಳಿ ಹೇಳಿದ್ದು, ಅದೇ ರೀತಿ ರಾಜೀ ಸಂಧಾನದಿಂದ ಪ್ರಕರಣ ಇತ್ಯರ್ಥಗೊಂಡರೆ ಆಗುವ ಪ್ರಯೋಜನಗಳನ್ನು ಕೂಡ ಮನವರಿಕೆ ಮಾಡಿಕೊಟ್ಟರು.

ವಾದಿ-ಪ್ರತಿವಾದಿಗಳು ರಾಜೀ ಸಂಧಾನವೇ ಸೂಕ್ತ ಪರಿಹಾರವೆಂದು ತಿಳಿದು ಪರಸ್ಪರ ಒಪ್ಪಿ ಪ್ರಕರಣವನ್ನು ರಾಜೀ ಮಾಡಿಕೊಳ್ಳಲು ಮುಕ್ತ ಮನಸ್ಸಿನಿಂದ ಒಪ್ಪಿದರು. ಅನಂತರ ವಾದಿಯು ಪ್ರತಿವಾದಿಯಿಂದ ಹಣದ ರೂಪದಲ್ಲಿ ಪರಿಹಾರ ಪಡೆದುಕೊಳ್ಳಲು ಒಪ್ಪಿಕೊಂಡರು. ಅಂತೂ ವಾದಿಗೆ ತನ್ನ ಜೀವಿತ ಕಾಲದಲ್ಲಿಯೇ ಈ ಸ್ಥಿರಾಸ್ತಿಗೆ ಸಂಬಂಧಪಟ್ಟ ಮೌಲ್ಯವನ್ನು ಪಡೆದು ತನ್ನ ಇಳಿ ವಯಸ್ಸಿನಲ್ಲಿ ಅನುಭವಿಸುವ ಸೊಯೋಗ ಲಭ್ಯವಾದರೆ ಪ್ರತಿವಾದಿಗೆ ತಾನು ಖರೀದಿಸಿದ ಸ್ಥಿರಾಸ್ತಿಯನ್ನು ಅನುಭವಿಸುವ ಹಕ್ಕು ಲೋಕ ಅದಾಲತ್‌ ರಾಜಿಯಿಂದ ಲಭಿಸಿತು. ವಾದಿಯು ನ್ಯಾಯಾಲಯಕ್ಕೆ ಪಾವತಿಸಿರುವ ಶುಲ್ಕವೂ ಸಹ ಸಂಪೂರ್ಣ ಹಿಂಪಡೆಯುವ ಸವಲತ್ತು ಕೂಡ ನ್ಯಾಯಾಲಯದಿಂದ ದೊರೆತಿದೆ.

Advertisement

ಕಕ್ಷಿಗಾರ 81 ವರ್ಷ ಮೇಲ್ಪಟ್ಟವರಾಗಿದ್ದು, ಪ್ರಕರಣ ನ್ಯಾಯಾಲಯ ದಲ್ಲಿಯೇ ಉಳಿದರೆ ಇನ್ನೊಂದು ತಲೆಮಾರಿನ ತನಕವೂ ಮುಂದುವರಿಯುವ ಸಾಧ್ಯತೆಯನ್ನು ಗಮನಿಸಿ ಅವರಿಗೆ ಅವರ ಜೀವಿತಾವಧಿಯಲ್ಲಿಯೇ ನ್ಯಾಯ ದೊರಕಿಸಲುಪ್ರಯತ್ನಿಸಿ ಲೋಕ ಅದಾಲತ್‌ ಮೂಲಕ ರಾಜಿಯಾಗಲು ಸೂಚಿಸಿದ್ದು, ಅದರಂತೆ ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡಿದೆ.
-ಎಚ್‌.ಆನಂದ ಮಡಿವಾಳ,
ವಾದಿ ಪರ ನ್ಯಾಯವಾದಿ

ಇಲ್ಲಿಯವರೆಗೆ ಪ್ರಕರಣ ನ್ಯಾಯಾಲಯದಲ್ಲಿ ಇದ್ದ ಕಾರಣ ಜಮೀನಿನ ಅಭಿವೃದ್ಧಿ ಅಸಾಧ್ಯ ವಾಗಿತ್ತು. ರಾಜಿಯಿಂದ ಮುಂದಿನ ದಿನಗಳಲ್ಲಿ ಕಕ್ಷಿಗಾರರು ಈ ಸ್ಥಿರಾಸ್ತಿಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು ಮತ್ತು ಅನುಭವಿಸಲು ಹಕ್ಕುಳ್ಳವರಾಗಿದ್ದಾರೆ.
– ಶ್ರೀನಿವಾಸ ನಾಯಕ್‌,
ಪ್ರತಿವಾದಿ ಪರ ನ್ಯಾಯವಾದಿ

Advertisement

Udayavani is now on Telegram. Click here to join our channel and stay updated with the latest news.

Next