ಹೊಸಪೇಟೆ: ರಾಜಕೀಯದಲ್ಲಿ ಸ್ತ್ರೀಯರ ಪ್ರಮಾಣ ಹೆಚ್ಚಾದಷ್ಟು ರಾಜಕೀಯಹಿಂಸಾಚಾರಗಳ ಪ್ರಮಾಣ ಕುಗ್ಗುವುದು ಎಂದುಕನ್ನಡದ ವಿಮರ್ಶಕಿ ಡಾ| ಸುಮಿತ್ರಾಬಾಯಿ ಬಿ.ಎನ್. ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಲೋಹಿಯಾ ಅವರ ಜನ್ಮದಿನದಪ್ರಯುಕ್ತ ಸೋಮವಾರ ಆನ್‌ಲೈನ್ ಮೂಲಕಹಮ್ಮಿಕೊಂಡಿದ್ದ ಲೋಹಿಯಾ ಮತ್ತು ಮಹಿಳೆವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ತ್ರೀಯರು ಸಾರ್ವಜನಿಕ ಚಟುವಟಿಕೆಗಳಲ್ಲಿಕ್ರಿಯಾಶೀಲವಾಗಿ ಭಾಗವಹಿಸಲು ಅವಕಾಶನೀಡಬೇಕು. ಇಲ್ಲದಿದ್ದರೇ ಸ್ತ್ರೀಯರಶಕ್ತಿ-ಸಾಮರ್ಥ್ಯ ನಾಶವಾಗುತ್ತದೆ. ಪ್ರಸ್ತುತದಿನಗಳಲ್ಲಿ ಲೋಹಿಯಾ ಮಹಿಳಾವಾದಿಗುಂಪುಗಳು ಸಂಯೋಜನೆಗೊಳ್ಳುವಲ್ಲಿವಿಫಲವಾಗಿವೆ ಎಂದು ವಿಷಾದಿಸಿದರು. ಲಿಂಗ ತಾರತಮ್ಯ ಜಾತಿ, ವರ್ಗ, ಮತ್ತು ಸಂಸ್ಕೃತಿ ಎಲ್ಲಅಂಶಗಳನ್ನು ದಾಟಿ ಸರ್ವವ್ಯಾಪಿಯಾಗಿವೆ. ಜಾತಿಮತ್ತು ಪಿತೃಪ್ರದಾನ ವ್ಯವಸ್ಥೆ ಮಹಿಳೆಯರನ್ನುದುಪ್ಪಟ್ಟು ಶೋಷಿತರನ್ನಾಗಿ ಮಾಡುವುದು.ಪವಿತ್ರತೆ, ಅಪವಿತ್ರತೆ, ಶುದ್ಧಿ-ಅಶುದ್ಧಿ ಕುರಿತ ವಿಚಾರಗಳು ಮಹಿಳೆಯರನ್ನು ನಿಯಂತ್ರಿಸುತ್ತಿವೆ ಎಂದರು.
ಸಮಾಜದಲ್ಲಿ ಎಲ್ಲ ಮಹಿಳೆಯರು ಶೋಷಿತರೇ. ಒಬ್ಬರದಕ್ಕಿಂತ ಮತ್ತೂಬ್ಬರದುಪರಿಸ್ಥಿತಿ ಬಹಳ ದುರ್ಬರವಾಗಿದೆ. ಸ್ತ್ರೀಯದೇಹ ಅಸಹನೀಯ ಮಾರುಕಟ್ಟೆ ವಸ್ತುವಾಗಿದೆ.ಮಹಿಳೆಯರ ಬಗ್ಗೆ ಭಾವನಾತ್ಮಕ ಕಳಕಳಿ ತೋರಿದ ಅಸಾಧಾರಣವಾದ ಚೈತನ್ಯದಾಯಕ ಬುದ್ದಿಜೀವಿಲೋಹಿಯಾ ಅವರ ಚಿಂತನೆಗಳು ಭಿನ್ನವಾಗಿವೆ. ಮಹಿಳೆಯರ ಆದ್ಯತೆ ಪ್ರಮಾಣಕ್ಕನುಗುಣವಾಗಿಮೀಸಲಾತಿ ಮತ್ತು ಸೌಲಭ್ಯಗಳನ್ನು ಕಲ್ಪಿಸಿ ಕೊಡುವುದು ಮುಖ್ಯ ಎಂಬ ಅಂಶವನ್ನುಪ್ರತಿಪಾದಿಸಿದ್ದರು. ಲೋಹಿಯಾ ಅವರು ಅಂತರ್ಜಾತಿ ಮತ್ತು ಪ್ರೇಮ ವಿವಾಹ ಮತ್ತು ಸರಳ ವಿವಾಹಗಳಿಗೆ ಒತ್ತು ನೀಡಿದ್ದರು ಎಂದರು.
ಕುಲಸಚಿವ ಡಾ| ಎ.ಸುಬ್ಬಣ್ಣ ರೈ ಮಾತನಾಡಿ, ಲೋಹಿಯಾ ಅವರ ವಿಚಾರಗಳುಚಿಂತನೆಗಷ್ಟೇ ಮೀಸಲಾಗಿರಲಿಲ್ಲ. ಅವುಗಳನ್ನುಕಾರ್ಯರೂಪಕ್ಕೂ ತಂದಿದ್ದರು. ಮಹಿಳೆಯರ ಸಮಸ್ಯೆಗಳು ಕಾಲ-ಕಾಲಕ್ಕೆ ಬದಲಾಗುತ್ತಿವೆಯೇ ಹೊರತು ನಿರ್ಮೂಲನಗೊಳ್ಳುತ್ತಿಲ್ಲ. ಆಧುನಿಕಸಮಾಜದಲ್ಲಿ ಮಹಿಳೆಯರ ಸಮಸ್ಯೆಗಳು ಹೊಸಆಯಾಮವನ್ನೇ ಪಡೆದುಕೊಂಡಿವೆ ಎಂದರು.
ಲೋಹಿಯಾ ಅಧ್ಯಯನ ಪೀಠದ ಸಂಚಾಲಕಡಾ| ಎರಿಸ್ವಾಮಿ ಪ್ರಾಸ್ತವಿಕವಾಗಿ ಮಾತನಾಡಿ,ಲೋಹಿಯಾ ಅವರು ಸಮಾಜವಾದಿ ಚಿಂತಕರುಮತ್ತು ಸ್ವಾತಂತ್ರ್ಯ ಹೋರಾಟಗಾರ ಮತ್ತು ಮುತ್ಸದ್ಧಿ ರಾಜಕೀಯ ನಾಯಕರಾಗಿದ್ದರು. ಲೋಹಿಯಾ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು,ಯುವ ಜನತೆ ಅವುಗಳನ್ನು ತಮ್ಮ ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಭಾಷಾಂತರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ| ಮೋಹನ್ ಕುಂಟಾರ್, ಪತ್ರಿಕೋದ್ಯಮವಿಭಾಗದ ಉಪನ್ಯಾಸಕ ಲೋಕೇಶ್ ಎಸ್.ಕೆ. ಉಪಸ್ಥಿತರಿದ್ದರು. ದರ್ಪಣ ಕೇಂದ್ರದ ಉಪನಿರ್ದೇಶಕ ವಿಜಯೇಂದ್ರ ತಾಂತ್ರಿಕ ಸಹಕಾರ ನೀಡಿದರು.