ನವದೆಹಲಿ: ದೇಶದ ಹೈಸ್ಪೀಡ್ ರೈಲು ಯೋಜನೆಗೆ ಸಂಬಂಧಿಸಿದಂತೆ ರಚಿಸಲಾಗಿ ರುವ ಕಂಪೆನಿಗೆ ಲಾಂಛನ (ಲೋಗೋ) ಇರಲಿಲ್ಲ. ಇದೀಗ ಆ ಕೊರತೆಯೂ ದೂರವಾ ಗಿದೆ. ಅಹಮದಾಬಾದ್‌ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ (ಎನ್‌ಐಡಿ)ನ ವಿದ್ಯಾರ್ಥಿ ಲಾಂಛನ ವಿನ್ಯಾಸಗೊಳಿಸಿದ್ದಾರೆ. “ಲೋಕೋಮೋಟಿವ್ ಎಂಜಿನ್ ಜತೆ ಶರವೇಗದಿಂದ ಓಡುವ ಚೀತಾ’ ಈತ ರಚಿಸಿರುವ ಲೋಗೋ. ಇದರಲ್ಲಿ ಬಳಸಿರುವ ಕೆಂಪು ಬಣ್ಣ ಶಾಂತತೆ ಮತ್ತು ಹಸುರು ಬಣ್ಣ ನಂಬಿಕೆಯನ್ನು ಪ್ರತಿನಿಧಿಸುತ್ತದೆ ಎಂದಿದ್ದಾನೆ.
ಲೋಗೋ ಸ್ಪರ್ಧೆಯಲ್ಲಿ ಮೂವರು ವಿದ್ಯಾ ರ್ಥಿಗಳ ಲಾಂಛನವನ್ನು ಆಯ್ಕೆ ಮಾಡ ಲಾ ಗಿದೆ. ಆ ಪೈಕಿ ಬೆಂಗಳೂರಿನ ಎನ್‌ಐಡಿ ವಿದ್ಯಾರ್ಥಿ ರಚಿಸಿ ರುವ ಲೋಗೋ ಮೂರನೇ ಸ್ಥಾನದಲ್ಲಿ ದ್ದರೆ, ದೆಹಲಿಯ ಸ್ಕೂಲ್ ಆಫ್ ಪ್ಲಾನಿಂಗ್ ಆ್ಯಂಡ್ ಆರ್ಕಿಟೆಕ್ಚರ್‌ನ ವಿದ್ಯಾರ್ಥಿ ವಿನ್ಯಾಸ ಮಾಡಿದ ರಚನೆ ಎರಡನೇ ಸ್ಥಾನದಲ್ಲಿದೆ.
ಲಾಂಛನ ರಚನೆಯ ಸ್ಪರ್ಧೆಗೆ ಸಂಬಂಧಿಸಿ ದಂತೆ ಏ.19ರಿಂದ ಮೇ 18ರ ಅವಧಿಯಲ್ಲಿ ದೇಶದ ವಿವಿಧ ಭಾಗಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ಬಂದಿತ್ತು. ಆ ಪೈಕಿ ಮೂರು ಸಂಸ್ಥೆಗಳ ವಿದ್ಯಾರ್ಥಿಗಳು ರಚಿಸಿದ ವಿನ್ಯಾಸ ಅಂತಿಮ ಹಂತಕ್ಕೆ ಆಯ್ಕೆಯಾಗಿದೆ. ಈ ಪೈಕಿ ಅಹಮದಾಬಾದ್‌ನ ಸಂಸ್ಥೆಯ ವಿದ್ಯಾರ್ಥಿ ರಚಿಸಿದ್ದು ಮೊದಲ ಸ್ಥಾನದಲ್ಲಿದೆ ಎಂದಿದ್ದಾರೆ ಆಯ್ಕೆ ಸಮಿತಿ ಮುಖ್ಯಸ್ಥ ಸತೀಶ್ ಗುಜ್ರಾಲ್.
ಈಗಾಗಲೇ ಅಹಮದಾಬಾದ್-ಮುಂಬೈ ನಡುವಿನ ಬುಲೆಟ್ ಟ್ರೈನ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಶಿಲಾನ್ಯಾಸ ನೆರವೇರಿಸಿದ್ದಾರೆ. 2022ರ ಆ.15ರ ವೇಳೆ ಮೊದಲ ಬುಲೆಟ್ ಟ್ರೈನ್ ಕಾರ್ಯಾರಂಭ ಮಾಡಬೇಕು ಎನ್ನುವುದು ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಆಗಿದೆ.