Advertisement

ಛತ್ತೀಸ್‌ಗಢ ಪ್ರವೇಶಿಸಿದ ಮಿಡತೆಗಳ ಹಿಂಡು

07:28 AM Jun 02, 2020 | mahesh |

ರಾಯಪುರ: ದೇಶದ ಏಳು ರಾಜ್ಯಗಳಲ್ಲಿ ರೈತರನ್ನು ಕಾಡಿರುವ ಮಿಡತೆಗಳು ಇದೀಗ ಮಧ್ಯಪ್ರದೇಶದ ಗಡಿ ಮೂಲಕ ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯ ಅರಣ್ಯ ಪ್ರದೇಶ ಪ್ರವೇಶಿಸಿವೆ. ಆದರೆ ಇದುವರೆಗೆ ಯಾವುದೇ ಬೆಳೆ ಹಾಗೂ ಗಿಡಗಳಿಗೆ ಹಾನಿ ಮಾಡಿಲ್ಲ. ರವಿವಾರ ಕೊರಿಯಾ ಜಿಲ್ಲೆಯ ಮಣಿಕ್ತರಾಯ್‌ ಮತ್ತು ಜ್ವಾರಿಟೋಲಾ ಗ್ರಾಮಗಳಲ್ಲಿ ಮಿಡತೆಗಳ ಹಿಂಡು ಕಾಣಿಸಿ ಕೊಂಡಿದೆ. ಆದರೆ ಇದು ಕೇವಲ 300 ಮೀಟರ್‌ ವ್ಯಾಪ್ತಿಯ ಚಿಕ್ಕ ಹಿಂಡಾಗಿದ್ದು, ಕೀಟ ನಾಶಕಗಳನ್ನು ಸಿಂಪಡಿಸುವ ಮೂಲಕ ಕೊಲ್ಲಬಹುದು ಇಲ್ಲವೇ ಬೇರೆಡೆಗೆ ಓಡಿಸಬಹುದು. ಈಗಾಗಲೆ ಸಂಬಂಧಿ ಸಿದ ಎಲ್ಲ ವಿಭಾಗಗಳು ಕೀಟಗಳ ಚಲನವಲನದ ಮೇಲೆ ನಿಗಾ ಇರಿಸಿದ್ದು, ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡಿವೆ ಎಂದು ಕೃಷಿ ಇಲಾಖೆಯ ಹೆಚ್ಚುವರಿ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next