Advertisement
ನೀರು ಸರಬರಾಜಿಲ್ಲ!ಗುರುಪುರ ಕೈಕಂಬ ಪೇಟೆಯಲ್ಲಿರುವ ಈ ಶೌಚಾಲಯದ ನಿರ್ವಹಣೆಯನ್ನು ಶುಚಿ ಇಂಟರ್ ನ್ಯಾಶನಲ್ , ಬೆಂಗಳೂರು ಮಾಡುತ್ತಿದ್ದರು. ಎಪ್ರಿಲ್ ತಿಂಗಳಲ್ಲಿ ಪಡುಪೆರಾರ ಗ್ರಾ.ಪಂ. ನೀರು ಸರಬರಾಜು ಮಾಡದೇ ಇರುವುದರಿಂದ ಈ ಶೌಚಾಲಯಕ್ಕೆ ಬೀಗ ಮುದ್ರೆ ಹಾಕಲಾಯಿತು. ಈ ಬಗ್ಗೆ ಉದಯವಾಣಿ ವರದಿ ಪ್ರಕಟಿಸಿತ್ತು. ಪಂಚಾಯತ್‌ನ ಗಮನಕ್ಕೂ ತರಲಾಗಿತ್ತು. ಆದರೆ ಪಂಚಾಯತ್ ಕೊಳವೆಬಾವಿಯಲ್ಲಿ ನೀರು ಇಲ್ಲ ಎಂದು ಕಾರಣ ಹೇಳಿ ಸುಮ್ಮನಾಗಿತ್ತು.
ಜನರ ಸಮಸ್ಯೆಯನ್ನು ಕಂಡು ಇಲ್ಲಿನ ರಿಕ್ಷಾ ಚಾಲಕ-ಮಾಲಕರು ಸ್ಪಂದಿಸಿ, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದ್ದರು. ಸ್ವಂತ ಖರ್ಚಿನಿಂದ ಎರಡು ಬಾರಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿತ್ತು. ಅಲ್ಲಿಯ ತನಕ ಶೌಚಾಲಯ ಕಾರ್ಯನಿರ್ವಹಿಸುತ್ತಿತ್ತು. ಈಗ ಬೀಗ ಮುದ್ರೆಬಿದ್ದಿದೆ. ಮನವಿಗೂ ಸ್ಪಂದಿಸಿಲ್ಲ
ಎರಡು ತಿಂಗಳಾದರೂ ಈ ಬಗ್ಗೆ ಪಂಚಾಯತ್ ಗಮನ ನೀಡದೇ ಇರುವುದು ಮತ್ತು ಹಲವು ಮನವಿ ಮಾಡಿದರೂ ಸ್ಪಂದಿಸದೇ ಇರುವುದರಿಂದ ಸಾರ್ವಜನಿಕರಿಗೆ, ಮಹಿಳೆಯರಿಗೆ, ವಯಸ್ಕರಿಗೆ ತೊಂದರೆಯಾಗಿರುವ ಬಗ್ಗೆ ಆಕ್ರೋಶಗೊಂಡ ಅಲ್ಲಿನ ನಾಗರಿಕರಿಂದ ಶೌಚಾಲಯದ ಎದುರು ಬ್ಯಾನರ್ ಹಾಕಿದ್ದಾರೆ. ಮೂಲಸೌಕರ್ಯ ಆಡಳಿತ ನಿರ್ವಹಣೆ ಮಾಡದೇ ಇರುವ ಗ್ರಾಮ ಪಂಚಾಯತ್ ಗೆ ಆಡಳಿತಕ್ಕೆ ಧಿಕ್ಕಾರ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
Related Articles
ಈ ಶೌಚಾಲಯಕ್ಕೆ ನೀರು ಸರಬರಾಜಾಗುವ ಪೈಪು ಬ್ಲಾಕ್ ಆಗಿದೆ. ಇದರಿಂದ ನೀರು ವ್ಯವಸ್ಥೆಗೆ ತೊಡಕಾಗಿದೆ. ಶೀಘ್ರ ನೀರಿನ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರ ತೊಂದರೆಗೆ ಸ್ಪಂದಿಸಲಾಗುವುದು.
– ಶಾಂತಾ ಎಂ.
ಪಡುಪೆರಾರ ಗ್ರಾ.ಪಂ.ಅಧ್ಯಕ್ಷೆ
Advertisement