Advertisement

ಲಾಕ್‌ಡೌನ್‌: ಜಿಲ್ಲಾ ಕ್ರೀಡಾ ಇಲಾಖೆಯ ಆದಾಯಕ್ಕೂ ಖೋತ

09:16 PM Apr 26, 2020 | Sriram |

ಉಡುಪಿ: ಗುಂಪು ಚಟುವಟಿಕೆಯನ್ನು ನಿರ್ಬಂಧಿಸಿ ಲಾಕ್‌ಡೌನ್‌ ಆರಂಭದಲ್ಲಿ ಸರಕಾರದ ಇಲಾಖೆಯಲ್ಲಿ ಬರುವ ಕ್ರೀಡಾ ಇಲಾಖೆಯ ಎಲ್ಲ ಚಟುವಟಿಕೆಯನ್ನು ನಿರ್ಬಂಧಿಸಿರುವುದರಿಂದ ಜಿಲ್ಲಾ ಕ್ರೀಡಾ ಇಲಾಖೆಗೂ ಲಕ್ಷಗಟ್ಟಲೆ ನಷ್ಟ ಉಂಟಾಗಿದೆ.

Advertisement

ಎಪ್ರಿಲ್‌- ಮೇ ತಿಂಗಳಲ್ಲಿ ಬೇಸಗೆ ಶಿಬಿರಗಳು ಹೆಚ್ಚು ನಡೆಯುವುದರಿಂದ ಕ್ರೀಡಾಂಗಣ, ಈಜುಕೊಳಗಳಿಂದ ಇಲಾಖೆಯ ಬೊಕ್ಕಸಕ್ಕೆ ಬಹುಪಾಲು ಆದಾಯ ಬರುತ್ತಿತ್ತು.

ಸದ್ಯ ಲಾಕ್‌ಡೌನ್‌ನಿಂದ ಜಿಲ್ಲಾ ಹೊರ ಕ್ರೀಡಾಂಗಣ, ಈಜುಕೊಳ, ಟೆನಿಸ್‌, ಶೆಟಲ್‌ ಬ್ಯಾಡ್ಮಿಂಟನ್‌ ಸೇರಿದಂತೆ ಸರಕಾರಿ ಜಿಮ್‌ಗಳು ಕಾರ್ಯವನ್ನು ನಿಲ್ಲಿಸಿವೆ.

20 ಲಕ್ಷಕ್ಕೂ ಹೆಚ್ಚಿನ ನಷ್ಟ
ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದ ಬಳಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನಿರ್ಮಾಣವಾದ ಈಜುಕೊಳಕ್ಕೆ ಎಪ್ರಿಲ್‌-ಮೇ ತಿಂಗಳಲ್ಲಿ ಅತೀ ಹೆಚ್ಚು ಮಂದಿ ಭೇಟಿ ನೀಡುತ್ತಿದ್ದು ಇದರಿಂದ 15ಲಕ್ಷದ ವರೆಗೆ ವರಮಾನ ಬರುತ್ತಿತ್ತು. ಉಳಿದಂತೆ ನೂರಕ್ಕೂ ಹೆಚ್ಚಿನ ಸದಸ್ಯರಿರುವ ಜಿಮ್‌, ಶಟಲ್‌ ಬ್ಯಾಡ್ಮಿಂಟನ್‌, 30 ಸದಸ್ಯರಿರುವ ಟೆನ್ನಿಸ್‌ ಹಾಗೂ ಇತರ ಆ್ಯತ್ಲೆಟಿಕ್‌ ಕ್ರೀಡೆಗಳಿಂದ ಈ ಎರಡು ತಿಂಗಳಲ್ಲಿ 20ಲಕ್ಷಕ್ಕೂ ಹೆಚ್ಚಿನ ಆದಾಯದ ನಿರೀಕ್ಷೆ ಇತ್ತು.

ಮನೆಯಲ್ಲೆ ತರಬೇತಿ
ಉಳಿದಂತೆ ಈಜುಕೊಳ, ಒಳಾಂಗಣ, ಜಿಲ್ಲಾ ಕ್ರೀಡಾಂಗಣಗಳಿಂದ ಬರುವ ಆದಾಯ ಗುತ್ತಿಗೆ ಆಧಾರಿತ ಸಿಬಂದಿಗಳ ನಿರ್ವಹಣೆ ಮೂಲವಾಗಿದೆ. ಈ ಬಾರಿಯ ಆದಾಯದ ಖೋತದಿಂದ ಇಲಾಖೆಗೆ ದೊಡ್ಡ ಹೊರೆ ಆಗಿದೆ. ಉಳಿದಂತೆ 40ಕ್ಕೂ ಹೆಚ್ಚಿನ ರಾಷ್ಟ್ರಮಟ್ಟದ ಕ್ರೀಡಾಪಟುಗಳು ಈಗ ಮನೆಯಲ್ಲಿಯೇ ತರಬೇತಿ ಪಡೆಯುವಂತಾಗಿದ್ದು ಹಿಂದೆ ಜಿಲ್ಲಾಡಳಿತದ ಕ್ರೀಡಾಂಗಣದಲ್ಲೆ ಅಭ್ಯಾಸ ಮಾಡುತ್ತಿದ್ದರು.

Advertisement

20 ಲ.ರೂ. ನಷ್ಟ
2 ತಿಂಗಳಲ್ಲಿ 20 ಲಕ್ಷ ರೂ.ನಷ್ಟು ಆದಾಯ ನಷ್ಟವಾಗಿದೆ. ಲಾಕ್‌ಡೌನ್‌ ಸಡಿಲಿಕೆ ಆದರೂ ಈಜುಕೊಳ, ಜಿಮ್‌ಗಳಿಗೆ ಅವಕಾಶ ಸಿಗುವುದು ಕಷ್ಟ. 3, 4 ತಿಂಗಳು ಜನರು ಬರುವುದು ಕಷ್ಟ. ಈ ನಷ್ಟ ಸರಿಹೋಗಲು ಮತ್ತೆ 3, 4 ತಿಂಗಳು ಬೇಕಾಗಬಹುದು.
-ಡಾ| ರೋಶನ್‌ ಕುಮಾರ್‌ ಶೆಟ್ಟಿ,
ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next