Advertisement

ಲಾಕ್‌ಡೌನ್‌: ಸೌಪರ್ಣಿಕಾ ನದಿ ನೀರು ಮಲಿನ ಮುಕ್ತ

12:10 AM Apr 28, 2020 | Sriram |

ಕೊಲ್ಲೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೊಲ್ಲೂರಿನಲ್ಲಿ ಹರಿಯುತ್ತಿರುವ ಸೌಪರ್ಣಿಕಾ ಹಾಗೂ ಕಾಶಿ ಹೊಳೆ ನೀರು ಸಂಪೂರ್ಣ ನಿರ್ಮಲವಾಗಿದ್ದು ಮಲಿನವಿಲ್ಲದೆ ಹರಿಯುತ್ತಿದೆ.

Advertisement

ಸೌಪರ್ಣಿಕಾ ಸ್ನಾನಘಟ್ಟದಲ್ಲಿ ಸ್ನಾನ ಮಾಡಿ ಮೂಕಾಂಬಿಕೆಯ ದರ್ಶನ ಮಾಡಿದರೆ ಚರ್ಮ ರೋಗ ಸಹಿತ ಇನ್ನಿತರ ರೋಗ ರುಜಿನಗಳು ಮಾಯವಾಗಿ ಭಕ್ತರು ಸ್ವಸ್ಥರಾಗುತ್ತಾರೆ ಎಂಬಷ್ಟರ ಮಟ್ಟಿಗೆ ಇರುವ ನಂಬಿಕೆಯಿಂದ ಜನರು ಹಾಗೆಯೇ ಮಾಡುತ್ತಿದ್ದರು. ಆದರೆ ಈಗ ನಿರ್ಬಂಧ ಇರುವುದರಿಂದ ಭಕ್ತರು ಬರುವಂತಿಲ್ಲ.

ತ್ಯಾಜ್ಯ ಇಳಿಕೆ
ಇಲ್ಲಿನ ಖಾಸಗಿ ವಸತಿಗೃಹ ಸಹಿತ ಕ್ಷೇತ್ರಕ್ಕೆ ಆಗಮಿಸುತ್ತಿರುವ ಭಕ್ತರು ಎಸೆಯುವ ಪ್ಲಾಸ್ಟಿಕ್‌ ಬಾಟಲಿ ಸಹಿತ ತ್ಯಾಜ್ಯ ನೀರು ನೇರವಾಗಿ ನದಿ ಸೇರುತ್ತದೆ. ವಸತಿ ಗೃಹಗಳ ಶೌಚಾಲಯದ ನೀರು ಕೂಡ ಸೌಪರ್ಣಿಕಾ ನದಿ ಸೇರುತ್ತಿರುವುದು ದುರ್ಗಂಧಯುತ ಕೊಳಚೆ ನೀರಾಗಿ ಮಾರ್ಪಾಡಾಗಲು ಕಾರಣವಾಗಿದೆ. ಈಗ ಯಾವುದೇ ತ್ಯಾಜ್ಯ ನೀರು ನದಿ ಸೇರುತ್ತಿಲ್ಲ.

ಸ್ವತ್ಛತೆಗೆ ಹೆಚ್ಚಿನ ಆದ್ಯತೆ
ಕೊಲ್ಲೂರು ಕ್ಷೇತ್ರದ ತೀರ್ಥಸ್ನಾನ ಘಟ್ಟದ ನದಿ ನೀರು ಶುದ್ದವಾಗಿದ್ದು, ಮುಂದೆಯೂ ಇದನ್ನು ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾ.ಪಂ. ಸಹಕಾರದೊಡನೆ ಕೊಲ್ಲೂರು ಕ್ಷೇತ್ರ ಪರಿಸರದಲ್ಲಿ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
-ಅರವಿಂದ ಎ.ಸುತಗುಂಡಿ,
ಕಾರ್ಯನಿರ್ವಹಣಾ ಧಿಕಾರಿ,ಶ್ರೀ ಕ್ಷೇತ್ರ ಕೊಲ್ಲೂರು

Advertisement

Udayavani is now on Telegram. Click here to join our channel and stay updated with the latest news.

Next