Advertisement

ಲಾಕ್‌ಡೌನ್‌ ನಿಯಮ ಉಲ್ಲಂಘನೆ: 1.28 ಲಕ್ಷ ರೂ. ದಂಡ ವಸೂಲಿ

01:48 PM Jul 18, 2020 | Suhan S |

ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್  ನಿಯಂತ್ರಿಸಲು ಜಿಲ್ಲಾಡಳಿತ ಒಂದು ವಾರ ಲಾಕ್‌ಡೌನ್‌ ಜಾರಿಗೊಳಿಸಿದ್ದರೂ ಜನರು ಅನವಶ್ಯಕವಾಗಿ ತಿರುಗಾಡುವುದು ತಪ್ಪುತ್ತಿಲ್ಲ. ಅನಗತ್ಯವಾಗಿ ಸಂಚರಿಸುವವರಿಗೆ ಅಧಿಕಾರಿಗಳು ದಂಡ ಹಾಕಿ ಬಿಸಿ ಮುಟ್ಟಿಸುತ್ತಿದ್ದಾರೆ.

Advertisement

ನಗರದ ಪ್ರಮುಖ ಬೀದಿಗಳಲ್ಲಿಯೇ ಕೆಲವು ಕಡೆ ಆಟೋ ಸಂಚಾರವೂ ನಡೆಯುತ್ತಿದ್ದು, ಕೆಲವು ಕಡೆ ನಿಯಮ ಉಲ್ಲಂಘಿಸಿ ಚಹಾದಂಗಡಿ ತೆರೆಯಲಾಗಿದೆ. ನಿಯಮ ಉಲ್ಲಂಘಿಸಿ ಗುಟ್ಕಾ ಮತ್ತು ತಂಬಾಕು ಉತ್ಪನ್ನ ಮಾರಲಾಗುತ್ತಿದೆ. ಕೆಲವು ತಾತ್ಕಾಲಿಕ ಬಂಡಿ ಹೋಟೆಲ್‌ನಲ್ಲಿ ಉಪಹಾರ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಇನ್ನು ರಾಜ್ಯ ಹೆದ್ದಾರಿಯಲ್ಲಿರುವ ಕಂದಕೂರ ಗೇಟ್‌ ಬಳಿ ಹೋಟೆಲ್‌ನಲ್ಲಿ ಸಾಮಾಜಿಕ ಅಂತರ ಕಾಪಾಡದೇ ತಿಂಡಿ, ತಿನಿಸು ಸವಿಯುತ್ತಿರುವುದು ಕಂಡುಬಂದಿದೆ.

ಶುಕ್ರವಾರ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿ, ಒಟ್ಟು 1,28,900 ರೂ. ದಂಡ ವಸೂಲಿ ಮಾಡಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ 72,800 ರೂ, ಜಿಲ್ಲಾ ಪೊಲೀಸ್‌ ವತಿಯಿಂದ ಮಾಸ್ಕ್ ಧರಿಸದ 236 ಸಾರ್ವಜನಿಕರಿಂದ 26900 ರೂ, ಸಾಮಾಜಿಕ ಅಂತರ ಕಾಪಾಡದ 16 ಸಾರ್ವಜನಿಕರಿಗೆ 3200 ರೂ. ದಂಡ ವಿಧಿ ಸಲಾಗಿದೆ. ತಂಬಾಕು, ಗುಟ್ಕಾ, ಪಾನ್‌ ಹಾಗೂ ಮದ್ಯ ಸೇವನೆ ಮಾಡಿದ್ದ 68 ಜನರಿಂದ 10,100 ರೂ. ದಂಡ ವಸೂಲಿ ಮಾಡಿ ಐ.ಎಂ.ವಿ. ಕಾಯ್ದೆ ಅಡಿಯಲ್ಲಿ 39 ಪ್ರಕರಣಗಳನ್ನು ದಾಖಲಿಸಿ 15,900 ರೂ. ದಂಡ ಹಾಕಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next