ಇದು ಉದ್ಯಮಿಗಳು, ವೈದ್ಯರ ಅಭಿಮತ. ಕೊರೊನಾ ಹೆಚ್ಚುತ್ತಿದ್ದು, ಲಾಕ್‌ಡೌನ್ ಸದ್ದು ಕೇಳುತ್ತಿದೆ. ಆದರೆ ಉದ್ಯಮಿಗಳು, ವೈದ್ಯರು ಲಾಕ್ ಪರಿಹಾರವಲ್ಲ ಎಂದಿದ್ದಾರೆ.
Advertisement
ಪರೀಕ್ಷೆ ಹೆಚ್ಚಳವೇ ಮದ್ದುಈ ಹಿಂದೆ ಸರಕಾರವು ಪರೀಕ್ಷೆ ಹೆಚ್ಚಿಸಿ ಗೆದ್ದಿದೆ. ಕಳೆದ ಆಗಸ್ಟ್‌ನಲ್ಲಿ ನಿತ್ಯ 50 ಸಾವಿರ ಇದ್ದ ಪರೀಕ್ಷೆಗಳನ್ನು ಅಕ್ಟೋಬರ್‌ನಲ್ಲಿ ನಿತ್ಯ ಒಂದು ಲಕ್ಷಕ್ಕೆ ಹೆಚ್ಚಿಸಲಾಯಿತು. ಇದರಿಂದ ಸೋಂಕುಪೀಡಿತರು ಶೀಘ್ರ ಪತ್ತೆಯಾಗಿ ಸೋಂಕು ಹರಡುವಿಕೆ ಕಡಿಮೆಯಾಯಿತು.
ಹಿಂದೆ ಲಾಕ್‌ಡೌನ್ ಸಂದರ್ಭ ವೈದ್ಯ ಕೀಯ ವ್ಯವಸ್ಥೆ ಬಲಪಡಿಸಲಾಯಿತು. ಜನ ರಿಗೆ ತಿಳಿವಳಿಕೆ ನೀಡಲಾಯಿತು. ಜತೆಗೆ ಜನರ ಕಷ್ಟ ಅರ್ಥವಾಯಿತು. ಹೀಗಾಗಿ ಅನ್‌ಲಾಕ್ ಬಳಿಕ ಸೋಂಕು 10 ಪಟ್ಟು ಹೆಚ್ಚಿದರೂ ಮತ್ತೆ ಲಾಕ್‌ಡೌನ್ ಪ್ರಸ್ತಾವ ಬರಲಿಲ್ಲ. ಈಗಲೂ ವೈದ್ಯಕೀಯ ವ್ಯವಸ್ಥೆ ಬಲವರ್ಧನೆ, ಕೊರೊನಾ ನಿಯಮ ಪಾಲನೆಯೇ ಮದ್ದು.
Related Articles
– ಲಾಕ್ ಡೌನ್‌ನಿಂದ ಸಣ್ಣ, ಬೃಹತ್ ಕೈಗಾ ರಿಕೆ ಭಾರೀ ನಷ್ಟ ಅನು ಭ ವಿ ಸಿತ್ತು. ಮತ್ತೆ ಲಾಕ್ ಮಾಡಿ ದರೆ ಪಾತಾಳಕ್ಕಿಳಿಯಲಿದೆ.
– ಎಚ್ಚರ ವಹಿ ಸಿ ದ್ದೇವೆ. ಮಾರ್ಗ ಸೂ ಚಿ ಪಾಲಿಸುತ್ತಿದ್ದೇವೆ. ಹೊರ ರಾಜ್ಯ ಗ ಳಿಂದ ಬರು ವ ವರ ಮೇಲೆ ನಿಗಾ ಇರಿಸಿ.
– ಜಾತ್ರೆ, ಸಭೆ-ಸಮಾರಂಭ, ರಾಜಕೀಯ ಪ್ರಚಾರ ಸಭೆಗಳಿಗೆ ಬ್ರೇಕ್ ಹಾಕಿ.
Advertisement
ತಜ್ಞ ವೈದ್ಯರ ಮಾತೇನು?ಕೊರೊನಾ ಮೊದಲ ಅಲೆಯ ಸಂದರ್ಭ ಪ್ರಕರಣಗಳನ್ನು ಹತೋಟಿಗೆ ತಂದದ್ದು ಲಾಕ್ ಡೌನ್ ಅಲ್ಲ; ಪರೀಕ್ಷೆ ಹೆಚ್ಚಳ, ಪೀಡಿತರ ಶೀಘ್ರ ಪತ್ತೆ ಮತ್ತು ಚಿಕಿತ್ಸೆ. ಕೊರೊನಾ ಪ್ರಕರಣಗಳು ಏರಿ ಗರಿಷ್ಠಕ್ಕೆ ತಲುಪಿ ಮತ್ತೆ ಇಳಿಯುತ್ತವೆ. ಲಾಕ್‌ಡೌನ್‌ನಿಂದ ಸೋಂಕಿನ ಸ್ಫೋಟವನ್ನು ಮುಂದೂಡಿದಂತಾಗುತ್ತದೆ ಅಷ್ಟೇ. ಮತ್ತೆ ಲಾಕ್ ಇಲ್ಲ: ಸಿಎಂ
ಮತ್ತೆ ಲಾಕ್‌ಡೌನ್ ಮಾಡುವುದೇ ಇಲ್ಲ ಎಂದು ಸಿಎಂ ಬಿಎಸ್‌ವೈ ಸ್ಪಷ್ಟಪಡಿಸಿದ್ದಾರೆ. ಕೋವಿಡ್ ನಿಯಂತ್ರಣಕ್ಕಾಗಿ ಸರಕಾರ ಈಗಾಗಲೇ ಅವಶ್ಯವಿದ್ದ ಜಿಲ್ಲೆಗಳಲ್ಲಿ ಕ್ರಮ ಕೈಗೊಂಡಿದೆ ಎಂದಿದ್ದಾರೆ.