ಕೋಲಾರ: ಜಿಲ್ಲೆಯನ್ನು ಹಸಿರು ವಲಯ ವಾಗಿಸಲು 40ಕ್ಕೂ ಹೆಚ್ಚು ದಿನಗಳಿಂದಲೂ ಜಿಲ್ಲಾಡಳಿತ ಶ್ರಮಿಸಿತ್ತು. ಆದರೆ, ಲಾಕ್‌ಡೌನ್ ಸಡಿಲಿಕೆ ಮಾಡಿದ್ದರಿಂದ ಪ್ರತಿ ನಿತ್ಯ ಬರುತಿ ರುವ ನೂರಾರು ವಲಸಿಗರಿಂದಾಗಿ ರೆಡ್‌ಝೋನ್ ಆತಂಕ ಎದುರಿಸುವಂತಾಗಿದೆ. ಜಿಲ್ಲೆ ಆಂಧ್ರಪ್ರದೇಶ, ತಮಿಳುನಾಡು, ಚಿಕ್ಕ ಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾತರ ಗಡಿಗಳನ್ನೊಳಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ 75 ಜಿಲ್ಲೆಯಲ್ಲಿ ಹಾದು ಹೋಗಿದೆ.
ಲಾಕ್ ಡೌನ್ ಸಡಿಲಿಕೆಯ ಪರಿಣಾಮ ಜಿಲ್ಲೆಗೆ ಎಲ್ಲಾ ದಿಕ್ಕುಗಳಿಂದಲೂ ಜನ ಬರುತ್ತಿದ್ದು, ಹಸಿರುವಲಯದಲ್ಲಿನ ಜಿಲ್ಲೆಯನ್ನು ಉಳಿಸಿ ಕೊಳ್ಳುವುದು ಸವಾಲಿನ ಪ್ರಶ್ನೆಯಾಗಿದೆ. ನಿತ್ಯವೂ ಆತಂಕ ಎದು ರಾಗುವಂತಾಗಿದೆ. ಆರೋಗ್ಯ ತಪಾಸಣೆ ನಡೆಸಿ ಕ್ವಾರಂಟೈನ್ ಮಾಡಲು ಅಧಿಕಾರಿಗಳು ಅಹಿರ್ನಿಶಿ ಶ್ರಮಿಸುವಂತಾಗಿದೆ.
ಪಾಸಿಟಿವ್ ವ್ಯಕ್ತಿಗಳ ಓಡಾಟ!: ಹಸಿರು ಜಿಲ್ಲೆಯಾಗಿರುವ ಕೋಲಾರದಲ್ಲಿ ಕೊರೊನಾ ಪಾಸಿಟಿವ್ ವ್ಯಕ್ತಿಗಳು ಓಡಾಡಿ ಹೋಗಿರುವ ಘಟನೆಗಳು ತೀರ್ವ ಆತಂಕಕ್ಕೆ ಕಾರಣವಾಗಿದೆ. ಹಾಗೆಯೇ ಗಡಿಯಲ್ಲಿಯೇ ಪಾಸಿಟಿವ್ ವ್ಯಕ್ತಿ ಗಳನ್ನು ಗುರುತಿಸಿ ವಾಪಸ್ ಕಳುಹಿಸಿ ರುವ ಕೆಲಸವೂ ಆಗುತ್ತಿದೆ. ಕೋಲಾರಕ್ಕೆ ಮಾಲೂರು ಮೂಲದ 11 ಮಂದಿ ಗುಂಪೊಂದು ಗುಜರಾತ್‌ನಿಂದ ಆಗ ಮಿಸಿದ್ದು,
ದೇವನಹಳ್ಳಿ ಮೂಲಕ ಬಸ್‌ನಲ್ಲಿ ಕೋಲಾರ ಗಡಿಪ್ರವೇಶಿಸಲು ಮುಂದಾಗಿ ದ್ದರು. ಈ ಪೈಕಿ ಒಬ್ಬ ಪಾಸಿಟಿವ್ ಆಗಿದ್ದು, ಡಿ.ಸಿ. ತುರ್ತು ಕ್ರಮವಹಿಸಿ ಆತನಿದ್ದ ತಂಡ ವನ್ನು ವಾಪಸ್ ಕಳುಹಿಸಿದ್ದರು. ಇದಾದ ಎರಡೇ ದಿನಕ್ಕೆ ಕೋಲಾರದ ಗಡಿ ಆಂಧ್ರಪ್ರದೇಶದ ವಿಕೋಟದಲ್ಲಿ ಐವರು ಪಾಸಿಟಿವ್ ವ್ಯಕ್ತಿಗಳು ಪತ್ತೆಯಾಗಿದ್ದರು. ಈ ಪೈಕಿ ಒಬ್ಬ ತರಕಾರಿ ವ್ಯಾಪಾರಿಯಾಗಿದ್ದು,
ಕೋಲಾರ, ಬೇತ ಮಂಗಲ, ಕೆಜಿಎಫ್ನಲ್ಲಿ ಸುತ್ತಾಡಿ ಹೋಗಿರುವುದು ಟ್ರಾವೆಲ್ ಹಿಸ್ಟರಿ ಯಿಂದ ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಶ್ರೀನಿ ವಾಸಪುರ ತಾಲೂಕಿನ ಜ್ಯೂಸ್ ಫ್ಯಾಕ್ಟರಿಗೆ ಪುಂಗನೂರು ಪಾಸಿಟಿವ್ ವ್ಯಕ್ತಿಯೊಬ್ಬರು ಬಂದು ಹೋಗಿದ್ದರು. ಹೀಗೆ ಇವರ ಮೊಬೈಲ್ ಟ್ರಾಕ್ ಮಾಡಿ ಇವರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತ ಸುಮಾರು 100 ಮಂದಿ ಯನ್ನು ಕ್ವಾರಂಟೈನ್ ಮಾಡಿ ಎಚ್ಚರವಹಿಸಲಾಗಿದೆ.
ಲಾಕ್‌ಡೌನ್ ಸಡಿಲಿಕೆಯಿಂದ ವಲಸೆಗಾರರ ಆಗಮನದ ಜೊತೆಗೆ ಸಮಸ್ಯೆಗಳೂ ಹೆಚ್ಚಾ ಗಿವೆ. ಹೀಗೆ ಬಂದವರ ವಿಳಾಸ, ದೂರವಾಣಿ ಸಂಖ್ಯೆ ಪಡೆದು, ಆರೋಗ್ಯ ತಪಾಸಣಾ ಮಾಡಿ ಜಿಲ್ಲೆಗೆ ಬಿಟ್ಟು ಕೊಳ್ಳಲು ಆರೋಗ್ಯ ಸಿಬ್ಬಂದಿ ಹಗಲು ರಾತ್ರಿ ಚೆಕ್ ಪೋಸ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಜ್ವರ ಇದ್ದ ವರು ಹಾಗೂ ಅನುಮಾನಾಸ್ಪದ ವ್ಯಕ್ತಿಗಳಿಗೆ ರ್ಯಾಪಿಡ್ ಟೆಸ್ಟ್ ಮಾಡಿಸಿ ಅವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುತ್ತಿದೆ.
-ಡಾ.ವಿಜಯಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ
ಕೆಂಪು ಹಾಗೂ ಹೊರ ಜಿಲ್ಲೆಗಳಿಂದ ಬಂದವರಿಂದ ಕೊರೊನಾ ಹರಡದಂತೆ ಎಚ್ಚರವಹಿಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಈವರೆಗೂ ಹಸಿರಾಗೇ ಇರುವ ಜಿಲ್ಲೆಯ ಜನತೆಗೆ ಇನ್ನೂ ಪರಿಸ್ಥಿತಿ ಅರ್ಥಆಗುತ್ತಿಲ್ಲ.
-ಸಿ.ಸತ್ಯಭಾಮ, ಡೀಸಿ
* ಕೆ.ಎಸ್.ಗಣೇಶ್