Advertisement

ಜನರು ಮಾಸ್ಕ್ ಧರಿಸದಿದ್ದರೆ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿ: ಉದ್ಧವ್ ಠಾಕ್ರೆ ಎಚ್ಚರಿಕೆ

08:14 AM Feb 22, 2021 | Team Udayavani |

ಮುಂಬೈ: ಜನರು ಮಾಸ್ಕ್ ಧರಿಸದಿದ್ದರೇ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಗೆ ತರಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.

Advertisement

ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಉದ್ದವ್ ಠಾಕ್ರೆ ಈ ಘೋಷಣೆ ಹೊರಡಿಸಿದ್ದು, ಸೋಂಕಿತರ ಸಂಖ್ಯೆ ಹೆಚ್ಚಿರುವ ಪ್ರದೇಶದಲ್ಲಿ ಇಂದು ಸಂಜೆಯಿಂದಲೇ ಲಾಕ್ ಡೌನ್ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ಏಕಾಏಕಿ ಲಾಕ್ ಡೌನ್ ಜಾರಿಗೆ ತರುವ ಯಾವುದೇ ಉದ್ದೇಶಗಳಿಲ್ಲ. ಆದರೇ ಜನರು ಸರ್ಕಾರದ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು. ಅಭಿವೃದ್ದಿ ಕಾರ್ಯಗಳಿಗೆ ತೊಡಕಾಗದಂತೆ ಅಗತ್ಯ ಪ್ರದೇಶಗಳಲ್ಲಿ ಮಾತ್ರ ಲಾಕ್ ಡೌನ್ ಜಾರಿಗೆ ತರಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ದಿನಭವಿಷ್ಯ: ಇಂದು ಈ ರಾಶಿಯವರು ವಾಹನ, ಗ್ಯಾಸ್‌, ವಿದ್ಯುತ್‌ ಗಳಿಂದ ಜಾಗರೂಕರಾಗಿರಿ…

ಅಮರಾವತಿ ಮತ್ತು ಆಚಲ್ ಪುರ ನಗರಗಳಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ಹೇರಲಾಗಿದೆ., ಅಕೋಲಾ, ಬುಲ್ದಾನ, ವಾಶೀಂ ಮತ್ತು ಯವತ್ಮಾಲ್ ಸೇರಿದಂತೆ ಕೆಲವು ಜಿಲ್ಲೆಗಳನ್ನು ಭಾಗಶಃ ಬಂದ್ ಮಾಡಲಾಗಿದೆ. ಅಮರಾವತಿಯಲ್ಲಿ ಇಂದು 1000 ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ  40 ಸಾವಿರಕ್ಕಿಂತ ಸಕ್ರಿಯ ಪ್ರಕರಣಗಳಿವೆ,

Advertisement

ಕಳೆದ 24 ಗಂಟೆಗಳಲ್ಲಿ 6,971 ಹೊಸ ಕೋವಿಡ್  ಪ್ರಕರಣಗಳು ವರದಿಯಾಗಿವೆ. 2020ರ ಮಾರ್ಚ್ ನಲ್ಲಿ ಕೋವಿಡ್ ವೈರಸ್ ಆರಂಭವಾದಾಗ ಔಷಧ ಇರಲಿಲ್ಲ, ಈಗ ಲಸಿಕೆ ಲಭ್ಯವಿದೆ. ಮಹಾರಾಷ್ಟ್ರದಲ್ಲಿ ಈವರೆಗೆ 9 ಲಕ್ಷ ಮಂದಿ ಲಸಿಕೆ ಫಲಾನುಭವಿಗಳಿದ್ದಾರೆ ಎಂದು ಸಿಎಂ ಉದ್ಧವ್ ಠಾಕ್ರೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮೀಸಲಾತಿಗೆ ಸಂಗ್ರಾಮ : ಸರಕಾರಕ್ಕೆ ಗಡುವು ನೀಡಿದ ಪಂಚಮಸಾಲಿ ಸಮುದಾಯ

 

Advertisement

Udayavani is now on Telegram. Click here to join our channel and stay updated with the latest news.

Next