Advertisement
ಕೋವಿಡ್ ಸೋಂಕು ಪ್ರೇರಿತ ಲಾಕ್‌ಡೌನ್‌ನಿಂದಶೇ. 96ರಷ್ಟು ಜನರು ಆದಾಯವನ್ನು ಕಳೆದುಕೊಂಡಿದ್ದಾರೆ ಎಂದು ಸಾಮಾಜಿಕ ಸಂಸ್ಥೆ ಹೇಳಿದೆ.
Related Articles
Advertisement
ಕಳೆದ ವರ್ಷ ಲಾಕ್‌ಡೌನ್ ಜಾರಿಗೆಬಂದ ಮೊದಲ ಕೆಲವು ತಿಂಗಳುಗಳಲ್ಲಿಪ್ರತಿಕ್ರಿಯಿಸಿದವರ ಗಳಿಕೆಯ ಸ್ಥಿತಿಯ ಬಗ್ಗೆಕೇಳಿದಾಗ, ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇ. 43ರಷ್ಟು ಜನರಿಗೆ ಯಾವುದೇ ಆದಾಯವಿಲ್ಲ. ಅವರಲ್ಲಿ ಕೇವಲ ಶೇ. 10ರಷ್ಟು ಜನರು ಮಾತ್ರ ಲಾಕ್‌ಡೌನ್ ಪೂರ್ವದಲ್ಲಿ ಗಳಿಸಿದ ಆದಾಯಕ್ಕೆಮರಳಿದ್ದಾರೆ. ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಯಾವುದೇ ಆದಾಯವಿಲ್ಲದ ಶೇ. 34ರಷ್ಟು ಜನರ ಪರಿಸ್ಥಿತಿ ಸೆಪ್ಟಂಬರ್-ಅಕ್ಟೋಬರ್ ವರೆಗೆಯಾವುದೇ ಬದಲಾವಣೆ ಕಂಡಿರಲಿಲ್ಲ ಎಂದು ಅವರು ಹೇಳಿದ್ದಾರೆ. ಶೇ. 12 ಜನರು ತಮ್ಮ ಆಭರಣಗಳನ್ನು ಮಾರಾಟ ಮಾಡಿದ್ದಾರೆ ಮತ್ತು ಶೇ. 3ರಷ್ಟು ಜನರು ಲಾಕ್‌ಡೌನ್ ಸಮಯದಲ್ಲಿ ಆಹಾರವನ್ನು ಖರೀದಿಸಲು ತಮ್ಮ ಜಮೀನು ಮಾರಾಟ ಮಾಡಿದ್ದಾರೆ ಎಂದು ಮುಕ್ತಾ ಶ್ರೀವಾಸ್ತವ ಹೇಳಿದ್ದಾರೆ.
ಪೌಷ್ಠಿಕಾಂಶದ ಅಂಶಗಳಲ್ಲಿ ಧಾನ್ಯಗಳಕಡಿಮೆ ಬಳಕೆ ಶೇ. 63ರಷ್ಟು, ತರಕಾರಿಗಳು ಶೇ. 76ರಷ್ಟು, ದ್ವಿದಳ ಧಾನ್ಯಗಳು ಶೇ.71ರಷ್ಟು ಮತ್ತು ಮಾಂಸಾಹಾರ ಶೇ. 82ರಷ್ಟು ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.
ಸ್ನೇಹಿತರು, ಸಂಬಂಧಿಕರಿಂದ ಸಾಲ :
ಸಮೀಕ್ಷೆಗೆ ಒಳಪಡಿಸಿದ ಒಟ್ಟು ಮಂದಿಯ ಪೈಕಿ ಶೇ. 52ರಷ್ಟು ಗ್ರಾಮೀಣ ಪ್ರದೇಶದವರು ಮತ್ತು ಉಳಿದವರು ನಗರ ವ್ಯಾಪ್ತಿಯವರು. ಸಮೀಕ್ಷೆಯಲ್ಲಿ ಶೇ. 60ರಷ್ಟು ಮಹಿಳೆಯರು ಸೇರಿದ್ದಾರೆ. ಈಗಾಗಲೇ ಕಡಿಮೆ ಆದಾಯದಿಂದಾಗಿ ಕುಟುಂಬದ ನಿರ್ವಹಣೆ ಮಾಡುವುದು ಗ್ರಾಮೀಣ ಜನರಿಗೆ ಕಷ್ಟವಾಗುತ್ತಿದೆ. ರಾಷ್ಟ್ರವ್ಯಾಪಿ ಆಹಾರ ಹಕ್ಕು ಅಭಿಯಾನದ ಅಂಗವಾಗಿ ನಡೆಸಿದ ಸಮೀಕ್ಷೆಯ ಪ್ರತಿಸ್ಪಂದಕರಲ್ಲಿ ಶೇ. 49ರಷ್ಟು ಜನರು ಆಹಾರವನ್ನು ಖರೀದಿಸಲು ಸ್ನೇಹಿತರು ಮತ್ತು ಸಂಬಂಧಿಕರಿಂದ ಹಣವನ್ನು ಸಾಲವಾಗಿ ಪಡೆಯಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.