Advertisement
ಲಾಕ್‌ಡೌನ್‌ನಿಂದ ತಕ್ಕಮಟ್ಟಿಗೆ ಈ ಪ್ರಕ್ರಿಯೆಗೆ ಬ್ರೇಕ್ ಬಿದ್ದಿದ್ದು, ಪರೋಕ್ಷವಾಗಿ ಮೀನುಗಳು ನಿಶ್ಚಿಂತವಾಗಿರಲು ಪೂರಕ ವಾತಾವರಣ ಸೃಷ್ಟಿಸಿವೆ. ಮೀನುಗಾರಿಕೆ ಇಲಾಖೆಯಿಂದ ಗ್ರಾಪಂ ಕೆರೆ ಹಾಗೂ ನಿಗದಿತ ಮೀನು ಉತ್ಪಾದನಾ ಕೆರೆ ಅಥವಾ ಪಾಂಡ್, ಖಾಸಗಿ ಮೀನು ಸಾಕಾಣಿಕೆ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್‌ಗಳಿಂದ ಸಾಕಷ್ಟು ಸಮಸ್ಯೆಯಾಗು ತ್ತಿದ್ದವು. ಕಲ್ಲು ಗಣಿಗಾರಿಕೆಯಲ್ಲಿ ಬಳಸುವ ಸ್ಫೋಟಕ ದಿಂದ ಮೀನುಗಳು ಬೆಳವಣಿಗೆ ಪೂರ್ವದಲ್ಲೇ ಸಾಯುತ್ತಿದ್ದವು. ಈಗ ಕಲ್ಲು ಗಣಿಗಾರಿಕೆ ಕಡಿಮೆಯಾಗಿ ರುವು ದರಿಂದ ಬೆಂಗಳೂರಿನ ಹೊರವಲಯಗಳ ಮೀನು ಸಾಕಾಣಿಕೆದಾರಿಗೆ ಹೆಚ್ಚು ಅನುಕೂಲವಾಗಿದೆ ಎಂದು ಒಳನಾಡು ಮೀನು ಸಾಕಾಣಿಕೆದಾರ ಮಂಜುನಾಥ್ ಮಾಹಿತಿ ನೀಡಿದರು.
Related Articles
Advertisement
ಎಲ್ಲೆಲ್ಲೆ ಹೆಚ್ಚು ಮೀನುಗಾರಿಕೆ?: ಶಿವಮೊಗ್ಗ ವಲಯದ ತೀರ್ಥಹಳ್ಳಿ ಶಿಕಾರಿಪುರ, ಭದ್ರಾವತಿ, ಶಿವಮೊಗ್ಗ, ಸಾಗರ, ಹೊನ್ನಾಳಿ, ಚೆನ್ನಗಿರಿ, ದಾವಣಗೆರೆ ಹರಿಹರ, ಜಗಳೂರು, ಚಿಕ್ಕಮಗಳೂರಿನಲ್ಲಿ ಒಳನಾಡು ಮೀನುಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ. ಅಲ್ಲದೆ, ಬೆಂಗಳೂರು ವಲಯದ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಆನೇಕಲ್, ತಿಪಟೂರು, ಗುಬ್ಬಿ, ಬಳ್ಳಾರಿ ವಲಯದ ರಾಯಚೂರು, ಕೊಪ್ಪಳ, ಯಾದಗಿರಿ, ಬೀದರ್, ಬೆಳಗಾವಿ ವಲಯದ ರಾಮದುರ್ಗ, ಬೈಲಹೊಂಗಲ, ಶಿರಹಟ್ಟಿ, ಬದಾಮಿ, ಬಾಗಲಕೋಟೆ, ಹುನಗುಂದ, ಹಾವೇರಿ,ಸವಣೂರು, ಬ್ಯಾಡಗಿ, ಹಾನಗಲ್, ರಾಣೇಬೆನ್ನೂರು, ಹಿರೇಕೇರೂರು, ಮೈಸೂರು ವಲಯದ ಎಚ್.ಡಿ. ಕೋಟೆ, ರಾಮನಗರ, ಮಾಗಡಿ, ಕುಣಿಗಲ್, ಕನಕಪುರ, ಚಿಂತಾಮಣಿ, ಚಿಕ್ಕಬಳ್ಳಾಪುರ ಮೊದಲಾದ ಕಡೆಗಳಲ್ಲಿ ಕೆರೆ ಹಾಗೂ ಕೊಳಗಳಲ್ಲಿ ಮೀನು ಸಾಕಾಣಿಕೆ ವ್ಯಾಪಕವಾಗಿ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ವಿವರ ನೀಡಿದರು.
ಹೆಚ್ಚೇನೂ ಸಮಸ್ಯೆ ಆಗಿಲ್ಲ: ಚನ್ನಪಟ್ಟಣ, ಮಾಗಡಿ, ಆನೇಕಲ್, ತಿಪಟೂರು, ಕುಣಿಗಲ್, ಚಿಂತಾಮಣಿ, ಮಳವಳ್ಳಿ, ಮದ್ದೂರು, ರಾಮನಗರ ಸಹಿತವಾಗಿ ಬೆಂಗಳೂರಿನ ಹೊರ ವಲಯದ ಜಿಲ್ಲೆಗಳಲ್ಲಿ ಕಲ್ಲು ಗಣಿಗಾರಿಕೆ, ಜಲ್ಲಿ ಕ್ರಷರ್ ಹೆಚ್ಚಿರುವುದರಿಂದ ಮೀನುಸಾಕಾಣಿಕೆ ದಾರಿಗೆ ಅನಾನುಕೂಲ ಆಗುತ್ತಿತ್ತು. ಈಗ ಸ್ವಲ್ಪ ಕಾಲದಿಂದ ಸ್ಫೋಟಕ ಬಳಕೆ ನಿಂತಿರುವುದರಿಂದ ಹೆಚ್ಚೇನು ಸಮಸ್ಯೆ ಆಗಿರಲಿಕ್ಕಿಲ್ಲ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
ಕಲ್ಲು ಕ್ವಾರಿ ಅಥವಾ ಗಣಿಗಾರಿಕೆ ಸ್ಫೋಟದಿಂದ 500 ಮೀಟರ್ ಒಳಗಿರುವ ಮೀನಿನ ಹೊಂಡ ಅಥವಾ ಮೀನು ಸಾಕಾಣಿಕೆ ಕೆರೆಯಲ್ಲಿರುವ ಮೀನುಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ನಿರಂತರ ಶಬ್ಧ ಹಾಗೂ ತರಂಗಗಳು ಉಂಟಾಗುತ್ತಿದ್ದರೆ ಮೀನುಗಳು ಬದುಕುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ. ಇದರಿಂದ ಎಷ್ಟೇ ಆರೋಗ್ಯ ಪೂರ್ಣ ಮೀನು ಆದರೂ ಸಾಯುತ್ತವೆ.-ಡಾ.ರಾಮಲಿಂಗ, ಮಿನುಗಾರಿಕೆ ಸಹಾಯಕ ನಿರ್ದೇಶಕ, ಹೆಸರುಘಟ್ಟ ಮೀನುಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರ * ರಾಜು ಖಾರ್ವಿ ಕೊಡೇರಿ