Advertisement

ಲಾಕ್‌ಡೌನ್‌: ಬಸ್‌ಗಳಲ್ಲಿ ಮುಂಗಡ ಬುಕ್ಕಿಂಗ್‌

10:30 AM Apr 04, 2020 | Sriram |

ಮಂಗಳೂರು: ಕೋವಿಡ್ 19 ಆತಂಕದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಎ. 14ರ ವರೆಗೆ ಲಾಕ್‌ಡೌನ್‌ ಇದ್ದು ಬಳಿಕದ ಪರಿಸ್ಥಿತಿಯ ಬಗ್ಗೆ ಸದ್ಯಅನಿಶ್ಚಿತತೆ ಇದೆ. ಆದರೂ ವಿವಿಧ ಪ್ರದೇಶಗಳಿಗೆ ತೆರಳುವ ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್‌ಗಳು ಎ. 15ರಿಂದಲೇ ಮುಂಗಡ ಬುಕ್ಕಿಂಗ್‌ ಆರಂಭಿಸಿವೆ.

Advertisement

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುವ ಮಂದಿ ಈಗಾಗಲೇ ತಮ್ಮ ತಮ್ಮ ಊರುಗಳಿಗೆ ಆಗಮಿಸಿದ್ದಾರೆ. ಲಾಕ್‌ಡೌನ್‌ ಮುಕ್ತಾಯದ ಬಳಿಕ ಪುನಃ ಕಾರ್ಯಕ್ಷೇತ್ರಕ್ಕೆ ತೆರಳುವ ಕಾರಣದಿಂದಾಗಿ ಕೆಲವೊಂದು ಕೆಎಸ್ಸಾರ್ಟಿಸಿ, ಖಾಸಗಿ ಬಸ್‌ಗಳು ಈಗಾಗಲೇ ಮುಂಗಡ ಬುಕ್ಕಿಂಗ್‌ ಆರಂಭಿಸಿವೆ. ಕೆಲವೊಂದು ಸೀಟುಗಳು ಕೂಡ ಈಗಾಗಲೇ ಬುಕ್ಕಿಂಗ್‌ ಆಗಿದೆ.

ರಾಜ್ಯದ 83 ಘಟಕಗಳ 17 ವಿಭಾಗಗಳಿಂದ 8,603 ಕೆಎಸ್ಸಾರ್ಟಿಸಿ ಬಸ್‌ಗಳು ಈಗಾಗಲೇ ವಿವಿಧ ಭಾಗಗಳಿಗೆ ಸಂಚರಿಸುತ್ತಿವೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳೆದ ಮೂರು ವಾರಗಳಿಂದ ಯಾವುದೇ ಸರಕಾರಿ ಬಸ್‌ಗಳು ಸಾರ್ವಜನಿಕರಿಗೆ ಕಾರ್ಯಾಚರಣೆ ನಡೆಸುತ್ತಿಲ್ಲ. ತುರ್ತು ಸೇವೆಗೆಂದು ಮಂಗಳೂರು, ಮೈಸೂರು ನಗರ, ದಾವಣಗೆರೆ ಮತ್ತು ಶಿವಮೊಗ್ಗ ವಿಭಾಗಗಳಲ್ಲಿ ಒಟ್ಟು 15 ಬಸ್‌ಗಳು ಮಾತ್ರ ಸಂಚರಿಸುತ್ತಿವೆ.

ರಾಜ್ಯದ ವಿವಿಧ ಭಾಗಗಳಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್‌ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಈಗಾಗಲೇ ಆರಂಭವಾಗಿದೆ. ಮಂಗಳೂರಿನಿಂದ ಬೆಂಗಳೂರಿತೆ ಎ. 15ರಂದು ಸಾಮಾನ್ಯ ಸಾರಿಗೆಗೆ 406 ರೂ.ನಿಂದ ಆರಂಭವಾಗಿ 998 ರೂ.ನ ವೋಲ್ವೋ ಮಲ್ಟಿ ಆ್ಯಕ್ಸೆಲ್‌ ಸ್ಲಿàಪರ್‌ ಬಸ್‌ಗಳು ಕೂಡ ಲಭ್ಯವಿವೆ.

ಖಾಸಗಿ ಬಸ್‌ಗಳಲ್ಲೂ ಬುಕ್ಕಿಂಗ್‌ ಆರಂಭ
ವಿವಿಧ ಪ್ರದೇಶಗಳಿಗೆ ತೆರಳುವ ಕೆಲವೊಂದು ಖಾಸಗಿ ಬಸ್‌ಗಳಲ್ಲಿಯೂ ಎ. 16ರಿಂದ ಮುಂಗಡ ಸೀಟು ಬುಕ್ಕಿಂಗ್‌ ಆರಂಭಗೊಂಡಿದೆ.

Advertisement

ಲಾಕ್‌ಡೌನ್‌ ತೆರವು ಬಗ್ಗೆ ಈಗಾಗಲೇ ನಿಶ್ಚಿತತೆ ಇಲ್ಲ. ಆದರೂ ಕೆಎಸ್ಸಾರ್ಟಿಸಿ ವೆಬ್‌ಸೈಟ್‌ನಲ್ಲಿ ಈಗಾಗಲೇ ಮುಂಗಡ ಬುಕ್ಕಿಂಗ್‌ ಆರಂಭವಾಗಿದೆ. ಒಂದು ವೇಳೆ ಲಾಕ್‌ಡೌನ್‌ ಮುಂದುವರಿದರೆ ಈಗಾಗಲೇ ಮುಂಗಡ ಕಾದಿರಿಸಿದ ಸೀಟುಗಳನ್ನು ರದ್ದು ಮಾಡಲಾಗುವುದು. ಪ್ರಯಾಣಿಕರಿಗೆ ಹಣ ಹಿಂದಿರುಗಿಸಲಾಗುವುದು.
– ಶಿವಯೋಗಿ ಕಳಸದ, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next