Advertisement

ಮತ್ತೊಂದು ವಾರ ಲಾಕ್‌ಡೌನ್‌

07:50 PM Jul 05, 2021 | Team Udayavani |

ಹಾಸನ: ಜಿಲ್ಲೆಯಲ್ಲಿ ಸೋಮವಾರದಿಂದ ಲಾಕ್‌ಡೌನ್‌ ಅನ್‌ಲಾಕ್‌ ಆಗಲಿದೆ ಎಂದು ಸಂಭ್ರಮಿಸುತ್ತಿದ್ದವರಿಗೆ ಜಿಲ್ಲಾಡಳಿತವುಶಾಕ್‌ ನೀಡಿದೆ. ಜು.5 ರಿಂದ ಮತ್ತೂಂದು ವಾರ ಲಾಕ್‌ಡೌನ್‌ವಿಸ್ತರಿಸಿ ಜಿಲ್ಲಾಧಿಕಾರಿ ಭಾನುವಾರ ಆದೇಶ ಹೊರಡಿಸಿದ್ದಾರೆ.

Advertisement

ನಿರಾಸೆ: ರಾಜ್ಯದಲ್ಲಿ ಸೋಮವಾರದಿಂದ ಅನ್‌ಲಾಕ್‌ ಜಾರಿಯಾಗುತ್ತಿದ್ದು, ಹಾಸನ ಜಿಲ್ಲೆಯಲ್ಲೂ ಪ್ರತಿದಿನ ರಾತ್ರಿ 9 ಗಂಟೆವರೆಗೂ ವ್ಯಾಪಾರ ವಹಿವಾಟು ನಡೆಸಬಹುದೆಂದು ನಿರೀಕ್ಷಿಸಿಸಿದ್ಧತೆ ಮಾಡಿಕೊಳ್ಳುತ್ತಿದ್ದವರಿಗೆ ನಿರಾಸೆಯುಂಟಾಗಿದೆ.ವಾರದಲ್ಲಿ ಮೂರು ದಿನ ಮಾತ್ರ ಬೆಳಗ್ಗೆಯಿಂದ ಮಧ್ಯಾಹ °ದವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು,ತುರ್ತು ಸೇವೆಗಳ ಹೊರತುಪಡಿಸಿ ಇನ್ನು ನಾಲ್ಕು ದಿನಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿರಲಿದೆ.

ನಾಲ್ಕು ದಿನ ಸಂಪೂರ್ಣ ಲಾಕ್‌ಡೌನ್‌: ಜು.12 ರವರೆಗೆಸೋಮವಾರ, ಬುಧವಾರ, ಶುಕ್ರವಾರ ಮಾತ್ರ ಬೆಳಗ್ಗೆ 6ರಿಂದಮಧ್ಯಾಹ್ನ2 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶಕಲ್ಪಿಸಿದ್ದು, ಇನ್ನುಳಿದಂತೆ ಮಂಗಳವಾರ, ಗುರುವಾರ,ಶನಿವಾರ ಮತ್ತು ಭಾನುವಾರ ಸಂಪೂರ್ಣ ಬಂದ್‌ ಆಗಿರಲಿವೆ.ಆದರೆ ಆ ನಾಲ್ಕು ದಿನಗಳಲ್ಲಿ ಹಣ್ಣು, ತರಕಾರಿ, ಆಹಾರ ಪದಾರ್ಥಗಳ ಪಾರ್ಸೆಲ್‌ಗೆ ಮಾತ ಅವಕಾಶವಿರಲಿದೆ. ಲಾಕ್‌ಡೌನ್‌ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.

ವೈದ್ಯಕೀಯ ಸೇವೆಗಳು, ನ್ಯಾಯಬೆಲೆ ಅಂಗಡಿಗಳು, ರೈತಸಂಪರ್ಕ ಕೇಂದ್ರಗಳು ಮತ್ತು ಹಾಲಿನ ಬೂತ್‌ಗಳು ವಾರದಎಲ್ಲ ದಿನಗಳಲ್ಲೂ ಬೆಳಗ್ಗೆಯಿಂದ ಸಂಜೆಯವರೆಗೂ ತೆರೆದುವ್ಯವಹರಿಸಲು ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕ್‌ಗಳು, ಜೀವವಿಮಾ ನಿಗಮ ಮತ್ತು ಅಂಚೆ ಕಚೇರಿಗಳು ಸೋಮವಾರ,ಬುಧವಾರ ಮತ್ತು ಶುಕ್ರವಾರ ಮಾತ್ರ ಬೆಳಗ್ಗೆ8ರಿಂದ ಮಧ್ಯಾಹ °1 ಗಂಟೆ ವರೆಗೆ ಸಾರ್ವಜನಿಕರ ಸೇವೆಗೆ ಲಭ್ಯವಿದ್ದು, ಇನ್ನುಳಿದನಾಲ್ಕು ದಿನಗಳು ಸಂಪೂರ್ಣ ಬಂದ್‌ ಆಗಿರಲಿವೆ.

ಉದ್ಯಾನವನ: ಮುಂಜಾನೆ5ರಿಂದ10 ಗಂಟೆ ವರೆಗೆ ವಾಯುವಿಹಾರಕ್ಕೆ ಅವಕಾಶ ಕಲ್ಪಿಸಿದ್ದು, ಸಾಮಾಜಿಕ ಅಂತರ ಕಾಯುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.ಕನ್ನಡಕದ ಅಂಗಡಿಗಳನ್ನು ವಾರದ ಎಲ್ಲ ದಿನವೂ ಬೆಳಗ್ಗೆ6ರಿಂದ ಮಧ್ಯಾಹ್ನ 2 ಗಂಟೆ ವರೆಗೂ ತೆರೆಯಲು ಅವಕಾಶನೀಡಿದ್ದು, ಎಲ್ಲ ಉತ್ಪಾದನಾ ಘಟಕಗಳು ಶೇ.50 ರಷ್ಟು ಸಿಬ್ಬಂದಿಯನ್ನು ಬಳಸಿಕೊಂಡು ಉತ್ಪಾದನಾ ಚಟುವಟಿಕೆಗಳನ್ನುನಡೆಸಬಹುದಾಗಿದೆ. ದಿನಸಿ ಅಂಗಡಿಗಳನ್ನು ಸೋಮವಾರ,ಬುಧವಾರ, ಶುಕ್ರವಾರ ಮಧ್ಯಾಹ್ನ 2 ಗಂಟೆಯವರೆಗೆ ತೆರೆದುವಹಿವಾಟು ನಡೆಸಲು ಅವಕಾಶವಿದ್ದರೂ ಮಾಲ್‌ಗ‌ಳು ಹಾಗೂಹವಾನಿಯಂತ್ರಿತ ವಾಣಿಜ್ಯ ಸಂಕೀರ್ಣಗಳನ್ನು ತೆರೆಯಲುಅವಕಾಶವಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next