Advertisement

ಲಾಕ್‌ಡೌನ್‌ ತೆರವು ಎಲ್ಲಿ –ಹೇಗೆ ?

07:13 PM May 13, 2020 | sudhir |

ಮಣಿಪಾಲ: ಕೋವಿಡ್ ಕಾವಳದಿಂದಾಗಿ ಸುಮಾರು ಎರಡು ತಿಂಗಳಿಂದ ಸ್ತಬ್ಧವಾಗಿದ್ದ ಬಹುತೇಕ ದೇಶಗಳು ಲಾಕ್‌ಡೌನ್‌ ನಿರ್ಬಂಧ ಸಡಿಲಿಸಿ ಆರ್ಥಿಕ ಚಟುವಟಿಕೆಗಳ ಪುನರಾರಂಭಕ್ಕೆ ಚಾಲನೆ ನೀಡಿವೆ. ಲಾಕ್‌ಡೌನ್‌ ತೆರವುಗೊಳಿಸುತ್ತಿರುವ ಮತ್ತು ಈಗಾಗಲೇ ತೆರವುಗೊಂಡಿರುವ ಕೆಲವು ದೇಶಗಳ ಸ್ಥಿತಿಗತಿಯ ಮಾಹಿತಿ ಇಲ್ಲಿದೆ.

Advertisement

ಭಾರತ
ಈಗಾಗಲೇ ಅನೇಕ ನಿರ್ಬಂಧಗಳನ್ನು ಸಡಿಲಿಸಿ ನಾಲ್ಕನೇ ಹಂತದ ಲಾಕ್‌ಡೌನ್‌ ತೆರವುಗೊಳಿಸುವಿಕೆಗೆ ದೇಶ ಸಜ್ಜಾಗಿದೆ. ಹೊಸ ಸೋಂಕು ಪ್ರಕರಣ ದಾಖಲಾಗದ ನಗರ ಪ್ರದೇಶಗಳಲ್ಲಿ ಕೈಗಾರಿಕಾ, ಉತ್ಪಾದನ ಘಟಕಗಳು ಸೇರಿದಂತೆ ವಿಶೇಷ ಆರ್ಥಿಕ ವಲಯಗಳಿಗೆ ಕಾರ್ಯಾಚರಿಸಲು ಅನುವು ಮಾಡಿಕೊಡಲಾಗಿದೆ.

ಇಂಡೋನೇಷ್ಯಾ
ಲಾಕ್‌ಡೌನ್‌ ಅವಧಿಯನ್ನು ಮೇ 22ರ ವರೆಗೆ ವಿಸ್ತರಿಸಲಾಗಿದ್ದು, ಜುಲೈ ವೇಳೆಗೆ ದೇಶ ಸಹಜ ಜೀವನದತ್ತ ಮರಳುವ ಸಾಧ್ಯತೆಯಿದೆ. ಜಕಾರ್ತದಲ್ಲಿ ಸೋಂಕು ತೀವ್ರತೆ ಹೆಚ್ಚಿರುವ ಕಾರಣ ನಿಯಮಗಳನ್ನು ಕಠಿನಗೊಳಿಸಲಾಗಿದೆ. ಆದರೆ ಏಷ್ಯಾ ರಾಷ್ಟ್ರಗಳ ಪೈಕಿ ಅತ್ಯಂತ ಕಡಿಮೆ ದರಕ್ಕೆ ಇಂಡೋನೇಷ್ಯಾದ ರೂಪಾಯಿ ದರ ಕುಸಿದಿದೆ.

ಥಾಯ್ಲೆಂಡ್‌
ಇಂಡೋನೇಷ್ಯಾದ ರೂಪಾಯಿ ಮೌಲ್ಯ ಕುಸಿತ ಹೆಚ್ಚು ಬಾಧಿಸಿದ್ದು ಥಾಯ್ಲೆಂಡ್‌ನ್ನು. ತುರ್ತುಪರಿಸ್ಥಿತಿ ಮೇ 31ರ ವರೆಗೆ ಜಾರಿಯಲ್ಲಿರಲ್ಲಿದ್ದು, ಈ ನಡುವೆಯೇ ದೇಶಾದ್ಯಂತ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಲು ನಾಲ್ಕು ಹಂತಗಳಲ್ಲಿ ಲಾಕ್‌ಡೌನ್‌ ನಿರ್ಬಂಧಗಳನ್ನು ತೆರವುಗೊಳಿಸಲು ಯೋಜನೆ ರೂಪಿಸಿದ್ದು, ಸೀಮಿತ ವಿನಾಯಿತಿ ನೀಡುವ ಮೂಲಕ ದೇಶವನ್ನು ಸಹಜ ಸ್ಥಿತಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ.

ಫಿಲಿಪೈನ್ಸ್
ಮೇ ಮಧ್ಯಾಂತರದಲ್ಲಿ ಕೆಲ ಉದ್ಯಮಗಳನ್ನು ಪ್ರಾರಂಭಿಸಿದ ಬಳಿಕ ಕ್ರಮೇಣ ಇತರ ವಲಯಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗುವುದು. ಪ್ರಾರಂಭಿಕವಾಗಿ ಕಟ್ಟದ ನಿರ್ಮಾಣ ಮತ್ತು ಉತ್ಪಾದನ ಘಟಕಗಳನ್ನು ತೆರೆಯಲು ಅವಕಾಶ ನೀಡಲಿದ್ದು, ರಿಯಲ್‌ ಎಸ್ಟೇಟ್‌ ಮತ್ತು ವಿಮಾ ಚಟುವಟಿಕೆಗಳನ್ನು ಆರಂಭಿಸಲಿದೆ.

Advertisement

ದಕ್ಷಿಣ ಆಫ್ರಿಕಾ
ಮೇ 1ರಿಂದ ಹಲವಾರು ವಲಯಗಳ ಕಾರ್ಯಾಚರಣೆಗೆ ಗ್ರೀನ್‌ ಸಿಗ್ನಲ್‌ ನೀಡಿರುವ ದ.ಆಫ್ರಿಕಾ ಗಣಿಗಾರಿಕೆ ಮತ್ತು ವಾಹನ ಉತ್ಪಾದನೆ ಸೇರಿದಂತೆ ಇತರ ಕೈಗಾರಿಕೆ ಕೇಂದ್ರಗಳನ್ನು ತೆರೆದಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಕಾರ್ಯಾಚರಣೆಯನ್ನು ಪುನರಾರಂಭಿಸಲು ಸೂಚಿಸಿದೆ. ಸರಕು ರೈಲು ಸೇವೆಗಳ ಸಂಚಾರಕ್ಕೂ ಅವಕಾಶ ಮಾಡಿಕೊಟ್ಟಿದೆ.

ಟರ್ಕಿ
ಮೇ ಮಧ್ಯಭಾಗದಿಂದ ಕೆಲವು ದೇಶೀಯ ವಿಮಾನಗಳನ್ನು ಪುನರಾರಂಭಿಸಲು ಟರ್ಕಿ ನಿರ್ಧರಿಸಿದೆ. ರೈಲು ಸೇವೆ ಸೇರಿದಂತೆ ಶಾಲೆಗಳನ್ನು ಪುನರಾರಂಭಿಸುವುದರ ಕುರಿತು ಚಿಂತನೆ ನಡೆಸಿದೆ.

ರಷ್ಯಾ
ಮೇ 11 ರಂದು ಲಾಕ್‌ಡೌನ್‌ ಕೊನೆಗೊಂಡಿದ್ದರೂ ಒಮ್ಮೆಲೇ ಎಲ್ಲ ವಲಯಗಳನ್ನು ತೆರೆಯಲು ಅವಕಾಶ ಕೊಟ್ಟಿಲ್ಲ. ಹಂತ ಹಂತವಾಗಿ ರಿಯಾಯಿತಿ ನೀಡಲು ಯೋಜನೆ ರೂಪಿಸಲಾಗುತ್ತಿದೆ.

ಪೋಲೆಂಡ್‌
ಕಿರಾಣಿ ಅಂಗಡಿ, ಪಾರ್ಕ್‌, ಇತರ ಸಾರ್ವಜನಿಕ ಸ್ಥಳಗಳನ್ನು ತಿಂಗಳ ಹಿಂದೆಯೇ ತೆರೆಯಲಾಗಿದೆ. ಬಳಿಕ ಶಾಪಿಂಗ್‌ ಮಾಲ್‌ಗ‌ಳು ಸೇರಿದಂತೆ ಹೊಟೇಲ್‌ ಮತ್ತು ಶಿಶುವಿಹಾರಗಳನ್ನು ತೆರೆಯಲು ಅವಕಾಶ ನೀಡಿದೆ.

ದುಬೈ
ಏಪ್ರಿಲ್‌ ತಿಂಗಳ ಅಂತ್ಯದಲ್ಲೇ ವಾಣಿಜ್ಯ ಚಟುವಟಿಕೆ ಮತ್ತು ಸಾರಿಗೆ ಸೌಲಭ್ಯ ಪುನರಾರಂಭವಾಗಿತ್ತು.ಎಮಿರೇಟ್‌ನ ಶಾಪಿಂಗ್‌ ಮಾಲ್‌ಗ‌ಳನ್ನು ತೆರೆದಿದೆ. ಆದರೆ ಶೇ.30ರಷ್ಟು ಮಂದಿಗೆ ಮಾತ್ರ ಪ್ರವೇಶ ಅವಕಾಶ ನೀಡಲಾಗಿದೆ. ಜುಲೈಯಲ್ಲಿ ಪ್ರವಾಸಿಗರ ಪ್ರವೇಕ್ಕೂ ಅನುವು ಮಾಡಿಕೊಡಲಾಗುತ್ತದೆ.

ಸೌದಿ ಅರೇಬಿಯಾ
ನಿಷೇದಾಜ್ಞೆಯನ್ನು ಹಿಂತೆಗೆದುಕೊಂಡಿದ್ದು, ಸೀಮಿತ ಮಟ್ಟದಲ್ಲಿ ವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಲು ಅವಕಾಶ ಮಾಡಿಕೊಟ್ಟಿದೆ.

ಬ್ರಜಿಲ್‌
ಲಾಕ್‌ಡೌನ್‌ ಸೀಮಿತವಾಗಿ ವಿಧಿಸಿ ಆರ್ಥಿಕತೆ ವಹಿವಾಟುಗಳಿಗೆ ಹೆಚ್ಚು ಒತ್ತು ನೀಡಲಾಗಿತ್ತು. ಕೆಲವು ನಿರ್ಬಂಧಗಳನ್ನು ತೆರವುಗೊಳಿಸಲು ರಾಜ್ಯಗಳ ಗವರ್ನರ್‌ಗಳ ಮೇಲೆ ಅಧ್ಯಕ್ಷ ಜೈರ್‌ಬೋಲ್ಸನಾರೊ ಒತ್ತಡ ಹೇರಿದ್ದಾರೆ. ಈಗಾಗಲೇ ಫೆಡರಲ್‌ ಡಿಸ್ಟ್ರಿಕ್ಟ್ ಸೇರಿದಂತೆ ಏಳು ರಾಜ್ಯಗಳಿಗೆ ಲಾಕ್‌ಡೌನ್‌ ನಿಯಮಗಳಲ್ಲಿ ವಿನಾಯಿತಿ ನೀಡಲಾಗಿದೆ. ಮೇ 11ಕ್ಕೆ ಹೆಚ್ಚಿನೆಲ್ಲ ನಿರ್ಬಂಧಗಳು ತೆರವುಗೊಂಡಿವೆ.

ಮೆಕ್ಸಿಕೊ
ರಾಷ್ಟ್ರವ್ಯಾಪಿ ಲಾಕ್‌ಡೌನ್‌ ನಿಯಮ ಜಾರಿ ಮಾಡಿಲ್ಲ. ಕೆಲ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ ಸಮುದಾಯ ಮಟ್ಟದಲ್ಲಿ ಸೋಂಕು ಹರಡದಂತೆ ಎಚ್ಚರವಹಿಸಿದೆ. ಸರಕಾರ ರೂಪಿಸಿರುವ ಮಾರ್ಗಸೂಚಿಗಳ ಪ್ರಕಾರ, ಅಗತ್ಯ ಕಾರ್ಖಾನೆ ,ಕೈಗಾರಿಕಾ ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next