Advertisement
ಕೆಡಿಪಿ ಸದಸ್ಯ ಆರ್.ವೆಂಕಟೇಶ್ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು. ತಾಲೂಕಿನ ಗೂಳೂರು ಹೋಬಳಿಯ ಗೊರ್ತಪಲ್ಲಿ ಗ್ರಾಪಂ 15ನೇ ಹಣಕಾಸು ಯೋಜನೆ, ನಿರ್ಬಂಧಿತ, ಅನಿರ್ಬಂಧಿತ, ವಿದ್ಯುತ್ ದೀಪಗಳ ಖರೀದಿ, ಚರಂಡಿ ಅವ್ಯವಸ್ಥೆ ಹಾಗೂ ನರೇಗಾ ಸೇರಿದಂತೆ ವಿವಿಧ ಯೋಜನೆಯಡಿಯಲ್ಲಿ ಕಳೆದ 2 ವರ್ಷಗಳಿಂದ 65 ಲಕ್ಷ ರೂಗಳ ಅವ್ಯವಹಾರ ನಡೆದಿದೆ. ಅನುದಾನ ಕರ್ಚು ಮಾಡಿರುವ ಬಗ್ಗೆ ಲೆಕ್ಕ ಪುಸ್ತಕ ಹಾಗೂ ರಸೀದಿಗಳನ್ನು ನೀಡುವಂತೆಗ್ರಾಪಂ ಸದಸ್ಯರು ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ನಮ್ಮ ಯಾವುದೇ ಲೆಕ್ಕಪುಸ್ತುಕ ಹಾಗೂ ರಸೀದಿಗಳು ಇಲ್ಲವೆಂದು ಮಾಹಿತಿ ನೀಡಿದ್ದಾರೆ. 2 ವರ್ಷದಿಂದ ಆಡಿಟ್ ಮಾಡಿಸಿಲ್ಲ.
ವೆಂಟಕರಾಮಪ್ಪ, ಜಿ.ವಿ.ನರಸಿಂಹಪ್ಪ, ವಿ.ಗಂಗಪ್ಪ, ರಾಜು, ರಂಗಾರೆಡ್ಡಿ ಮತ್ತಿತರರು ಇದ್ದರು. 10 ದಿನದೊಳಗೆ ಜಿಪಂ ಸಿಇಒಗೆ ವರದಿ
ಚಿಕ್ಕಬಳ್ಳಾಪುರ ಜಿಪಂ ಮುಖ್ಯ ಯೋಜನಾಧಿಕಾರಿ ವಿ.ಧುನುರೇಣುಕಾ ಮನವಿಪತ್ರ ಸ್ವೀಕರಿಸಿ ಮಾತನಾಡಿ, ಜಿಪಂ ಸಿಇಒ ಪರವಾಗಿ ನಾವು ಬಂದಿದ್ದು, ಗ್ರಾಪಂ ಸದಸ್ಯರು ಸಲ್ಲಿಸಿರುವ ದೂರಿನಂತೆ ಕಚೇರಿಯ ದಾಖಲೆಗಳನ್ನು ಪರೀಶಿಲಿಸಿದ್ದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು 2020 ಮತ್ತು 2021 ನೇ ಸಾಲಿನಲ್ಲಿ ನಡೆದಿರುವ ಹಣಕಾಸು ವ್ಯವಹಾರದ ಬಗ್ಗೆ ಸೂಕ್ತ ದಾಖಲೆ ಸಲ್ಲಿಸಲು ವಿಫಲರಾಗಿದ್ದು, ತನಿಖೆ ನಡೆಸಿ 10 ದಿನದೊಳಗೆ ಜಿಪಂ ಸಿಇಒಗೆ ವರದಿ ಸಲ್ಲಿಸುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.