Advertisement

15 ದಿನಗಳಿಂದ ಅಂಗನವಾಡಿಗೆ ಬೀಗ

03:57 PM Aug 26, 2018 | Team Udayavani |

ಲಕ್ಷ್ಮೇಶ್ವರ: ತಾಲೂಕಿನ ಬಟ್ಟೂರು ಗ್ರಾಪಂ ವ್ಯಾಪ್ತಿಯ ಕುಂದ್ರಳ್ಳಿ ಗ್ರಾಮದಲ್ಲಿ ಅಂಗನವಾಡಿ ಜಾಗದ ತಕರಾರಿನಿಂದ ಕಳೆದ 15 ದಿನಗಳಿಂದ ಅಂಗನವಾಡಿಗೆ ಬೀಗ ಜಡಿಯಲಾಗಿದೆ. ಇದರಿಂದ 40 ಮಕ್ಕಳು ಗ್ರಾಮದ ಮನೆಯೊಂದರ ಕಟ್ಟೆಯ ಮೇಲೆ ಕುಳಿತು ಪಾಠ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಕುಂದ್ರಳ್ಳಿ ಗ್ರಾಮದ ವಾರ್ಡ್‌ ನಂ. 1ರಲ್ಲಿನ ಗೋಮಾಳ ಜಾಗದಲ್ಲಿ ಅಂದು ಮಂಡಲ ಪಂಚಾಯತ್‌ ಇದ್ದಾಗ ಸಂಘಗಳಿಗೆ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಜಾಗ ಬಿಡಲಾಗಿತ್ತು. ಛಬ್ಬಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಈ ಮಾರ್ಗದಲ್ಲಿನ 98ಗಿ37ರಷ್ಟು ಜಾಗವನ್ನು ಅಲ್ಲಿನ ನಿವಾಸಿ ಮಲ್ಲಯ್ಯ ಈರಯ್ಯ ಬಾಳಿಹಳ್ಳಿಮಠ ಬಿಟ್ಟುಕೊಟ್ಟ ಕಾರಣ ಅವರಿಗೆ ಈ ಹಿಂದೆ ಮೀಸಲಿಟ್ಟ 30ಗಿ40 ವಿಸ್ತೀರ್ಣದ ಸರ್ವೇ ನಂ. 587/57/ಎ. ಜಾಗೆಯನ್ನು ಗ್ರಾಮಮ ಹಿರಿಯರು ಅವರ ಹೆಸರಿಗೆ ದಾಖಲಿಸಿದ್ದರು. ಆದರೆ ರಸ್ತೆಗಾಗಿ ಬಿಟ್ಟಿರುವ ನಿವೇಶನ ಹೆಚ್ಚಿದ್ದು ನನಗೆ ಕೊಟ್ಟಿರುವ ಜಾಗ ಕಡಿಮೆ ಇದೆ ಮತ್ತು ಇದುವರೆಗೂ ನೀಡಿರುವ ಜಾಗ ಗುರುತಿಸಿಕೊಟ್ಟಿಲ್ಲ ಎಂದು ಅಂಗನವಾಡಿಗೆ ಬೀಗ ಹಾಕಿದ್ದಾರೆ. ಅಲ್ಲದೇ ನನಗೆ ಹೆಚ್ಚಿನ ಜಾಗ ನೀಡಬೇಕು ಮತ್ತು ಗುರುತಿಸಿ ಕೊಡಬೇಕು. ಇಲ್ಲದಿದ್ದರೆ ತಾನು ರಸ್ತೆ ಬಂದ್‌ ಮಾಡುವುದಾಗಿ ಹೇಳುತ್ತಿದ್ದಾರೆ. 

ಈ ಬಗ್ಗೆ ಯಾವುದೇ ಮಾಹಿತಿ ತಿಳಿಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪಂಚಾಯತಿಯ ಗೋಮಾಳ ಜಾಗವಾದ ಸರ್ವೇ ನಂ. 587/1ರಲ್ಲಿ 11 ವರ್ಷಗಳ ಹಿಂದೆ ಅಂಗನವಾಡಿ ನಿರ್ಮಿಸಿದೆ. ಅಂಗನವಾಡಿಯಲ್ಲಿ ಎಲ್ಲ ಸೌಕರ್ಯ ಹೊಂದಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ. ಆದರೆ ಈಗ ಮತ್ತೇ ಅಂಗನವಾಡಿ ಕಟ್ಟಡದ ಜಾಗೆ ತನ್ನದು ಎಂದು ಮಲ್ಲಯ್ಯ ಬಾಳೆಹಳ್ಳಿಮಠ ಆ. 10ರಂದು ಸಂಜೆ ಶಾಲಾ ಅವಧಿ ಮುಗಿದ ಮೇಲೆ ಬೀಗ ಜಡಿದಿದ್ದಾರೆ.

ಈ ಕುರಿತಂತೆ ತಾವು ಗ್ರಾಪಂ ಮತ್ತು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಇನ್ನು 2-3 ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳುತ್ತಿದ್ದಾರೆ ಎಂದು ಅಂಗನವಾಡಿ ಮೇಲ್ವಿಚಾರಕಿ ಕೆ.ಎಚ್‌. ಹುಲಕೋಟಿ ತಿಳಿಸಿದ್ದಾರೆ. 

ಈ ಕುರಿತಂತೆ ನಮ್ಮ ಗಮನಕ್ಕೆ ಬಂದಿಲ್ಲ. ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿರುವುದು ತಪ್ಪು. ಅದನ್ನು ಪಂಚಾಯತ್‌ ಮಟ್ಟದಲ್ಲಿ ಬಗೆಹರಿಸಿಕೊಳ್ಳಬೇಕು.
ಸಿ.ಎನ್‌. ಸೊರಟೂರ, ಗ್ರಾಪಂ ಸದಸ್ಯ 

Advertisement

ಮಲ್ಲಯ್ಯ ಬಾಳಿಹಳ್ಳಿಮಠ ಅವರ ಜಾಗವೇ ಬೇರೆ, ಅಂಗನವಾಡಿ ಕೇಂದ್ರದ ಜಾಗವೇ ಬೇರೆಯಾಗಿದೆ. ಅವರು ತಮಗೆ ನೀಡಲಾದ ಜಾಗವನ್ನು ಗುರುತಿಸಿ ಕೊಡುವಂತೆ ಪಂಚಾಯತ್‌ಗೆ ಅರ್ಜಿ ಸಲ್ಲಿಸಿದರೆ ಜಾಗ ಗುರುತಿಸಿ ಕೊಡಲಾಗುವುದು. ಯಾವುದೇ ಮಾಹಿತಿ ನೀಡದೇ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿರುವುದಕ್ಕೆ ಅವರಿಗೆ ನೋಟಿಸ್‌ ನೀಡಲಾಗಿದೆ. ನೋಟಿಸ್‌ಗೆ ಸ್ಪಂದಿಸದಿದ್ದಲ್ಲಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕಾಗುತ್ತದೆ.
ಎಂ.ಆರ್‌. ಮಾದರ, ಪಿಡಿಒ 

Advertisement

Udayavani is now on Telegram. Click here to join our channel and stay updated with the latest news.

Next