Advertisement

ಲಾಕ್ಡೌನ್ : ಆನ್‌ಲೈನ್‌ನಲ್ಲೇ ಮದುವೆಯಾದ್ರು

12:55 PM Apr 22, 2020 | Suhan S |

ಧಾರವಾಡ: ಕೋವಿಡ್ 19 ಲಾಕ್‌ಡೌನ್‌ ಇರುವುದರಿಂದ ಇಲ್ಲೊಂದು ಜೋಡಿ ಆನ್‌ಲೈನ್‌ ಮೂಲಕವೇ ಮದುವೆಯಾಗಿ ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

Advertisement

ಧಾರವಾಡದ ಆದರ್ಶನಗರದ ಇಮ್ರಾನ್‌ ನದಾಫ್‌ ಜತೆ ಕೊಪ್ಪಳದ ತಾಜಮಾ ಬೇಗಂ ಅವರ ಮದುವೆಯನ್ನು ಏ.19ರಂದು ನೆರವೇರಿಸಲು ನಿಶ್ಚಯಿಸಲಾಗಿತ್ತು. ಮದುವೆಯ ಆಮಂತ್ರಣ ಪತ್ರಿಕೆ ಪ್ರಕಟಿಸಿ ಹಂಚಲಾಗಿತ್ತು. ಆದರೆ ಲಾಕ್‌ಡೌನ್‌ ಕಾರಣದಿಂದ ಮದುವೆ ಮಾಡಿಕೊಳ್ಳಲು ಸಮಸ್ಯೆಯಾಗಿತ್ತು. ಇದನ್ನರಿತ ಎರಡೂ ಕುಟುಂಬ ಸದಸ್ಯರು ವಿಡಿಯೋ ಕಾಲ್‌ ಮೂಲಕವೇ ವಿವಾಹ ಸಂಪನ್ನಗೊಳಿಸಿದರು.

ವರನ ಸ್ವಗೃಹ ಹಾಗೂ ವಧುವಿನ ಮನೆಯಲ್ಲಿ ಲ್ಯಾಪ್‌ಟಾಪ್‌ ಇರಿಸಿ ಗುರು ಹಿರಿಯರ ಸಮ್ಮುಖದಲ್ಲಿ ಮುಸ್ಲಿಂ ಸಮಾಜದ ಸಂಪ್ರದಾಯ ನೆರವೇರಿಸಲಾಯಿತು. ವಿಡಿಯೋ ಕಾಲ್‌ನಲ್ಲೇ ಮದುವೆಗೆ ಕಬೂಲ್‌ ಹೈ… ಕಬೂಲ್‌ ಹೈ ಎನ್ನುವ ಮೂಲಕ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಎರಡು ಕುಟುಂಬ ಸದಸ್ಯರು ಮಾಸ್ಕ್ ಹಾಕಿಕೊಂಡೇ ಸಂಪ್ರದಾಯ ನೆರವೇರಿಸಿದ್ದು ವಿಶೇಷವಾಗಿತ್ತು. ಲಾಕ್‌ಡೌನ್‌ ಮುಗಿದ ಬಳಿಕ ವಧುವನ್ನು ಕರೆ ತರಲು ಒಪ್ಪಿಗೆ ಸೂಚಿಸಲಾಯಿತು.

ಜನವರಿ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಸಿ ಏ.19ಕ್ಕೆ ಮದುವೆ ಮಾಡಲು ಹಿರಿಯಲು ನಿಶ್ಚಯಿಸಿದ್ದರು. ಆದರೆ ಲಾಕ್‌ಡೌನ್‌ ಇರುವ ಕಾರಣ ಕೊಪ್ಪಳಕ್ಕೆ ಮದುವೆಗೆ ಹೋಗಿ ಬರಲು ಬರೀ ನಾಲ್ವರಿಗೆ ಅವಕಾಶ ಕೊಡುವುದಾಗಿ ಅಧಿಕಾರಿಗಳು ಹೇಳಿದ್ದರು. ಹೀಗಾಗಿ ಎರಡೂ ಕುಟುಂಬದವರ ಒಪ್ಪಿಗೆ ಮೇರೆಗೆ ವಿಡಿಯೋ ಕಾಲ್‌ ಮೂಲಕವೇ ಮದುವೆ ಮಾಡಿಕೊಂಡಿದ್ದು, ಲಾಕ್‌ ಡೌನ್‌ ಮುಗಿದ ಬಳಿಕ ಪತ್ನಿಯನ್ನು ಧಾರವಾಡಕ್ಕೆ ಕರೆ ತರುತ್ತೇನೆ. –ಇಮ್ರಾನ್‌ ನದಾಫ್‌, ವರ

Advertisement

Udayavani is now on Telegram. Click here to join our channel and stay updated with the latest news.

Next