Advertisement

ಸುಳ್ಯದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸಲು ಸಿದ್ಧತೆ

02:22 PM Jan 19, 2018 | Team Udayavani |

ಸುಳ್ಯ : ರಾಜ್ಯದ ನಾನಾ ಕಡೆಗಳಲ್ಲಿ ಕಡಿಮೆ ದರದಲ್ಲಿ ಊಟ-ಉಪಾಹಾರ ಒದಗಿಸುವ ರಾಜ್ಯ ಸರಕಾರದ ಮಹತ್ತ್ವಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್‌ನ್ನು ಸುಳ್ಯದಲ್ಲಿಯೂ ನಿರ್ಮಿಸುವುದಕ್ಕೆ ಸಂಬಂಧಿಸಿ ಪ್ರಕ್ರಿಯೆ ಆರಂಭಗೊಂಡಿದೆ. ಕಂದಾಯ ಇಲಾಖೆ ಜಾಗ ಗುರುತಿಸಿದೆ. ನಗರ ಪಂಚಾಯತ್‌ ಕೆಲಸ ಆರಂಭಿಸಿದ್ದು, ಜಾಗದ ಸುತ್ತ ಬೇಲಿ ಅಳವಡಿಕೆ, ಸಮತಟ್ಟು ಮಾಡುವ ಕೆಲಸ ಪೂರ್ಣಗೊಳಿಸಲಿದೆ.

Advertisement

ಮಿನಿ ವಿಧಾನಸೌಧದ ಹಿಂಬದಿಯಲ್ಲಿ, ನ್ಯಾಯಾಲಯ ಮತ್ತು ಕೆಎಫ್‌ಡಿಸಿ ಕಚೇರಿ ಎದುರುಗಡೆ ಖಾಲಿ ಇರುವ 5 ಸೆಂಟ್ಸ್‌ ಜಾಗವನ್ನು ಕ್ಯಾಂಟೀನ್‌ಗೆ ಬಳಸಲು ನಿರ್ಧರಿಸಲಾಗಿದೆ. ಸ್ಥಳ ಸಮತಟ್ಟುಗೊಳಿಸುವಿಕೆ, ಸಿಸಿ ಕೆಮರಾ ಅಳವಡಿಕೆ, ನೀರಿನ ಸಂಪರ್ಕ, ತ್ಯಾಜ್ಯ ಹರಿಯಲು ವ್ಯವಸ್ಥೆ ನ.ಪಂ. ಜವಾಬ್ದಾರಿ.

ಟೆಂಡರ್‌ ಕಾರ್ಯ
ಸರಕಾರವೇ ಇಂದಿರಾ ಕ್ಯಾಂಟೀನ್‌ ನಡೆಸಲು ಗುತ್ತಿಗೆ ನೀಡಲಿದೆ. ಟೆಂಡರ್‌ ಪ್ರಕ್ರಿಯೆ ನಡೆದು, ಗುತ್ತಿಗೆ ಪಡೆದುಕೊಂಡವರು ಕ್ಯಾಂಟೀನ್‌ ಆರಂಭಿಸಲಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ಫೆಬ್ರವರಿ ಅಥವಾ ಮಾರ್ಚ್‌ ಮೊದಲ
ವಾರದಲ್ಲಿ ಕ್ಯಾಂಟೀನ್‌ ಕಾರ್ಯಾರಂಭ ಮಾಡಲಿದೆ.

ಜಾಗ ಸಮತಟ್ಟು
ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಕಂದಾಯ ಇಲಾಖೆ ಜಾಗ ಗುರುತಿಸಿ ಎನ್‌ಒಸಿ ನೀಡಿದೆ. ಸ್ಥಳ ಸಮತಟ್ಟು ಮಾಡುವುದು, ಬೇಲಿ ಹಾಕುವ ಇತ್ಯಾದಿ ಕೆಲಸಗಳು ಆರಂಭಗೊಂಡಿವೆ.
ಗೋಪಾಲ್‌ ನಾೖಕ್‌
  ಸುಳ್ಯ ನ.ಪಂ. ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next