Advertisement

ಪಾಚಿ ಕಟ್ಟಿರುವ ನೀರಿನ ತೊಂಬೆ ದುರಸ್ತಿ ಪಡಿಸಿ

01:04 PM Apr 07, 2021 | Team Udayavani |

ಕೊಳ್ಳೇಗಾಲ: ಪಟ್ಟಣದ ನಾಯಕರ ದೊಡ್ಡ ಬೀದಿ ಬಡಾವಣೆಯ ರಾಜ್ಯಹೆದ್ದಾರಿ ಮಗ್ಗುಲಲ್ಲೇ ನಗರಸಭೆಯಿಂದ ಕುಡಿಯುವ ನೀರಿನ ತೊಂಬೆ(ಮಿ ನಿಟ್ಯಾಂಕ್‌) ನಿರ್ಮಿಸಿದ್ದು, ತೊಂಬೆ ಸಂಪೂರ್ಣ ಪಾಚಿ ಕಟ್ಟಿ ಕುಡಿಯಲು ಮತ್ತು ಮನೆ ಬಳಕೆಗೆ ಯೋಗ್ಯವಲ್ಲವಾಗಿದೆ. ನಗರಸಭೆ ಅಧಿಕಾರಿಗಳು ನೀರಿನ ತೊಂಬೆಯನ್ನು ಪರಿಶೀಲಿಸಿ, ದುರಸ್ತಿಪಡಿಸಬೇಕು ಎಂದು ಬಡಾವಣೆ ನಿವಾಸಿಗಳು ಆಗ್ರಹಿಸಿದ್ದಾರೆ.

Advertisement

ನೀರಿನ ತೊಂಬೆ ಮೇಲ್ಭಾಗದಲ್ಲಿಸಂಪೂರ್ಣ ಪಾಚಿ ಕಟ್ಟಿದೆ. ತೊಂಬೆಯನೀರನ್ನು ಬಳಕೆ ಮಾಡಲು ಭಯವಾಗುತ್ತಿದ್ದು, ನೀರಿನ ತೊಂಬೆಯ ಒಳಭಾಗದಲ್ಲಿಇನ್ನು ಯಾವ ರೀತಿ ಪಾಚಿ ಕಟ್ಟಿ ಅಶುದ್ಧವಾಗಿರಬಹುದೆಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ನೀರಿನ ತೊಂಬೆಯ ಕಲುಷಿತವಾಗುವುದರ ಜೊತೆಗೆ ಅದರ ಸುತ್ತ ಮುತ್ತಲು ಕಸಕಡ್ಡಿಗಳು ಬಿದ್ದು ಗಬ್ಬುನಾರುತ್ತಿದೆ. ಕೂಡಲೇ ಪೌರ ಕಾರ್ಮಿಕರಿಂದ ನೀರಿನ ತೊಂಬೆ ಸುತ್ತ ಬೆಳೆದಿರುವಗಿಡಗಂಟಿಗಳನ್ನು ತೆರವು ಮಾಡಿ ಕ್ರಿಮಿನಾಶಕಗಳನ್ನು ಸಿಂಪಡಿಸಿ ಸ್ವತ್ಛಗೊಳಿಸಬೇಕಿದೆ.ನೀರಿನ ತೊಂಬೆ ಒಳಗೆ ಮತ್ತು ಹೊರಗೆಪಾಚಿಯಿಂದ ಶೇಖರಣೆಯಾಗಿದ್ದು,ಇದರ ನೀರು ಬಳಕೆ ಮಾಡಿದರೆಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಇಂತಹ ಘಟನೆಗಳುಜರುಗಿದರೆ ನಗರಸಭೆ ಹೊಣೆಹೊರಬೇಕಾಗುತ್ತದೆ. ಕೂಡಲೇಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತೊಂಬೆಯನ್ನು ದುರಸ್ತಿಪಡಿಸಿ, ಶುದ್ಧನೀರನ್ನು ಪೂರೈಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next