Advertisement
ಭಾರತೀಯ ಪರಂಪರೆಯಲ್ಲಿ ಬರುವ ಹಬ್ಬ ಹರಿದಿನಗಳ ಮಂಗಲ ಕಾರ್ಯಗಳ ವೇಳೆ ಕಲಶ ಸ್ಥಾಪನೆ ಮಾಡಲಾಗುತ್ತದೆ. ಅದೇ ರೀತಿ ಮುನಿಗಳ ಚಾತುರ್ಮಾಸ್ಯ ಸಂದರ್ಭ ಮಾಡುವ ಕಲಶಗಳಿಗೆ ವಿಶೇಷ ಅರ್ಥ ಮತ್ತು ಸ್ಥಾನವಿದೆ. ಬೆಂಗಳೂರಿನಲ್ಲಿ ಚಾತುರ್ಮಾಸ್ಯ ಆಚರಿಸುತ್ತಿರುವ ಗುರುಗಳಾದ ಶ್ರೀ ಪುಷ್ಪದಂತ ಸಾಗರ್‌ಜೀ ಮುನಿಮಹಾರಾಜರು ವೇಣೂರಿನ ಶ್ರಾವಕ -ಶ್ರಾವಿಕೆಯರಿಗೋಸ್ಕರ ವಿಶೇಷವಾಗಿ ಮಂತ್ರಿತ ಕಲಶಗಳನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ಚಾತುರ್ಮಾಸ್ಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ ಅಜಿಲ ಕಲಶ ಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಜಿಲಸೀಮೆಯಲ್ಲಿ ಇಂತಹ ಅಪೂರ್ವ ಕಾರ್ಯಕ್ರಮ ನಮಗೆಲ್ಲಾ ಸಿಗುತ್ತಿರುವುದು ಸಂತಸ ತಂದಿದೆ. ಇದರಿಂದ ಜೈನ ಧರ್ಮೀಯರಲ್ಲಿ ಚಾರಿತ್ರ್ಯ ಪ್ರಭಾವನೆಯಾಗುತ್ತದೆ. ಮುನಿಗಳ ಚಾತುರ್ಮಾಸ್ಯ ವೇಣೂರಿನಲ್ಲಿ ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು ಆಶಿಸಿದರು. ಉದ್ಯಮಿ ಪುಷ್ಪರಾಜ ಜೈನ್ ಅವರು ಪುಷ್ಪದಂತ ಸಾಗರ್‌ಜೀ ಮುನಿಮಹಾರಾಜರ ಹಾಗೂ ಶ್ರೀ ಗೋಮಟೇಶ್ವರ ಸ್ವಾಮಿಯ ಭಾವಚಿತ್ರವನ್ನು ಅನಾವರಣಗೊಳಿಸಿದರು. ಬಜಿರೆ ಹಲ್ಲಂದೋಡಿ ಶ್ರವಣ ಕುಮಾರಿ ಅವರಿಂದ ಮಂಗಳ ನೃತ್ಯ ನೆರವೇರಿತು. ಸಮಾರಂಭದಲ್ಲಿ ಕ್ಷುಲ್ಲಕ ಸುಧರ್ಮಗುಪ್ತ ಮಹಾರಾಜರು, ಬಾಲಬ್ರಹ್ಮಚಾರಿ ಸೋಮದೇವ ಭೆ„ಯ್ನಾಜಿ, ಬಾಲ ಬ್ರಹ್ಮಚಾರಿ ಶ್ರೀಕಾಂತ ಭೈಯಾಜಿ, ಬಾಲಬ್ರಹ್ಮಚಾರಿ ಧರ್ಮನಾಥ ಭೈಯಾಜಿ, ಚಾತುರ್ಮಾಸ್ಯ ವ್ಯವಸ್ಥಾಪನ ಸಮಿತಿ, ವೇಣೂರು ದಿಗಂಬರ ಜೈನತೀರ್ಥ ಕ್ಷೇತ್ರ ಸಮಿತಿ, ಜೈನ್ ಮಿಲನ್, ಯುವಜನ ಸಂಘ, ಮಹಿಳಾ ಸಂಘದ ಸದಸ್ಯರು ಪದಾಧಿಕಾರಿಗಳು, ಶ್ರಾವಕ- ಶ್ರಾವಕಿಯವರು ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿ ಕಾರ್ಯಾಧ್ಯಕ್ಷ ನವೀನ್‌ಚಂದ್ ಬಲ್ಲಾಳ್ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರ್ವಹಿಸಿದರು.
Related Articles
Advertisement
ಮಂಗಲಕಲಶವೆಂದರೆ…ಮಂಗಲ ಕಲಶವು ಪಂಚಧಾತು, ನವರತ್ನ, ಬೆಳ್ಳಿ ಓಂ, ಬೆಳ್ಳಿ ಸ್ವಸ್ತಿಕ, ಬೆಳ್ಳಿ ನಾಣ್ಯ, ಬಾದಾಮ್, ಅಡಿಕೆ, ಕಾಯಿ, ಅರಸಿನ ಬೇರು, ಲವಂಗ, ಹಳದಿ, ಸಾಸಿವೆ, ಅಕ್ಕಿ ಮೊದಲಾದ ಮಂಗಲ ದ್ರವ್ಯಗಳಿಂದ ಕೂಡಿರುತ್ತದೆ. ಮಂಗಲ ದ್ಯವ್ಯಗಳಿಂದ ತುಂಬಿದಂತಹ ಬೆಳ್ಳಿ ಮಂಗಲ ಕಲಶಗಳನ್ನು ಮುನಿಶ್ರೀಗಳು ತಮ್ಮ ಧಾರ್ಮಿಕ ವಿಧಿ ವಿದಾನ ಹಾಗೂ ಸಿದ್ಧಭಕ್ತಿ, ಯೋಗಿ ಭಕ್ತಿ, ಚೈತ್ಯ ಭಕ್ತಿ, ಶಾಂತಿ ಭಕ್ತಿ, ಸಮಾಧಿ ಭಕ್ತಿ ಮತ್ತು ಆದಿ ಭಕ್ತಿ ಮಂತ್ರೋಚ್ಚಾರಣೆ ಮತ್ತು ತಪಸಾಧನೆಯಿಂದ ಕಲಶವನ್ನು ಸ್ಥಾಪನೆ ಮಾಡುತ್ತಾರೆ. ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ, ಆರೋಗ್ಯ ಮತ್ತು ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಈ ಕಲಶಗಳನ್ನು ಮಂತ್ರೋಚ್ಛಾರದಿಂದ ತುಂಬಲಾಗುತ್ತದೆ.
– ಮುನಿ ಪ್ರಸಂಗ ಸಾಗರ್‌ಜೀ