Advertisement

ಲೋಕಲ್‌ ಫೈಟ್‌: ತಾಯಿ-ಮಗನ ಗೆಲುವು

01:43 PM Jan 05, 2021 | Suhan S |

ಮುದ್ದೇಬಿಹಾಳ: ತಾಲೂಕಿನ ಕುಂಟೋಜಿ ಗ್ರಾಪಂ ಚುನಾವಣೆಯಲ್ಲಿ ತಾಯಿ, ಮಗ ಇಬ್ಬರೂ ಒಂದೇ ವಾರ್ಡಿನ ಬೇರೆ ಬೇರೆ ಮೀಸಲು ಸ್ಥಾನಗಳಿಂದ ಆಯ್ಕೆಗೊಂಡು ತಮ್ಮ ಪ್ರತಿಸ್ಪರ್ಧಿಗಳಾಗಿದ್ದ ಪತ್ನಿ, ಪತಿಯನ್ನು ಸೋಲಿಸಿ ವಿಜಯಪುರ ಜಿಲ್ಲೆಯ ಗ್ರಾಪಂ ಚುನಾವಣೆಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

Advertisement

ಈ ಗ್ರಾಪಂನ 4ನೇ ಮತಕ್ಷೇತ್ರವಾಗಿರುವ ಅಬ್ಬಿಹಾಳಗ್ರಾಮದಲ್ಲಿ ಸಾಮಾನ್ಯ ಮತ್ತುಸಾಮಾನ್ಯ ಮಹಿಳೆ ವರ್ಗಕ್ಕೆ ತಲಾ ಒಂದು ಸ್ಥಾನ ಮೀಸಲಿಡಲಾಗಿತ್ತು.ಸಾಮಾನ್ಯ ಮಹಿಳೆ ಸ್ಥಾನಕ್ಕೆಭೀಮವ್ವ ನಿಂಗಪ್ಪ ಕಂಬಳಿ ಹಾಗೂ ರೇಖಾ ಹನುಮಪ್ಪ ಚಲವಾದಿ ಸ್ಪರ್ಧಿಸಿದ್ದರು. ಭೀಮವ್ವ 515 ಮತ ಪಡೆದು ಆಯ್ಕೆಯಾದರೆ ಪ್ರತಿಸ್ಪರ್ಧಿ ರೇಖಾ 61 ಮತ ಪಡೆದು ಸೋಲನುಭವಿಸಿದರು.

ಸಾಮಾನ್ಯ ಸ್ಥಾನಕ್ಕೆ ಭೀಮವ್ವರ ಮಗ ಎಂಎ, ಬಿಇಡಿ ಪದವೀಧರ ಶಾಂತಪ್ಪ ನಿಂಗಪ್ಪ ಕಂಬಳಿ ಹಾಗೂರೇಖಾಳ ಪತಿ ಹನುಮಪ್ಪ ಭೀಮಪ್ಪಚಲವಾದಿ ಸ್ಪರ್ಧಿಸಿದ್ದರು. ಶಾಂತಪ್ಪ ತಾಯಿಗಿಂತ 7 ಮತ ಕಡಿಮೆ 508ಮತ ಪಡೆದು ಗೆಲುವಿನ ನಗೆ ಬೀರಿದರೆ ಹನುಮಪ್ಪ ಪತ್ನಿಗಿಂತಲೂ2 ಮತ ಕಡಿಮೆ 59 ಮತ ಪಡೆದುಸೋತರು. ಇಡಿ ವಿಜಯಪುರ ಜಿಲ್ಲೆಯಲ್ಲೇ ಇಂಥ ಘಟನೆ ನಡೆದದ್ದು ಇಲ್ಲಿ ಮಾತ್ರ ಎನ್ನುವ ಮಾತು ಕೇಳಿ ಬರುತ್ತಿದೆ.

ಕುಂಟೋಜಿಯಲ್ಲೇ ಇನ್ನೊಂದು ವಿಶೇಷತೆ: ಇದೇ ಗ್ರಾಪಂನಲ್ಲಿ ಇನ್ನೊಂದು ವಿಶೇಷವೂ ಬೆಳಕಿಗೆ ಬಂದಿದೆ. ಅದು ಇಬ್ಬರು ಮಾಜಿ ಅಧ್ಯಕ್ಷರು ಈ ಅವಧಿಯಲ್ಲಿ ಮತ್ತೂಮ್ಮೆ ಆಯ್ಕೆಯಾಗಿರುವುದು. ಕುಂಟೋಜಿಯ 2ನೇ ವಾರ್ಡಿನ ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಿವಬಸಪ್ಪ ಸಜ್ಜನ ಅವರು 371 ಮತ ಪಡೆದು ಗೆದ್ದಿದ್ದಾರೆ. ಇವರು 2010ರಲ್ಲಿ ನಡೆದಚುನಾವಣೆಯಲ್ಲಿ ಆಯ್ಕೆಯಾಗಿ ಎರಡನೇ ಅವಧಿಯಲ್ಲಿ ಅದೇ ಗ್ರಾಪಂನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಇತರೆಡೆ ಗೆದ್ದವರ ವಿಶೇಷತೆ: ಬಿದರಕುಂದಿ ಗ್ರಾಪಂನಲ್ಲಿ ಬಿದರಕುಂದಿ ಒಂದನೇ ವಾರ್ಡಿನಸಾಮಾನ್ಯ ಸ್ಥಾನಕ್ಕೆ ಸ್ಪ ರ್ಧಿಸಿದ್ದ ಅದೇ ಗ್ರಾಪಂನ ಹಿಂದಿನ ಅವ ಧಿಯ ಅಧ್ಯಕ್ಷ ಮಲ್ಲಪ್ಪ ದೇವಪ್ಪ ದೊಡಮನಿ 343 ಮತಪಡೆದು 2ನೇ ಬಾರಿಆಯ್ಕೆಯಾಗಿದ್ದಾರೆ. ತಮ್ಮಪ್ರತಿಸ್ಪರ್ಧಿಗಳಾಗಿದ್ದ 8ಅಭ್ಯರ್ಥಿಗಳನ್ನು ಇವರು ಸೋಲಿಸಿದ್ದಾರೆ. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾಸಂಚಾಲಕ ರಾಗಿರುವಸಿ.ಜಿ. ವಿಜಯಕರ್‌ ಅವರ ಪತ್ನಿ ಕಮಲಾವಿಜಯಕರ್‌ ಇದೇ ಗ್ರಾಪಂನ ನಾಲ್ಕನ ಮತಕ್ಷೇತ್ರ ಮಾದಿನಾಳ ಗ್ರಾಮದ ಸಾಮಾನ್ಯಮಹಿಳೆ ವರ್ಗದಡಿ 499 ಮತ ಪಡೆದುಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಮುಚಗಂಡೆವ್ವ ಮಾದರ 103 ಮತ ಪಡೆದಿದ್ದಾರೆ.

Advertisement

ಹೊಕ್ರಾಣಿಯಲ್ಲೂ ವಿಶೇಷತೆ :

ಕುಂಟೋಜಿ ಗ್ರಾಪಂ ಅಡಿ ಬರುವ 5ನೇ ಮತಕ್ಷೇತ್ರ ಹೊಕ್ರಾಣಿಯಲ್ಲಿ ಸಾಮಾನ್ಯ ಸ್ಥಾನದಿಂದ ಸ್ಪರ್ಧಿಸಿದ್ದ ರಾಚಪ್ಪ ಮಡಿವಾಳಪ್ಪ ಜಗಲಿ 344 ಮತ ಪಡೆದು ಎರಡನೇ ಬಾರಿ ಆಯ್ಕೆಯಾಗಿದ್ದಾರೆ. ಇವರು 2005-2010ರ ಅವಧಿಯಲ್ಲಿ ಸದಸ್ಯರಾಗಿ ಆಯ್ಕೆಯಾಗಿ ಹದಿನಾಲ್ಕು ತಿಂಗಳು ಅದೇ ಗ್ರಾಪಂಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಹೊಕ್ರಾಣಿಯಲ್ಲೇ ಸಾಮಾನ್ಯ ಸ್ಥಾನದಿಂದ ಸ್ಪರ್ಧಿಸಿದ್ದ ರಾಚಪ್ಪ ಅವರ ಹತ್ತಿರದ ಸಂಬಂಧಿ ಬೀರಪ್ಪ ಬಸಪ್ಪ ಜಗಲಿ, ಹಿಂದಿನ ಅವಧಿಗಳಲ್ಲಿ ಸದಸ್ಯರಾಗಿದ್ದ ಬೀರಪ್ಪ ಬಸಪ್ಪ ಬಿರಾದಾರ, ಬಸವಂತ್ರಾವ ರಾಜೀವರಾವ್‌ ದೇಶಪಾಂಡೆ ಹಾಗೂ ಸಾಮಾನ್ಯ ಮಹಿಳೆ ಸ್ಥಾನದಿಂದ ಸ್ಪರ್ಧಿಸಿದ್ದ ಹನುಮವ್ವ ಬಸಪ್ಪ ಜಗಲಿ, ಅದೇ ಗ್ರಾಪಂನ ಮಾಜಿ ಅಧ್ಯಕ್ಷೆಯಾಗಿದ್ದ ಎಸ್ಟಿ ಮಹಿಳೆ ಮೀಸಲಾತಿಯಡಿ ಸ್ಪರ್ಧಿಸಿದ್ದ ಮಹಾದೇವಿ ಚಿದಾನಂದ ಗಡ್ಡಿ ಸೋಲನುಭವಿಸಿದ್ದಾರೆ.

 

ಡಿ.ಬಿ. ವಡವಡಗಿ

Advertisement

Udayavani is now on Telegram. Click here to join our channel and stay updated with the latest news.

Next