Advertisement
ಜಿಲ್ಲೆಯಲ್ಲಿ ಮೊದಲ ಹಂತದ ಚುನಾವಣೆ ನಡೆದು ಡಿ.27 ರಂದು ಎರಡನೇ ಹಂತದ ಚುನಾವಣೆ ನಡೆಯಲಿದ್ದು ಈ ಚುನಾವಣೆ ನಡೆಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ.ಎರಡನೇ ಹಂತದಲ್ಲಿ ನಡೆಯುವ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು ಒಂದು ಪ್ರತಿಷ್ಠಿತ ಕ್ಷೇತ್ರವಾಗಿದೆ.ಉಸ್ತುವಾರಿ ಸಚಿವರ ಕ್ಷೇತ್ರ: ಬಳ್ಳಾರಿ ಬಿಟ್ಟರೆಒಂದು ಕಾಲದಲ್ಲಿ ಹೆಚ್ಚು ಗಣಿಗಾರಿಕೆ ನಡೆ ಯುವ ಪ್ರದೇಶ ವೆಂದೇ ಹೆಸರಾಗಿದ್ದ ಚಿಕ್ಕನಾಯಕನಹಳ್ಳಿ ತಾಲೂಕು ಈವರೆಗೂ ಯಾವುದೇ ರೀತಿಯ ಅಭಿವೃದ್ಧಿ ಕಂಡಿಲ್ಲ.
Related Articles
Advertisement
ಚುನಾವಣೆ ಹತ್ತಿರ ಹತ್ತಿರ ಬರುತ್ತಿರುವಂತೆಯೇ ಮತದಾರರ ಓಲೈಕೆಗೆ ಮುಂದಾಗಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವಿಗಾಗಿ ಪಣ ತೊಟ್ಟಿದ್ದಾರೆ. ತಾಲೂಕಿನಲ್ಲಿ ತೆನೆ ಹೊತ್ತ ಮಹಿಳೆ, ಕಮಲ, ಕೈ ಗಳು ಕಮಾಲು ಮಾಡಲು ಹೊರಟಿವೆ.
ಬಿಜೆಪಿಯಲ್ಲಿ ಬಣ ರಾಜಕೀಯ: ಬಿಜೆಪಿ ಯಲ್ಲಿ ಬಣ ರಾಜಕೀಯ ಕೊನೆ ಗೊಂಡಿಲ್ಲ ಮೂಲ ಬಿಜೆಪಿ ಮತ್ತು ವಲಸಿಗ ಬಿಜೆಪಿ ಎನ್ನುವುದು ಇಂದಿಗೂ ಹಾಗೆಯೇ ಇದೆ. ಬಿಜೆಪಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಒಂದು ಗುಂಪು ಹಾಗೂ ಮಾಜಿ ಶಾಸಕ ಹಾಗೂ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್ ಒಂದು ಗುಂಪು ಇದೆ. ಕೆಲವು ಪಂಚಾಯತ್‌ಗಳಲ್ಲಿ ಇಬ್ಬರ ಬೆಂಬಲಿಗರೂ ನಿಂತ್ತಿದ್ದಾರೆ ಇಲ್ಲಿಯ ಬಿಜೆಪಿಯಲ್ಲಿ ನಾಯಕರು ಮತ್ತು ಕಾರ್ಯಕರ್ತರ ನಡುವೆ ಹೊಂದಾಣಿಕೆ ಬಂದಿಲ್ಲ. ಮೊದಲಿನಿಂದಲೂ ಗ್ರಾಮೀಣ ಮಟ್ಟದಲ್ಲಿ ತನ್ನ ಪ್ರಾಭಲ್ಯ ಸಾಧಿಸಿ ಕೊಂಡು ಬಂದಿರುವ ಜೆ.ಸಿ.ಮಾಧುಸ್ವಾಮಿ ಈ ಬಾರಿಯೂ ಅದು ಮುಂದು ವರೆಯುತ್ತದೆ ಎಂದು ಕೊಂಡು ತನ್ನ ಬೆಂಬಲಿಗರನ್ನು ಗೆಲ್ಲಿಸಿ ಕೊಳ್ಳಲು ತೀವ್ರ ಪ್ರಚಾರದಲ್ಲಿ ತೊಡಗಿದ್ದರೆ ಅತ್ತ ಮಾಜಿ ಶಾಸಕಕೆ.ಎಸ್.ಕಿರಣ್ ಕುಮಾರ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಗೋಡೇಕೆರೆ ಎಂ.ಎಂ ಜಗದೀಶ್‌ಅವರೂ ಬಿಜೆಪಿ ಬೆಂಬಲಿಗರನ್ನು ಗೆಲ್ಲಿಸಲು ಪ್ರಚಾರದಲ್ಲಿ ನಿರತರಾಗಿದ್ದಾರೆ. ಇಬ್ಬರು ನಾಯಕರ ಬೆಂಬಲಿಗರು ಯಾರು ಗೆದ್ದರೂ ಅವರು ಬಿಜೆಪಿಯವರು ಆದ್ದರಿಂದಕಮಲಕ್ಕೆ ಹೆಚ್ಚು ಸ್ಥಾನ ಬರುವ ನಿರೀಕ್ಷೆಯಿದೆ ಎನ್ನುವುದು ಬಿಜೆಪಿ ಮುಖಂಡರ ಮಾತಾಗಿದೆ.
ಜೆಡಿಎಸ್ ಬೆಂಬಲಿಗರು ಹೆಚ್ಚು ಸ್ಥಾನದಲ್ಲಿ ಗೆಲುವು: ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚು ಸ್ಥಾನದಲ್ಲಿ ಗೆಲ್ಲಲಿದೆ ಎಂದು ಮಾಜಿ ಶಾಸಕ ಸಿ.ಬಿ. ಸುರೇಶ್ ಬಾಬು ಸಹ ಕಳೆದೆರಡು ತಿಂಗಳಿಂದ ಸಂಘಟನೆಯಲ್ಲಿ ತೊಡಗಿ ಪ್ರತಿ ಗ್ರಾಮಕ್ಕೆದ ಭೇಟಿ ನೀಡಿ ಮತದಾರರ ಓಲೈಕೆಯಲ್ಲಿ ನಿರತರಾಗಿದ್ದುಬಿಜೆಪಿಯಲ್ಲಿನ ಗುಂಪು ಗಾರಿಕೆ ನಮಗೆಅನುಕೂಲವಾಗುತ್ತದೆ ಎನ್ನವ ಅಭಿಪ್ರಾಯವನ್ನು ಜೆಡಿಎಸ್ ಮುಖಂಡರು ವ್ಯಕ್ತಪಡಿಸುತ್ತಿದ್ದಾರೆ.
ಹೆಚ್ಚು ಸ್ಥಾನದ ನಿರೀಕ್ಷೆಯಲ್ಲಿ ಕಾಂಗ್ರೆಸ್: ಚಿಕ್ಕನಾಯಕನಹಳ್ಳಿ ತಾಲೂಕಿನ ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿಗರು ಹೆಚ್ಚು ಸ್ಥಾನಗಳನ್ನು ಗಳಿಸಲಿದ್ದಾರೆ ಎನ್ನುವ ನಿರೀಕ್ಷೆಯನ್ನು ಕಾಂಗ್ರೆಸ್ ಪಕ್ಷದಮುಖಂಡರು ವ್ಯಕ್ತ ಪಡಿಸುತ್ತಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಾಸಲು ಸತೀಶ್‌ಮತ್ತು ಇತರೆ ಮುಖಂಡರು ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದು ತಮ್ಮ ಬೆಂಬಲಿಗರನ್ನು ಗೆಲ್ಲಿಸಲು ಕಾರ್ಯತಂತ್ರ ಎಣೆದಿದ್ದಾರೆ.
ಎರಡನೇ ಹಂತದಲ್ಲಿ 27 ಗ್ರಾಪಂಗಳಿಗೆ ಚುನಾವಣೆ :
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 27 ಗ್ರಾಪಂಗಳಿವೆ. ದಸೂಡಿ, ಹೊಯ್ಸಳಕಟ್ಟೆ, ಗಾಣದಾಳು, ಕೆಂಕೆರೆ, ಯಳನಡು, ಕೋರೆಗೆರೆ, ದೊಡ್ಡ ಎಣ್ಣೇಗೆರೆ, ಹಂದನಕೆರೆ, ಚೌಳಕಟ್ಟೆ, ತಿಮ್ಲಾಪುರ, ದೊಡ್ಡಬಿದರೆ, ಬರಕನಾಳು, ತಿಮ್ಮನಹಳ್ಳಿ , ರಾಮನಹಳ್ಳಿ, ಕಂದಿಕೆರೆ, ಬೆಳಗುಲಿ,ಬರಗೂರು, ಮತ್ತಿಘಟ್ಟ, ಮಲ್ಲಿಗೆರೆ, ಕುಪ್ಪೂರು, ಶೆಟ್ಟಿಕೆರೆ, ದುಗಡೀಹಳ್ಳಿ, ಮುದ್ದೇನಹಳ್ಳಿ, ಹೊನ್ನೇಬಾಗಿ, ತೀರ್ಥಪುರ, ಗೋಡೆಕೆರೆ ಮತ್ತು ಜೆ.ಸಿ.ಪುರ.
ನಮ್ಮದು ಗ್ರಾಮೀಣ ಪ್ರದೇಶದ ಜನರು ಇಷ್ಟ ಪಡುವ ಪಕ್ಷ. ಕಳೆದ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯಆಡಳಿತದಲ್ಲಿ ನಮ್ಮ ಪಕ್ಷ ಅಧಿಕಾರ ಹಿಡಿದಿತ್ತು. ಈಬಾರಿಯೂ ಕ್ಷೇತ್ರದ ಮತದಾರರು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆ.–ಸಿ.ಬಿ.ಸುರೇಶ್ ಬಾಬು, ಮಾಜಿ ಶಾಸಕ
ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಜನವಿರೋಧಿ ನಡೆಯಿಂದ ಕಾಂಗ್ರೆಸ್‌ಗೆ ಹೆಚ್ಚಿನ ಬೆಂಬಲ ಸಿಗಲಿದೆ. ನಾವು ಗ್ರಾಪಂ ಚುನಾವಣೆಯನ್ನು ಸಮರ್ಥವಾಗಿ ಎದುರಿಸುತ್ತಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಗೆಲ್ಲುತ್ತಾರೆ. –ಸಾಸಲು ಸತೀಶ್, ಜಿಲ್ಲಾ ಕಾರ್ಯಾಧ್ಯಕ್ಷ, ಕಾಂಗ್ರೆಸ್
ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರದ ಕೆಲವು ಪಂಚಾಯತ್ ಗಳಲ್ಲಿ 7 ಜನ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 33 ಗ್ರಾಪಂಗಳು ಬರಲಿದ್ದು, 20 ರಿಂದ 22 ಗ್ರಾಪಂಗಳಲ್ಲಿ ಬಿಜೆಪಿ ಪಕ್ಷದ ಬೆಂಬಲಿಗರು ಗೆಲ್ಲುವ ನಿರೀಕ್ಷೆಯಿದೆ. –ಗೋಡೇಕೆರೆ ಎಂ.ಎಂ.ಜಗದೀಶ್, ಬಿಜೆಪಿ ತಾಲೂಕು ಅಧ್ಯಕ್ಷ
–ಚಿ.ನಿ.ಪುರುಷೋತ್ತಮ್