ಕಾಪು : ಕೋವಿಡ್ ವೈರಸ್ ಹರಡುವಿಕೆಯ ಭೀತಿಯ ಹಿನ್ನೆಲೆಯಲ್ಲಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಕಾಪುವಿನ ಮೂರೂ ಮಾರಿಗುಡಿಗಳಲ್ಲೂ ಆಟಿ ತಿಂಗಳಲ್ಲಿ ನಡೆಯುವ ಕಾಲಾವಧಿ ಆಟಿ ಮಾರಿಪೂಜೆಯು ಮಂಗಳವಾರ ರಾತ್ರಿ ಪ್ರಾರಂಭಗೊಂಡು ಬುಧವಾರ ಸಂಜೆ ಸಂಪನ್ನಗೊಂಡಿತು.
ಕಾಪು ಶ್ರೀ ಹಳೇ ಮಾರಿಗುಡಿ, ಶ್ರೀ ಹೊಸ ಮಾರಿಗುಡಿ ಮತ್ತು ಶ್ರೀ ಮೂರನೇ ಮಾರಿಗುಡಿಯಲ್ಲಿ ಜರಗಿದ ಕಾಲಾವಽ ಆಟಿ ಮಾರಿಪೂಜೆಯನ್ನು ಕೊರೊನಾ ವೈರಸ್ ಹರಡುವಿಕೆಯ ಭೀತಿಯ ಹಿನ್ನಲೆಯಲ್ಲಿ ಸಾಂಪ್ರಧಾಯಿಕ ಪೂಜೆ ಮತ್ತು ಹರಕೆ ಸಲ್ಲಿಕೆಗೆ ಮಾತ್ರಾ ಸೀಮಿತಗೊಳಿಸಲಾಗಿತ್ತು. ಆಡಂಭರವಿಲ್ಲದೇ ಜಾತ್ರೆ ರಹಿತವಾಗಿ ಸರಳವಾಗಿ ನಡೆಸಲಾಯಿತು. ಸರಕಾರದ ಕೋವಿಡ್ ಮುನ್ನೆಚ್ಚರಿಕಾ ನಿಯಮಗಳ ಪಾಲನೆಯ ಹಿನ್ನೆಲೆಯಲ್ಲಿ ಮಾರಿಪೂಜೆಯ ಸಂದರ್ಭದಲ್ಲಿ ಭಕ್ತರು ವಿರಳ ಸಂಖ್ಯೆಯಲ್ಲಿ ದೇವಿಯ ದರ್ಶನ ಪಡೆಯಲು ಆಗಮಿಸಿದ್ದು ವಿವಿಧ ಹರಕೆಗಳನ್ನು ಸಲ್ಲಿಸಿದರು.
ಆಟಿ ಮಾರಿಪೂಜೆಯ ವೇಳೆ ಮೂರೂ ಮಾರಿಗುಡಿಗಳಲ್ಲಿ ಸಾಮಾಜಿಕ ಅಂತರ ಪಾಲನೆ, ಸ್ಯಾನಿಟೈಸೇಷನ್ ಮತ್ತು ಥರ್ಮಲ್ ಟೆಸ್ಟ್‌ಗೆ ಆದತೆ ನೀಡಲಾಗಿದ್ದು ಯಾವುದೇ ರೀತಿಯ ನೂಕುನುಗ್ಗಲು, ಗೊಂದಲವಿಲ್ಲದೇ ಆಗಮಿಸಿದ ಭಕ್ತಾಽಗಳಿಗೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ಹಳೇ ಮಾರಿಗುಡಿಯ ಆಡಳಿತ ಮೊಕ್ತೇಸರ ಪ್ರಸಾದ್ ಜಿ. ಶೆಣೈ, ಹೊಸ ಮಾರಿಗುಡಿಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ, ಮೂರನೇ ಮಾರಿಗುಡಿಯ ಕಾರ್ಯನಿರ್ವಹಣಾಽಕಾರಿ ಸುಽರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಹಣ್ಣು ಕಾಯಿಗೆ ಪರದಾಟ, ಕೋಳಿ ಅಂಗಡಿಗಳಲ್ಲಿ ರಶ್ : ಆಟಿ ಮಾರಿಪೂಜೆಯ ಸಂದರ್ಭ ಜಾತ್ರೆ, ಅಂಗಡಿಗಳನ್ನು ತೆರೆಯಲು ಅವಕಾಶ ನೀಡದ ಪರಿಣಾಮ ಭಕ್ತಾಽಗಳು ಹಣ್ಣು ಕಾಯಿ ಸೇವೆಗೆ ಪರದಾಡುವಂತಾಯಿತು. ಮಾರಿಯಮ್ಮ ದೇವಿಯ ಸನ್ನಿಽಯಲ್ಲಿ ಮಾರಿಪೂಜೆಯ ಸಂದರ್ಭ ಕೋಳಿ ಹರಕೆ ಪ್ರಮುಖ ಸೇವೆಯಾಗಿದ್ದರೂ, ಕೋವಿಡ್ ಕಾರಣದಿಂದ ಸರಕಾರದ ನಿಯಮಾವಳಿಗಳನ್ನು ಪಾಲಿಸುವ ನಿಟ್ಟಿನಲ್ಲಿ ಮಾರಿಗುಡಿಗಳ ಸುತ್ತಮುತ್ತ ಕೋಳಿ ಅಂಗಡಿಗಳನ್ನು ತೆರೆಯಲು ಅವಕಾಶ ನಿರಾಕರಿಸಲಾಗಿದ್ದು ಭಕ್ತರು ಪರದಾಡುವಂತಾಯಿತು. ಮಾಮೂಲಿನ ಕೋಳಿ ಅಂಗಡಿಗಳಲ್ಲಿ ಕೋಳಿ ಮಾಂಸ ಖರೀದಿಗಾಗಿ ಫುಲ್ ರಶ್ ಕಂಡು ಬಂದಿದೆ.