ನೆಲಮಂಗಲ: ತಾಲೂಕಿನ ತ್ಯಾಮಗೊಂಡ್ಲು ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಗರ ಗೆಲುವು, ಪಕ್ಷದ ಬಲವರ್ಧನೆ ಹಾಗೂ ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷದ ಶಾಸಕರ ಆಯ್ಕೆಗೆ ಶಕ್ತಿಯಾಗಿದೆ ಎಂದು ವಿಧಾ ನ ಪರಿಷತ್ ಮಾಜಿ ಸದಸ್ಯ ಬಿಎಂಎಲ್ ಕಾಂತರಾಜು ಅಭಿಪ್ರಾಯಪಟ್ಟರು.
ನಗರದ ಖಾಸಗಿ ಹೋಟೆಲ್ ಸಭಾಂಗಣ ದಲ್ಲಿ ಬ್ಲಾಕ್ ಕಾಂಗ್ರೆಸ್ ಘಟಕದಿಂದ ಎಐಸಿಸಿ ನೂತನ ಅಧ್ಯಕ್ಷ ಮಲ್ಲಕಾರ್ಜುನ್ ಖರ್ಗೆಅವರ ಅಭಿನಂದನಾ ಸಮಾರಂಭದ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ದ ಅವರು, ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆ ಆರಂಭವಾಗಿದ್ದು, ವೀಕ್ಷಕ ಎನ್. ಶ್ರೀನಿವಾಸ್ ಹಾಗೂ ಪಕ್ಷದ ಎಲ್ಲಾ ವಿಭಾಗಗಳ ಪದಾಧಿಕಾರಿಗಳ ಸಂಘಟನೆಯ ಚತುರತೆಯಿಂದ ಸ್ಥಳೀಯ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಪಡೆ ಯುತ್ತಿದ್ದು, ಮುಂದಿನ ವಿಧಾನಸಭಾ ಚುನಾವಣೆಗೆ ಸಾಕ್ಷಿಯಾಗಿದೆ ಎಂದರು.
ಸ್ಥಳೀಯ ಮುಖಂಡರಿಗೆ ಅಭಿನಂದನೆ: ತ್ಯಾಮಗೊಂಡ್ಲು ಮೊದಲು ಬೇರೆ ಪಕ್ಷದ ಪ್ರಾಬಲ್ಯವನ್ನು ಪಡೆದುಕೊಂಡಿತ್ತು. ಆದರೆ, ಈ ಬಾರಿ ಕಾಂಗ್ರೆಸ್ ಪಕ್ಷದ ಬೆಂಬಲಿತ 15 ಸ್ಥಾನ ಸಿಕ್ಕಿದ್ದು, ಇದಕ್ಕಾಗಿ ಹಗಲು-ರಾತ್ರಿ ಶ್ರಮಿಸಿದ ಕೆಪಿಸಿಸಿ ವೀಕ್ಷಕ ಶ್ರೀನಿವಾಸ್ ಹಾಗೂ ಬ್ಲಾಕ್ ಕಾಂಗ್ರೆಸ್, ಯೂತ್ ಕಾಂಗ್ರೆಸ್, ಮಹಿ ಳಾ ಕಾಂಗ್ರೆಸ್ ಹಾಗೂ ಸ್ಥಳೀಯ ಮುಖಂಡರಿಗೆ ಅಭಿನಂದನೆ ತಿಳಿಸುವ ಮೂಲಕ ಧನ್ಯವಾ ದ ತಿಳಿಸಬೇಕಾಗಿದೆ ಎಂದರು.
ರಾಷ್ಟ್ರಾಧ್ಯಕ್ಷರ ಸ್ವಾಗತಕ್ಕೆ ಸಿದ್ಧತೆ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎನ್. ಶ್ರೀನಿವಾಸ್ ಮಾತ ನಾಡಿ, ತ್ಯಾಮಗೊಂಡ್ಲು ಗ್ರಾಪಂ ಚುನಾವಣೆ ಯಲ್ಲಿ 21 ರಲ್ಲಿ 15 ಕಾರ್ಯಕರ್ತರು ಗೆಲುವು ಪಡೆದಿದ್ದು, ಬಿಜೆಪಿ ಹಾಗೂ ಜೆಡಿಎಸ್ ಕೇವಲ 2 ಹಾಗೂ 4ಕ್ಕೆ ಕುಸಿದಿದೆ. ಇದರಿಂದಲೇ ನಾವು ಕಾಂಗ್ರೆಸ್ ಬಲವನ್ನು ತಿಳಿಯಬಹುದಾಗಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಬೆನ್ನೆಲುಬಾಗಿ ನಾವೆಲ್ಲರೂ ನಿಂತರೆ ನಮ್ಮ ಪಕ್ಷದ ಅಲೆಯನ್ನು ಕಡಿಮೆ ಮಾಡಲು ಯಾವ ಪಕ್ಷದಿಂದಲೂ ಸಾಧ್ಯವಿಲ್ಲ. ನ.6ರಂದು ಬೆಂಗಳೂರಿನ ನಮ್ಮ ಪಕ್ಷದ ರಾಷ್ಟ್ರಾಧ್ಯಕ್ಷರ ಸ್ವಾಗತಕ್ಕೆ ಕ್ಷೇತ್ರದಿಂದ 5 ಸಾವಿರ ಜನರು ಹೋಗುತ್ತಿದ್ದು, ಅವರಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡಲಾಗುತ್ತಿದೆ. ಈ ಸಮಾರಂಭದಿಂದ ಕಾರ್ಯಕರ್ತರಿಗೆ ಮತ್ತಷ್ಟು ಬಲಸಿಗಲಿದೆ ಎಂದರು.
ವಿಜೇತ ಸದಸ್ಯರಿಗೆ ಅಭಿನಂದನೆ: ತ್ಯಾಮಗೊಂಡ್ಲು ಚುನಾವಣೆಯಲ್ಲಿ ಗೆಲುವು ಪಡೆದ 15 ಕಾಂಗ್ರೆಸ್ ಬೆಂಬಲಿತ ವಿಜೇತ ಸದಸ್ಯರಿಗೆ ಎನ್. ಶ್ರೀನಿವಾಸ್ ಅಭಿನಂದನೆ ಸಲ್ಲಿಸಿ ಸಿಹಿಹಂಚಿ ಸಂಭ್ರಮಿಸುವ ಮೂಲಕ ಪಕ್ಷ ಮತ್ತಷ್ಟು ಬಲಗೊಳಿಸುವಂತೆ ಸಲಹೆ ನೀಡಿದರು.
ಕೆಪಿಸಿಸಿ ಸದಸ್ಯ ಖಲಿಂವುಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜು, ರಂಗಸ್ವಾಮಿ, ಜಗದೀಶ್, ಪುರಸಭೆ ಮಾಜಿ ಅಧ್ಯಕ್ಷ ನಾರಾಯ ಣಗೌಡ, ಎನ್‌ಪಿಎ ಮಾಜಿ ಅಧ್ಯಕ್ಷ ಸಿ.ಆರ್ ಗೌಡ, ಯೂತ್ ಕಾಂಗ್ರೆಸ್ ಅಧ್ಯಕ್ಷ ನಾರಾಯ ಣಗೌಡ, ಮಹಿಳಾ ಕಾಂಗ್ರೆಸ್‌ನ ನಾಗರತ್ನಮ್ಮ, ಬೂದಿಹಾಳ್ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜು, ಮುಖಂಡ ಕೆ. ಕೃಷ್ಣಪ್ಪ, ಚಿಕ್ಕಣ್ಣ ಹಾಗೂ ತ್ಯಾಮಗೊಂಡ್ಲು ವಿಜೇತ ಸದಸ್ಯರು ಇದ್ದರು.
ಕಾರ್ಯಕರ್ತರಲ್ಲಿ ಹೆಚ್ಚಿದ ಉತ್ಸಾಹ: ಕ್ಷೇತ್ರದಲ್ಲಿ ಕಾಂಗ್ರೆಸ್ ಬಲ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಶಕ್ತಿ ನೀಡುವ ಕೆಲಸವನ್ನು ಎಲ್ಲರೂ ಮಾಡ ಬೇಕು. ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಸ್ವಾಗತ ಸಮಾರಂಭಕ್ಕೆ ಎನ್. ಶ್ರೀನಿವಾಸ್ ನೇತೃತ್ವದಲ್ಲಿ ತಾಲೂಕಿನ 5 ಸಾವಿರ ಜನರು ಹೋಗುತ್ತಿರುವುದು ಸ್ವಾಗತಾರ್ಹ. ಇದರಿಂದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಬಿಎಂಎಲ್ ಕಾಂತರಾಜು ಹೇಳಿದರು.