Advertisement

ಉಪ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

05:14 PM Mar 26, 2021 | Team Udayavani |

ಕೊರಟಗೆರೆ: ನಮಗೆ ಯಾವುದೇ ಮೂಲ ಸೌಕರ್ಯಗಳಿಲ್ಲ. ಕೇವಲ ಚುನಾವಣೆಬಂದಾಗ ನಮ್ಮ ನೆನಪು ಮಾಡಿಕೊಳ್ಳುತ್ತಾರೆ. ಇದು ಯಾವ ನ್ಯಾಯ? ನಮಗೆ ಸೌಕರ್ಯಗಳನ್ನು ಕಲ್ಪಿಸದಿರುವ ಪಟ್ಟಣ ಪಂಚಾಯತಿಗೆ ನಾವೇಕೆ ಮತ ಹಾಕಬೇಕುಎಂದು ಧ್ವನಿ ಎತ್ತಿರುವ ಕಾವಲಬೀಳು 20 ಕುಟುಂಬ 4ನೇ ವಾರ್ಡ್‌ ಉಪಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.

Advertisement

ಹಲವು ದಶಕಗಳಿಂದಲೂ ನಾವುಕಾವಲಬೀಳು ಗ್ರಾಮದಲ್ಲಿ ವಾಸವಿದ್ದೇವೆ.ಆದರೆ, ಸಾರ್ವತ್ರಿಕ ಚುನಾವಣೆಗಳುಬಂದಾಗಷ್ಟೇ ನಮಗೆ ಭರವಸೆಗಳಮಹಾಪೂರವನ್ನೇ ಹರಿಸಿ ನಂತರಕಣ್ಮರೆಯಾಗುವ ಜನಪ್ರತಿನಿಧಿಗಳಅವಶ್ಯಕತೆಯಿಲ್ಲ. ಯಾರೊಬ್ಬರೂ ನಮ್ಮ ಗ್ರಾಮಕ್ಕೆ ಭೇಟಿ ನೀಡ ಬೇಡಿ. ನಾವು ಮತದಾನವನ್ನು ಬಹಿಷ್ಕರಿಸಿದ್ದೇವೆ ಎಂದು ಹೇಳಿ ಭಿತ್ತಿಪತ್ರವನ್ನು ಹಾಕಿ ಇಲ್ಲಿನ ಸ್ಥಳೀಯರು ಪಪಂ ಉಪಚುನಾವಣೆ ಬಹಿಷ್ಕರಿಸಿದ್ದಾರೆ.

ಈಗ ನಡೆಯುತ್ತಿರುವ ಉಪ ಚುನಾವಣೆಯಲ್ಲಿ 1,283 ಮತದಾರರುಇದ್ದು, ಇದರಲ್ಲಿ ಕಾವಬೀಳು ವಾಸಿಗಳು100ಕ್ಕೂ ಅಧಿಕ ಮತದಾರರಿದ್ದಾರೆ. ಅಗತ್ಯಕುಡಿಯುವ ನೀರು, ಬೀದಿ ದೀಪ ಸೇರಿಬಹುಮುಖ್ಯವಾಗಿ ಗ್ರಾಮಕ್ಕೆ ಸೂಕ್ತ ರಸ್ತೆಯನ್ನುಕಲ್ಪಿಸದಿರುವುದರ ವಿರುದ್ಧ ಘೋಷಣೆ ಕೂಗಿದರು. ಗ್ರಾಮದ ಮುಖಂಡ ಕೃಷ್ಣಪ್ಪ, ತಿಮ್ಮಣ್ಣ, ಇಸ್ಮಾಯಿಲ್, ಮುಖಂಡ ರಮೇಶ್‌, ಸೋಮನಾಥ್‌, ಕೆ.ಆರ್‌.ಮಂಜುನಾಥ್‌ ಲಕ್ಷ್ಮೀ ನಾರಾಯಣ್‌ ಇದ್ದರು.

ಕಾವಲಬೀಳು ರಸ್ತೆ ಅಭಿವೃದ್ಧಿಗೆ ಈ ಹಿಂದೆ ಇದ್ದ ಮೈತ್ರಿ ಸರ್ಕಾರದಲ್ಲಿ ಶಾಸಕ ಡಾ.ಜಿ ಪರಮೇಶ್ವರ ನೀಡಿದ್ದ 5 ಕೋಟಿ ರೂ.ಅನುದಾನದಲ್ಲಿ 1 ಕೋಟಿ ಮೀಸಲಿಡಲಾಗಿತ್ತು. ಕೋವಿಡ್ ಕಾರಣದಿಂದ ಅನುದಾನವನ್ನು ವಾಪಸ್‌ ಪಡೆಯಲಾಗಿತ್ತು. ಈಗ ನಾನು ಸ್ಥಳಕ್ಕೆ ಭೇಟಿ ನೀಡಿದ್ದು, ವರದಿಯನ್ನು ಮೇಲಾಧಿಕಾರಿಗಳಿಗೆ ತಿಳಿಸುತ್ತೇನೆ. ಲಕ್ಷ್ಮಣ್‌ ಕುಮಾರ್‌, ಪಪಂ ಮುಖ್ಯಾಧಿಕಾರಿ

ಕಾವಲಬೀಳು ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ತೆಗ್ಗು-ದಿಣ್ಣೆಗಳಿಂದ ಕೂಡಿದ್ದು,ವಾಹನಗಳ ಓಡಾಡುವುದಕ್ಕೂ ತುಂಬಾ ಕಷ್ಟಕರವಾಗಿದೆ. ಮುಂದಿನದಿನಗಳಲ್ಲಿ ಮೂಲಭೂತ ಸೌಕರ್ಯ ನೀಡುವುದರ ಮೂಲಕ ಗಮನ ಹರಿಸುತ್ತೇವೆ. ಭಾರತಿ, ಪಪಂ ಉಪಾಧ್ಯಕ್ಷೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next