ಹುಣಸೂರು: ಹುಣಸೂರು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಗೊಂಡಿದ್ದು, ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.
ನಗರ ಸಭೆಯು 31 ವಾರ್ಡ್ ಹೊಂದಿದ್ದು, ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-14, ಜೆಡಿಎಸ್ -7, ಬಿಜೆಪಿ- 3 ಹಾಗೂ ಎಸ್‌ಡಿಪಿಐ 2 ಸ್ಥಾನ ಮತ್ತು ಪಕ್ಷೇತರರಾಗಿ 5 ಮಂದಿ ಆಯ್ಕೆಯಾಗಿದ್ದಾರೆ. ಕಳೆದ ಫೆಬ್ರವರಿ 11 ರಂದು ಚುನಾಯಿತರಾದ ಸದಸ್ಯರು ಅಂದಿನಿಂದಲೂ ನಗರಸಭೆಯಲ್ಲಿ ಮತದಾರರ ಕೆಲಸ ಮಾಡಿಕೊಡಲಾಗದೆಹತಾಶರಾಗಿದ್ದರು. ಇದೀಗ ಮೀಸಲಾತಿ ಪ್ರಕಟಗೊಂಡಿದ್ದು, ಹುರುಪಿನಿಂದ ಓಡಾಡಲಾರಂಭಿಸಿದ್ದಾರೆ.
ಕಾಂಗ್ರೆಸ್‌ಗೆ ಶಾಸಕ ಮಂಜುನಾಥ್ ಅವರ ಮತ ಸೇರಿದರೆ 15 ಸ್ಥಾನವಾಗಲಿದೆ. ಜೆಡಿಎಸ್‌ನ 7 ಸಾ §ನ, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಸಂಸದ ಪ್ರತಾಪ ಸಿಂಹ ಮತ ಸೇರಿದರೆ ಬಿಜೆಪಿಗೆ 5 ಸ್ಥಾನವಾಗಲಿದೆ. ಸಂಸದ ಹಾಗೂ ಶಾಸಕರು ಸೇರಿದರೆ ಒಟ್ಟು 34 ಸ್ಥಾನಕ್ಕೇರಲಿದ್ದು, ಬಹು ಮತಕ್ಕೆ 18 ಮತ ಬೇಕಿದೆ. ಆದರೆ, ಪಕ್ಷೇತ ರರ ಪೈಕಿ ಈಗಾಗಲೇ ಇಬ್ಬರು ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿದ್ದು, ಕಾಂಗ್ರೆಸ್ ಅಧ್ಯಕ್ಷಗಾದಿ ಹಿಡಿಯುವ ಸಾಧ್ಯತೆ ಇದೆ.
ಅಧ್ಯಕ್ಷ ಆಕಾಂಕ್ಷಿಗಳು: ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಕಾಂಗ್ರೆಸ್‌ನ 6 ಮಹಿಳಾ ಸದಸ್ಯರು ಆಕಾಂಕ್ಷಿಗಳಾಗಿದ್ದಾರೆ. 24ನೇ ವಾರ್ಡ್‌ನ ಗೀತಾ, 3ನೇ ವಾರ್ಡ್‌ನ ಅನುಷಾ, 4ನೇ ವಾರ್ಡ್‌ನ ಭವ್ಯಾ, 29ನೇ ವಾರ್ಡ್‌ನ ಪ್ರಿಯಾಂಕ ತೋಮಸ್, 15ನೇ ವಾರ್ಡ್‌ನ ಸೌರಭಾ, 9ನೇ ವಾರ್ಡ್‌ನ ಸಮೀನಾ ಪರ್ವಿನ್ ನಡುವೆ ಪ್ರಬಲ ಪೈಪೋಟಿ ಎದುರಾಗಿದೆ.
ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು: ಉಪಾಧ್ಯಕ್ಷ ಸ್ಥಾನಕ್ಕಾಗಿ 6ನೇ ವಾರ್ಡ್‌ನ ದೇವನಾಯಕ (ಕಾಂಗ್ರೆಸ್), 1ನೇ ವಾರ್ಡ್‌ನ ದೇವರಾಜ (ಜೆಡಿಎಸ್), 2ನೇ ವಾರ್ಡ್‌ನ ಆಶಾಕೃಷ್ಣ (ಪಕ್ಷೇತರ) ಪರಿಶಿಷ್ಟಪಂಗಡಕ್ಕೆ ಸೇರಿದವರಾಗಿದ್ದು, ಕಾಂಗ್ರೆಸ್-ಜೆಡಿಎಸ್ ನಡುವೆ ಆಂತರಿಕ ಒಪ್ಪಂದವಾದಲ್ಲಿ ದೇವರಾಜ್ ಅಥವಾದೇವನಾಯಕನಿರಾಯಸವಾಗಿ ಉಪಾಧ್ಯಕ್ಷರಾ ಗುವ ಸಾಧ್ಯತೆ ಇದೆ. ಈ ನಡುವೆ ಮೀಸಲಾತಿಯ ಬಗ್ಗೆ ಅಪಸ್ವರವೂ ಕೇಳಿ ಬರುತ್ತಿದ್ದು, ನ್ಯಾಯಾಲಯದ ಮೆಟ್ಟಿಲೇರಲೂ ಕೆಲವರು ಚಿಂತನೆ ನಡೆಸಿದ್ದಾರೆ.
ಸಾಮಾಜಿಕ ನ್ಯಾಯದಡಿ ಕಾಂಗ್ರೆಸ್‌ಗೆ ಅಧಿಕಾರ : ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವ ವಿಶ್ವಾಸವಿದೆ.ಈಗಾಗಲೇ ಮೂವರು ಪಕ್ಷೇತರರು ಕಾಂಗ್ರೆಸ್ ಬೆಂಬಲಿಸಿದ್ದಾರೆ.ಇನ್ನೂ ಕೆಲವರು ಬೆಂಬಲ ನೀಡುವ ನಿರೀಕ್ಷೆಯಲ್ಲಿದ್ದೇನೆ. ಈ ಬಾರಿ ಸಾಮಾಜಿಕ ನ್ಯಾಯದಡಿ ಅಧಿಕಾರ ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದೇನೆ. ನೂತನ ಆಡಳಿತ ಮಂಡಳಿಯಿಂದ ನಾಗರಿಕರಿಗೆ ಒಳ್ಳೆಯ ಆಡಳಿತ ನೀಡುವ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುವುದು ಎಂದು ಶಾಸಕ ಎಚ್.ಪಿ.ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
-ಸಂಪತ್ ಕುಮಾರ್